ಫ್ಯಾಕ್ಟ್‌ಚೆಕ್: ಸೋನಿಯಾ ಗಾಂಧಿ ಜಗತ್ತಿನಾದ್ಯಂತ 28,000 ಹೋಟೆಲ್ ಹೊಂದಿರುವುದು ನಿಜವೇ?

ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಯವರಿಗೆ ಸಂಬಂಧಿಸಿದಂತೆ ಪೋಸ್ಟ್‌ವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದು,  ಜಗತ್ತಿನಾದ್ಯಂತ ಸೋನಿಯಾ ಗಾಂಧಿಯವರು 28,000 ಕ್ಕೂ ಹೆಚ್ಚು ಹೋಟೆಲ್‌ಗಳನ್ನು ಹೊಂದಿದ್ದಾರೆ ಎಂದು ಬರೆಯಲಾಗಿದೆ.

ಪೋಸ್ಟ್‌ನಲ್ಲಿ ಮಾಡಲಾಗಿರುವ ಪ್ರತಿಪಾದಿನೆಯ ಪ್ರಕಾರ “ಇಟಲಿಯ 1000 ಹೋಟೆಲ್‌ಗಳ ಪೈಕಿ 753 ಹೋಟೆಲ್‌ಗಳನ್ನು ಸೋನಿಯಾ ಗಾಂಧಿ ಹೊಂದಿದ್ದಾರೆ, ಇದರಲ್ಲಿ ಒಂದು ಹೋಟೆಲ್‌ನ ಮೌಲ್ಯ ಸುಮಾರು 982 ಸಾವಿರ ಕೋಟಿಗಳು ಮತ್ತು ಸೋನಿಯಾ ಗಾಂಧಿ ಅವರು ಪ್ರಪಂಚದಾದ್ಯಂತ 28,000 ಹೋಟೆಲ್‌ಗಳನ್ನು ಹೊಂದಿದ್ದಾರೆ” ಎಂದು ಪೋಸ್ಟ್ ಹೇಳಿಕೊಂಡಿದೆ.

ಪ್ರಾಮಾಣಿಕ ಪ್ರಧಾನಿಯನ್ನು ಕಳ್ಳ ಎಂದು ಹೇಳುವ ಚಮಚಾಗಳೇ ನಿಮ್ಮ ರಾಜಮಾತೆಯನ್ನು ಒಮ್ಮೆ ಕೇಳಿ ಇಷ್ಟೊಂದು ಹಣ ಇವರ ಅಪ್ಪ ವರದಕ್ಷಿಣೆ ಕೊಟ್ಟಿದ್ದಾರೆಯೇ ಎಂದು, ಅತ್ತೆ ಮನೆ ಸಂಪತ್ತು ತವರಿಗೆ ಸಾಗಿಸಿದ ಧೀಮಂತ ಸೊಸೆ ಎಂದು ಪ್ರತಿಪಾದಿಸಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ. ಹಾಗಿದ್ದರೆ ಈ ಪೋಸ್ಟ್‌ನಲ್ಲಿ ಮಾದಲಾದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸಲು ಸೋನಿಯಾ ಗಾಂಧಿ ಕಳೆದ 2019ರ ಸಂಸತ್ ಚುನಾವಣೆಯ ಸಂದರ್ಭದಲ್ಲಿ ಘೋಷಿಸಿದ ಆಸ್ತಿ ವಿವರವನ್ನು ಪರಿಶೀಲಿಸಿದ್ದೇವೆ, ಸೋನಿಯಾ ಗಾಂಧಿ ಸಲ್ಲಿಸಿದ್ದ  ಡಿಕ್ಲರೇಶನ್ ಅಫಿಡವಿಟ್ ಪ್ರಕಾರ ಅವರ ಒಟ್ಟು ಆಸ್ತಿ 11 ಕೋಟಿ ರೂ.

vishvasnews

2019ರಲ್ಲಿ ರಾಯ್‌ಬರೇಲಿ ಕ್ಷೇತ್ರದಿಂದ ಸಂಸತ್ ಚುನಾವಣೆ ವೇಳೆ ಸಲ್ಲಿಸಿದ್ದ ನಾಮಪತ್ರದಲ್ಲಿ ಸೋನಿಯಾ ಗಾಂಧಿ ಅವರು ತಮ್ಮ ಬಳಿ 11.82 ಕೋಟಿ ರು. ಮೌಲ್ಯದ ಆಸ್ತಿ ಇದೆ ಎಂದು ಘೋಷಿಸಿದ್ದರು. 2014ರ ಲೋಕಸಭಾ ಚುನಾವಣೆ ವೇಳೆ ತಮ್ಮ ಬ್ಯಾಂಕ್‌ ಖಾತೆಗಳಲ್ಲಿ 66 ಲಕ್ಷ ರು. 88 ಕೆಜಿ ಬೆಳ್ಳಿ, 1267.33 ಗ್ರಾಂ ಚಿನ್ನ ಸೇರಿ ಒಟ್ಟು 2.81 ಕೋಟಿ ರು. ಚರಾಸ್ತಿ ಒಳಗೊಂಡ 9.28 ಕೋಟಿ ರು. ಮೌಲ್ಯದ ಆಸ್ತಿ ಇದೆ ಎಂದು ಆಯೋಗಕ್ಕೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ತಿಳಿಸಿದ್ದರು.

vishvasnews

ವೈರಲ್ ಪೋಸ್ಟ್‌ಗೆ ಸಂಬಂಧಿಸಿದಂತೆ ಮತ್ತಷ್ಟು ಮಾಹಿತಿ ಪಡೆಯಲು ಸರ್ಚ್ ನಡೆಸಲು, ಕಾಂಗ್ರೆಸ್ ವಕ್ತಾರ ರಾಜೀವ್ ತ್ಯಾಗಿ ಅವರೊಂದಿಗೆ ಸಂಪರ್ಕಿಸಿದಾಗ, ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೆ ಮಾಡಿಕೊಂಡಿರುವ ಸುದ್ದಿಯನ್ನು ಸಾರಾಸಗಟಾಗಿ ನಿರಾಕರಿಸಿದ್ದಾರೆ. ಸೋನಿಯಾ ಗಾಂಧಿ ಅವರ ಎಲ್ಲಾ ಆಸ್ತಿಗಳ ಬಗ್ಗೆ ಚುನಾವಣಾ ಆಯೋಗದ ಸೈಟ್‌ನಲ್ಲಿ ಮಾಹಿತಿ ಲಭ್ಯವಿದೆ. ವೈರಲ್ ಆಗುತ್ತಿರುವ ಪೋಸ್ಟ್ ನಕಲಿ ಎಂದು ಮಾಹಿತಿ ನೀಡಿದ್ದಾರೆ. ಅಲ್ಲದೆ ಈ ಹಿಂದೆ ಬಿಜೆಪಿ ಸಂಸದ ಸುಬ್ರಮಣಿಯನ್‌ ಸ್ವಾಮಿ ಸೋನಿಯಾ ಗಾಂಧಿವರ ವಿರುದ್ದ ಅಕ್ರಮ ಆಸ್ತಿ ವಿಚಾರವಾಗಿ ಕ್ರಿಮಿನಲ್‌ ಪ್ರಕರಣವೊಂದನ್ನು ದಾಖಲಿಸಿದ್ದಾರೆ ಎಂದು ಉಲ್ಲೇಖಿಸಿದರು. ಆದರೆ ಇದೆಲ್ಲ ಸುಳ್ಳು ಎಂದು ಪುನರುಚ್ಚರಿಸಿದರು.

vishvasnews

ಅವರ ಅಫಿಡವಿಟ್ ಪ್ರಕಾರ, ಸೋನಿಯಾ ಗಾಂಧಿ ಅವರ ಸ್ಥಿರ ಆಸ್ತಿಯಲ್ಲಿ ಎಲ್ಲಿಯೂ ಯಾವುದೇ ಹೋಟೆಲ್ ಉಲ್ಲೇಖವಿಲ್ಲ.ಅಫಿಡವಿಟ್ ಪ್ರಕಾರ ಅವರ ಹೆಸರಿನಲ್ಲಿ 7 ಕೋಟಿ ರೂಪಾಯಿ ಮೌಲ್ಯದ ಕೃಷಿ ಭೂಮಿ ಮತ್ತು ಇಟಲಿಯಲ್ಲಿ 19 ಲಕ್ಷ ರೂಪಾಯಿ ಮೌಲ್ಯದ ಆಸ್ತಿ ಇದೆ.

ಹಾಗಿದ್ದರೆ ಪೋಸ್ಟ್‌ನಲ್ಲಿರುವ ಚಿತ್ರಗಳು ಯಾವುದು?

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಪೋಸ್ಟ್‌ನಲ್ಲಿ ಪ್ರಸಾರವಾದ ಚಿತ್ರಗಳಲ್ಲಿ ಮೊದಲ ಹೋಟೆಲ್ ಟರ್ಕಿಯಲ್ಲಿರುವ ಅಡಾಲ್ಯಾ ಆರ್ಟ್ ಸೈಡ್ ಆಗಿದೆ. ಎರಡನೇ ಹೋಟೆಲ್ ಗ್ರೀಸ್‌ನ ಆಂಡ್ರೊನಿಸ್ ಬೊಟಿಕ್ ಹೋಟೆಲ್ ಮತ್ತು ಮೂರನೆಯದು ಗೋವಾದ ಲೇಜಿ ಲಗೂನ್ ಸರೋವರ್ ಪೋರ್ಟಿಕೊ ಸೂಟ್ಸ್.

vishvasnews

vishvasnews

ಅಡಾಲ್ಯಾ ಆರ್ಟ್ ಸೈಡ್ ಹೋಟೆಲ್ ಲಿಮಿಟೆಡ್ ಆಫ್ ಆಂಡ್ರೊನಿಸ್ ಬೊಟಿಕ್ ಹೋಟೆಲ್ ಮಾಜಿ ಕೇಶ ವಿನ್ಯಾಸಕಿ ಶ್ರೀ ಆಂಡ್ರೊನಿಸ್ ಅವರ ಒಡೆತನದಲ್ಲಿದೆ. ಸೋನಿಯಾ ಗಾಂಧಿ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ಈ ಹೋಟೆಲ್‌ಗಳು ಅಥವಾ ಕಂಪನಿಗಳ ಬಗ್ಗೆ ಎಲ್ಲಿಯೂ ಉಲ್ಲೇಖವಿಲ್ಲ.

ಒಟ್ಟಾರೆಯಾಗಿ ಹೇಳುವುದಾದರೆ, ಸೋನಿಯಾ ಗಾಂಧಿ ವಿಶ್ವದಾದ್ಯಂತ 28,000 ಹೋಟೆಲ್‌ಗಳನ್ನು ಹೊಂದಿದ್ದಾರೆ ಎಂದು ಮಾಡಲಾದ ಪ್ರತಿಪಾದನೆ ಸುಳ್ಳು ಎಂದು ವಿಶ್ವಾಸ್‌ ನ್ಯೂಸ್ ವರದ ಮಾಡಿದೆ. ಸೋನಿಯಾ ಗಾಂಧಿಯವರ ಆಸ್ತಿ ವಿವರವನ್ನು ಚುನಾವಣಾ ಆಯೋಗದ ಮುಂದೆ ಘೋಷಿಸಿಕೊಂಡಿದ್ದಾರೆ ಅಲ್ಲಿ ಎಲ್ಲಿಯೂ ಇದರ ಉಲ್ಲೇಖವಿಲ್ಲ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ಈ ಹಿಂದೆ ಸೋನಿಯಾ ಗಾಂಧಿ ವಿಶ್ವದ ನಾಲ್ಕನೇ ಶ್ರೀಮಂತ ರಾಜಕಾರಣಿ ಎಂದು ಪ್ರತಿಪಾದಿಸಿ ಸುದ್ದಿ ಹರಡಿತ್ತು. ಅದು ಸಹ ಸುಳ್ಳು ಎಂದು ಏನ್‌ಸುದ್ದಿ.ಕಾಂ ಫ್ಯಾಕ್ಟ್ ಚೆಕ್ ಮಾಡಿತ್ತು. ಅದನ್ನು ಇಲ್ಲಿ ಓದಿ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಪ್ರಧಾನಿ ಮೋದಿ ಅದಾನಿ ಪತ್ನಿಗೆ ತಲೆಬಾಗಿ ನಮಸ್ಕರಿದರು ಎಂಬುದು ನಿಜವೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights