ಫ್ಯಾಕ್ಟ್‌ಚೆಕ್: ‘ಅಟಲ್ ಸುರಂಗ’ ಮಾರ್ಗದಲ್ಲಿ ವಾಹನ ದಟ್ಟಣೆ ಎಂದು ಹಳೆಯ ಫೋಟೊ ಹಂಚಿಕೊಂಡ BJP ಬೆಂಬಲಿಗರು
ಹಿಮಾಚಲ ಪ್ರದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ಲಕ್ಷಾಂತರ ವಾಹನಗಳು ಅಟಲ್ ಸುರಂಗ ಮಾರ್ಗದಲ್ಲಿ ಸಂಚರಿಸಿವೆ ಎಂಬ ವರದಿಗಳ ನಡುವೆ, ಭಾರೀ ಟ್ರಾಫಿಕ್ ಜಾಮ್‌ನ ಫೋಟೋ ವೈರಲ್ ಆಗಿದೆ, ಇದು ಇತ್ತೀಚಿನದು ಮತ್ತು ಅಟಲ್ ಸುರಂಗ ಮಾರ್ಗದ ಸದ್ಯದ ಪರಿಸ್ಥಿತಿಯನ್ನು ಹೇಳುತ್ತದೆ ಎಂಬ ಪ್ರತಿಪಾದನೆಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ.

ಟಿವಿ9 ಭಾರತ್ ವರ್ಷ್, ದೈನಿಕ್ ಭಾಸ್ಕರ್ ಮತ್ತು ಗ್ರೌಂಡ್ ರಿಪೋರ್ಟ್ ಹೆಸರಿನ ಪೋರ್ಟಲ್‌ನಂತಹ ಮಾಧ್ಯಮಗಳು ಟ್ರಾಫಿಕ್ ದಟ್ಟಣೆಯನ್ನು ಉಲ್ಲೇಖಿಸುವಾಗ ಅದೇ ಚಿತ್ರವನ್ನು ಹಂಚಿಕೊಂಡಿವೆ.


ಹಾಗೆಯೇ ಬಲಪಂಥೀಯ ಪ್ರತಿಪಾದಕ ರಿಷಿ ಬಾಗ್ರೀ ಕೂಡ ಅದೇ ಚಿತ್ರವನ್ನು ಹಂಚಿಕೊಂಡು, ನಂತರ ಅದನ್ನು ಡಿಲಿಟ್ ಮಾಡಿದ್ದಾರೆ (ಪೋಸ್ಟ್‌ಅನ್ನು ಇಲ್ಲಿ ಆರ್ಕೈವ್ ಮಾಡಲಾಗಿದೆ). ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್:
ಮುಖ್ಯವಾಹಿನಿ ಮಾಧ್ಯಮ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಪೋಸ್ಟ್‌ಅನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಸರ್ಚ್ ಮಾಡಿದಾಗ, ವೈರಲ್ ಫೋಟೋವನ್ನು ಜನವರಿ 2022 ರಲ್ಲಿ ಕ್ಲಿಕ್ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಫೋಟೋವನ್ನು ಛಾಯಾಗ್ರಾಹಕ ಯಶ್ ಹಂಡಾ ಅವರು ಸೆರೆ ಹಿಡಿದಿದ್ದಾರೆ ಎಂದು ದಿ ಕ್ವಿಂಟ್ ವರದಿ ಮಾಡಿದೆ.
ಮತ್ತಷ್ಟು ಸರ್ಚ್ ಮಾಡಿದಾಗ ‘theyashhanda’ ಹೆಸರಿನ Instagram ಖಾತೆಯಲ್ಲಿ, ಜನವರಿ 27 ರಂದು ಅಪ್‌ಲೋಡ್ ಮಾಡಲಾದ ಚಿತ್ರವನ್ನು ನಾವು ಕಂಡುಕೊಂಡಿದ್ದೇವೆ. ಚಿತ್ರದ ಸ್ಥಳವನ್ನು ಹಿಮಾಚಲ ಪ್ರದೇಶದ ಮನಾಲಿ ಎಂದು ಉಲ್ಲೇಖಿಸಲಾಗಿದೆ.
View this post on Instagram
ಅಟಲ್ ಸುರಂಗದ ಟ್ರಾಫಿಕ್ ಜಾಮ್ ಎಂಬ ವರದಿಗಳು ನಿಜವಾಗಿದ್ದರು ವೈರಲ್ ಫೋಟೋಗಳಿಗೂ ವರದಿಗೂ ಸಂಬಂಧವಿಲ್ಲ. ವರದಿಗಳ ಪ್ರಕಾರ, ಶನಿವಾರ ಬೆಳಿಗ್ಗೆ 8 ಗಂಟೆಯಿಂದ 10,000 ಕ್ಕೂ ಹೆಚ್ಚು ವಾಹನಗಳು ಅಟಲ್ ಸುರಂಗ ಮಾರ್ಗವಾಗಿ ಸಂಚಾರ ಮಾಡಿವೆ, ಈ ಸಂದರ್ಭದಲ್ಲಿ ಭಾರೀ ಟ್ರಾಫಿಕ್ ಜಾಮ್ ಉಂಟಾಗಿದೆ ಎಂದು ವರದಿಯಾಗಿದೆ. ಆದರೆ ಸುದ್ದಿ ಮಾಧ್ಯಮಗಳು ಪ್ರಸಾರ ಮಾಡಿದಂತೆ ವರದಿಗೂ ಚಿತ್ರಕ್ಕೂ ಸಂಬಂಧವಿಲ್ಲ.
ಕ್ರಿಸ್ಮಸ್ ಮತ್ತು ಹೊಸ ವರ್ಷ ಬಂತೆಂದರೆ ಪ್ರತಿಯೊಬ್ಬರಿಗೂ ಎಲ್ಲಿಲ್ಲದ ಸಂಭ್ರಮ ಸಡಗರ. ಸರಿದು ಹೋಗುತ್ತಿರುವ ದಿನಗಳನ್ನು ಬೀಳ್ಕೊಟ್ಟು ಹೊಸದನ್ನು ಸ್ವಾಗತಿಸುವ ಹಂಬಲದೊಂದಿಗೆ ಹೊಸ ಜಾಗಗಳಿಗೆ ಪ್ರವಾಸ ಸ್ಥಳಗಳಿಗೆ ಭೇಟಿ ನೀಡುವವರ ಸಂಖ್ಯೆ ಕಡಿಮೆಯೇನಿಲ್ಲ. ಅವರವರ ಅನುಕೂಲಗಳಿಗೆ ತಕ್ಕಂತೆ ತಮ್ಮ ಇಷ್ಟದ ಜಾಗಗಳಿಗೆ ಪ್ರವಾಸ ಹೋಗುವುದುಂಟು.
ಆದರೆ ಈ ಸಂದರ್ಭಗಳಲ್ಲಿ ಕೆಲ ಬಲಪಂಥೀಯ ಪ್ರತಿಪಾದಕರು ಈ ಸಂದರ್ಭವನ್ನು ಋಣಾತ್ಮಕವಾಗಿ ಬಿಂಬಿಸಿ, ಹೊಸ ವರ್ಷ ಹಿಂದೂ ಸಂಪ್ರದಾಯಕ್ಕೆ ವಿರುದ್ದವಾಗಿದೆ, ಇದನ್ನು ಆಚರಿಸಬೇಡಿ ಎಂಬ ಪೋಸ್ಟ್‌ಗಳನ್ನು ಹಂಚಿಕೊಳ್ಳುವ ಮೂಲಕ ಜನಸಾಮಾನ್ಯರ ನಡುವೆ ಕೋಮು ಪ್ರಚೋದನೆ ಮೂಡಿಸುತ್ತಾರೆ. ಇಂತಹವರ ಬಗ್ಗೆ ಎಚ್ಚರಿಕೆ ಇರಲಿ.
ಕೃಪೆ: ದಿ ಕ್ವಿಂಟ್
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ವಂದೇ ಭಾರತ್ ರೈಲಿನಲ್ಲಿ ಮಳೆ ನೀರು ಸೋರಿದ್ದು ನಿಜವೇ?

