ಫ್ಯಾಕ್ಟ್‌ಚೆಕ್: ಕಾಂಗ್ರೆಸ್ ವಕ್ತಾರೆ ರಾಹುಲ್ ಗಾಂಧಿಯನ್ನು ‘ಡೋಂಗಿ ಹಿಂದೂ’ ಎಂದು ಹೇಳಿದ್ದು ನಿಜವೇ?
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶ್ರೀನಾಟೆ ಅವರು ‘ಡೋಂಗಿ ಹಿಂದೂ’ ಎಂದು ಕರೆದಿದ್ದಾರೆ ಎನ್ನಲಾದ ವಿಡಿಯೊ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ‘ಭಾರತ್ ಜೋಡೋ’ ಯಾತ್ರೆಯ ಭಾಗವಾಗಿ ಮಧ್ಯಪ್ರದೇಶದ ಉಜ್ಜೈನಿಗೆ ಭೇಟಿ ನೀಡಿದ್ದ ರಾಹುಲ್, ಮಹಾಕಾಳ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ್ದರು. ‘ಸುಪ್ರಿಯಾ ಅವರು ಈಗಲಾದರೂ ಧೈರ್ಯದಿಂದ ತಮ್ಮ ನಾಯಕರ ಬಗ್ಗೆ ಮಾತನಾಡಿದ್ದಾರೆ’ ಎಂದು ಜಾಲತಾಣ ಬಳಕೆದಾರರು ಪ್ರಶಂಸಿಸಿದ್ದಾರೆ.
Rahul Gandhi Offers Prayers At Mahakal Temple In Ujjain.#TNShorts #RahulGandhi #Ujjain pic.twitter.com/cnZhYvAP2o
— TIMES NOW (@TimesNow) November 30, 2022
ವೀಡಿಯೊ ಎರಡು ಪ್ರತ್ಯೇಕ ಕ್ಲಿಪ್‌ಗಳನ್ನು ಒಳಗೊಂಡಿದೆ. ಒಂದರಲ್ಲಿ, ರಾಹುಲ್ ಗಾಂಧಿಯವರು ಮಹಾಕಾಲ್ ದೇವಾಲಯದಲ್ಲಿ ಕ್ಯಾಮೆರಾಗಳ ಮುಂದೆ ಪ್ರಾರ್ಥನೆ ಸಲ್ಲಿಸುತ್ತಿರುವುದನ್ನು ಕಾಣಬಹುದು. ಮತ್ತೊಂದರಲ್ಲಿ @ಸುಪ್ರಿಯಾ ಶ್ರೀನಾಟೆ ಮಾತನಾಡುತ್ತಿರುವುದನ್ನು ತೋರಿಸಲಾಗಿದೆ. ಈ ವಿಡಿಯೋವನ್ನು ಹಂಚಿಕೊಂಡಿರುವ ಸಾಮಾಜಿಕ ಮಾಧ್ಯಮದ ಬಳಕೆದಾರರು ಅಂತಿಮವಾಗಿ ನಿಮ್ಮ ಬಾಸ್ (ರಾಹುಲ್ ಗಾಂಧಿ) ಡೋಂಗಿ ಹಿಂದೂ ವಿರುದ್ಧ ಮಾತನಾಡಲು ಕೊನೆಗೂ ಧೈರ್ಯವನ್ನುಗಿ ತೋರಿದ್ದಕ್ಕಾಗಿ ಸುಪ್ರಿಯಾ ಶ್ರೀನಾಟೆಜೀ ಗೆ ಅಭಿನಂದನೆಗಳು ಎಂದು ಬರೆಯಲಾಗಿದೆ.
Congratulations @SupriyaShrinate Ji for finally mustering the courage to speak against your boss and a dhongi hindu @RahulGandhi .. more power to you !! pic.twitter.com/tVHtfaEllP
— Yo Yo Funny Singh (@moronhumor) November 30, 2022
ಹಾಗಿದ್ದರೆ ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶ್ರೀನಾಟೆ ಅವರು ಮಾತನಾಡಿದ್ದಾರೆ ಎಂದು ವಿಡಿಯೋ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್:
ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಸುಪ್ರಿಯಾ ಶ್ರೀನಾಟೆ ಅವರು ಹೇಳಿದ್ದಾರೆ ಎನ್ನಲಾದ ಹೇಳಿಕೆ ನಿಜವೇ ಎಂದು ಪರಿಶೀಲಿಸಿದಾಗ,ಸುಪ್ರಿಯಾ ಅವರು ‘ಡೋಂಗಿ ಹಿಂದೂ’ ಎಂದು ಕರೆದಿದ್ದು ಪ್ರಧಾನಿ ನರೇಂದ್ರ ಮೋದಿ ಅವರನ್ನೇ ಹೊರತು ರಾಹುಲ್ ಗಾಂಧಿ ಅವರನ್ನು ಅಲ್ಲ ಎಂದು ‘ಇಂಡಿಯಾ ಟುಡೇ’ ವರದಿ ಮಾಡಿದೆ.
.@RahulGandhi offers prayers at Mahakaleshwar Temple in Ujjain; BJP slams RaGa's Mahakal visit | #GujaratElections #GujaratElections2022 #ITVideo | @PoulomiMSaha pic.twitter.com/JKBF17jqRL
— IndiaToday (@IndiaToday) November 30, 2022
ರಾಹುಲ್ ಗಾಂಧಿಯವರ ಇತ್ತೀಚಿನ ಮಹಾಕಾಲ್ ದೇವಾಲಯ ಭೇಟಿಯ ಕುರಿತು ಸರ್ಚ್ ಮಾಡಿದಾಗ, ನವೆಂಬರ್ 29 ಮತ್ತು 30 ರಂದು, ನ್ಯೂಸ್ 18 ಎಂಪಿ-ಛತ್ತೀಸ್‌ಗಢ ಮತ್ತು ಇಂಡಿಯಾ ಟುಡೆ ಸುದ್ದಿವಾಹಿನಿಗಳು ವೈರಲ್ ವೀಡಿಯೊದ ಅದೇ ಕ್ಲಿಪ್ ಅನ್ನು ಬಳಸಿಕೊಂಡು ವರದಿಗಳನ್ನು ಪ್ರಕಟಿಸಿದವು, ಅಲ್ಲಿ ಗಾಂಧಿ ಪ್ರಾರ್ಥನೆ ಮಾಡುವುದನ್ನು ಕಾಣಬಹುದು.

ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಅವರು ರಾಹುಲ್ ಗಾಂಧಿ ಬಗ್ಗೆ ಡೋಂಗಿ ಹಿಂದೂ ಎಂದು ಮಾತನಾಡಿರುವ ಬಗ್ಗೆ ಸರ್ಚ್ ಮಾಡಿದಾಗ, ನವೆಂಬರ್ 11, 2021 ರಂದು ಅವರ ಅಧಿಕೃತ ಫೇಸ್‌ಬುಕ್ ಪುಟದಲ್ಲಿ ಅಪ್‌ಲೋಡ್ ಮಾಡಿದ ವೀಡಿಯೊ ಲಭ್ಯವಾಗಿದೆ. ಸುಪ್ರಿಯಾ ಅವರು ‘ಆಜ್‌ತಕ್’ ಟಿ.ವಿ ಸುದ್ದಿವಾಹಿನಿಯ ಚರ್ಚೆಯಲ್ಲಿ ಭಾಗಿಯಾಗಿದ್ದಾಗ ಈ ಕುರಿತು ಮಾತನಾಡಿದ್ದರು. ಚರ್ಚೆಯ ವಿಡಿಯೊದಲ್ಲಿ ರಾಹುಲ್ ಉಲ್ಲೇಖವಿಲ್ಲ. ಮೋದಿ ಅವರು ಇತ್ತೀಚೆಗೆ ದೇವಸ್ಥಾನಕ್ಕೆ ಹೋಗಿದ್ದ ವಿಚಾರವಾಗಿ ನಡೆಯುತ್ತಿದ್ದ ಚರ್ಚೆಯಲ್ಲಿ ಭಾಗಿಯಾಗಿದ್ದ ಸುಪ್ರಿಯಾ, ‘ಲೆದರ್‌ಶೂ ಧರಿಸಿ ಪ್ರದಕ್ಷಿಣೆ ಹಾಕುವ ಅವರು ನಮಗೆ ಹಿಂದೂ ಧರ್ಮದ ಪಾಠ ಮಾಡುತ್ತಾರೆ. ಬೆಲೆ ಏರಿಕೆ, ನಿರುದ್ಯೋಗ ವಿಚಾರಗಳನ್ನು ಮರೆಮಾಚಲು ಈ ರೀತಿ ಮಾಡುತ್ತಿದ್ದಾರೆ’ ಎಂದು ಹೇಳಿದ್ದ ಮಾತುಗಳು ಮೂಲ ವಿಡಿಯೊದಲ್ಲಿವೆ.
ಒಟ್ಟಾರೆಯಾಗಿ ಹೇಳುವುದಾದರೆ, ವಿಡಿಯೊದಲ್ಲಿ ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ರವರು ‘ಮೋದಿ’ ಹೆಸರನ್ನು ಅವರು ಉಲ್ಲೇಖಿಸಿದ್ದಾರೆ. ಆದರೆ ಮೋದಿ ಹೆಸರನ್ನು ತೆಗೆದು, ರಾಹುಲ್ ಗಾಂಧಿ ಅವರ ಹೆಸರಿನೊಂದಿಗೆ ಜೋಡಿಸಿ ವಿಡಿಯೊವನ್ನು ಮರುಸೃಷ್ಟಿಸಲಾಗಿದೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಮೋದಿಯವರ ಮೊರ್ಬಿ ಭೇಟಿಗೆ ₹30 ಕೋಟಿ ಖರ್ಚಾಗಿದ್ದು ನಿಜವೇ?

