ಫ್ಯಾಕ್ಟ್‌ಚೆಕ್: ಪ್ರಾಧಾನಿ ಮೋದಿ ಪಠಾಣ್ ಚಿತ್ರದ ಟ್ರೇಲರ್ ನೋಡಿದ್ದು ನಿಜವೇ?

ಬಲಪಂಥೀಯ ಸಂಘಟನೆಗಳ ಬಾಯ್ಕಾಟ್ ನಡುವೆ ಶಾರುಖ್ ಮತ್ತು ದೀಪಿಕಾ ಅಭಿನಯದ ‘ಪಠಾಣ್’ ಚಿತ್ರ ಜನವರಿ ಅಂತ್ಯದ ವೇಳೆಗೆ ಥಿಯೇಟರ್‌ಗೆ ಲಗ್ಗೆ ಇಡಲು ಎಲ್ಲಾ ತಯಾರಿಯನ್ನು ನಡೆಸುತ್ತಿದೆ. ಇತ್ತ ಪಠಾಣ್ ಚಿತ್ರ ತೆರೆಕಾಣವ ದಿನ ಸಮೀಪಿಸುತ್ತಿದ್ದಂತೆ, ಪಠಾಣ್ ಸಿನಿಮಾ ಬಗ್ಗೆ ಅನಗತ್ಯ ಟೀಕೆ ಮಾಡದಂತೆ ಬಿಜೆಪಿ ಕಾರ್ಯಕರ್ತರಿಗೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರು ಈ ಹೇಳಿಕೆಯನ್ನು ನೀಡಿದ ಬೆನ್ನಲ್ಲೆ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ವೊಂದು ವೈರಲ್ ಆಗುತ್ತಿದ್ದು ಪಠಾಣ್ ಚಿತ್ರದ ಟ್ರೇಲರ್ ಅನ್ನು ಪ್ರಧಾನಿ ಮೋದಿ ವೀಕ್ಷಿಸುತ್ತಿದ್ದಾರೆ ಎಂಧು ಒfರತಿಪಾದಿಸಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್‌ಅನ್ನು ಹಂಚಿಕೊಳ್ಳುತ್ತಿರುವುದನ್ನು ಕಾಣಬಹುದು.

ಹಾಗಿದ್ದರೆ, ಪ್ರಧಾನಿ ಮೋದಿ ನಿಜವಾಗಿಯೂ ಪಠಾಣ್ ಚಿತ್ರದ ಟ್ರೇಲರ್ ಅನ್ನು ವೀಕ್ಷಿಸಿದ್ದಾರೆಯೇ ಎಂದು ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿರುವ ಪ್ರಧಾನಿ ನರೇಂದ್ರ ಮೋದಿ ಪಠಾಣ್ ಚಿತ್ರದ ಟ್ರೇಲರ್‌ ಅನ್ನು ವೀಕ್ಷಿಸಿದ್ದಾರೆಯೇ ಎಂದು ಪರಿಶೀಲಿಸಲು ವೈರಲ್ ಪೋಟೋವನ್ನು ಗೂಗಲ್ ರಿವರ್ಸ್‌ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, 22 ಜುಲೈ 2019 ರಂದು ಸುದ್ದಿ ಸಂಸ್ಥೆ ANI ಟ್ವೀಟ್ ಮಾಡಿದ ವೀಡಿಯೊದ ವಿಸ್ತೃತ ಆವೃತ್ತಿ ಲಭ್ಯವಾಗಿದೆ. ವೈರಲ್ ವೀಡಿಯೊದಲ್ಲಿ ನೋಡಿದಂತೆಯೇ ಪ್ರಧಾನಿ ಮೋದಿ ಅವರು ಅದೇ ಉಡುಪನ್ನು ಧರಿಸಿರುವುದನ್ನು ವೀಡಿಯೊ ತೋರಿಸುತ್ತದೆ. ಮೂಲ ವಿಡಿಯೋದ ವರದಿಯ ಪ್ರಕಾರ ಅವರು ಇಸ್ರೋದಿಂದ ಚಂದ್ರಯಾನ-2 ಉಡಾವಣೆಯ ನೇರ ಪ್ರಸಾರವನ್ನು ವೀಕ್ಷಿಸುತ್ತಿದ್ದರು ಎಂದು ವರದಿಯಾಗಿದೆ.

22 ಜುಲೈ 2019 ರಂದು, ಹಿಂದೂಸ್ತಾನ್ ಟೈಮ್ಸ್ ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಅದೇ ವೀಡಿಯೊವನ್ನು ಪ್ರಕಟಿಸಿತು. “ಚಂದ್ರಯಾನ-2 ಉಡಾವಣೆ: ಪಿಎಂ ಮೋದಿ ಲಿಫ್ಟ್-ಆಫ್ ವೀಕ್ಷಿಸಿದರು” ಎಂಬ ಶೀರ್ಷಿಕೆಯೊಂದಿಗೆ ವೀಡಿಯೊವನ್ನು  ಅಪ್‌ಲೋಡ್ ಮಾಡಲಾಗಿದೆ. ವೈರಲ್ ವೀಡಿಯೋದಲ್ಲಿ ಕಂಡುಬರುವಂತೆ ಪ್ರಧಾನಿ ಮೋದಿಯವರು ಅದೇ ಉಡುವಿನಲ್ಲಿ ಇರುವುದನ್ನು ಕಾಣಬಹುದು. ವಿವರಣೆಯ ಪ್ರಕಾರ, ಚಂದ್ರಯಾನ-2 ಉಡಾವಣೆಯ ನೇರ ಪ್ರಸಾರವನ್ನು ಮೋದಿ ವೀಕ್ಷಿಸುತ್ತಿರುವುದನ್ನು ವೀಡಿಯೊ ತೋರಿಸುತ್ತದೆ.

22 ಜುಲೈ 2019 ರಂದು, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಭಾರತದ ಎರಡನೇ ಚಂದ್ರನ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. NDTV ಮತ್ತು DNA ವರದಿಯ ಪ್ರಕಾರ ಭಾರತದ ಮಹತ್ವಾಕಾಂಕ್ಷೆಯ ಚಂದ್ರನ ಕಾರ್ಯಾಚರಣೆಯ ಚಂದ್ರಯಾನ-2 ಉಡಾವಣೆಯನ್ನು ವೀಕ್ಷಿಸುತ್ತಿರುವ ಪ್ರಧಾನಿ ಮೋದಿ ಎಂಬ ಶೀರ್ಷಿಕೆಯೊಂದಿಗೆ ವೀಡಿಯೊದಿಂದ ಸ್ಟಿಲ್ ಅನ್ನು ಹಂಚಿಕೊಂಡಿದೆ.

Image

2019ರ ಹಳೆಯ ವಿಡಿಯೋವನ್ನು ಎಡಿಟ್ ಮಾಡುವ ಮೂಲಕ ಶಾರುಕ್ ಅವರ ‘ಪಠಾಣ್’ ಚಿತ್ರದ ಟ್ರೈಲರ್ ವೀಕ್ಷಿಸುತ್ತಿರುವ ಪ್ರಧಾನಿ ಮೋದಿ ಎಂದು ಮಾರ್ಫ್ ಮಾಡಿದ ವಿಡಿಯೋವನ್ನು ಹಂಚಿಕೊಂಡಿರುವುದು ಸ್ಪಷ್ಟವಾಗಿದೆ. ಇತ್ತೀಚೆಗೆ, ನಿರ್ಮಾಪಕರು ಚಿತ್ರದ ಮೊದಲ “ಬೇಷರಂ ರಂಗ್” ಎಂಬ ಹಾಡನ್ನು ಬಿಡುಗಡೆ ಮಾಡಿದರು, ಅದರ ನಂತರ ಬಲಪಂಥೀಯ ಗುಂಪುಗಳು ಮತ್ತು ಕೆಲವು ನಾಯಕರು ಚಿತ್ರವನ್ನು ಬಹಿಷ್ಕರಿಸುವಂತೆ ಒತ್ತಾಯಿಸಿದರು.

ಪಠಾಣ್ ಚಿತ್ರದ ಬಗ್ಗೆ ಅನಗತ್ಯ ಟೀಕೆ ಮಾಡುವುದನ್ನು ತಡೆಯುವಂತೆ ಪ್ರಧಾನಿ ಮೋದಿ ಬಿಜೆಪಿ ನಾಯಕರಿಗೆ ಸೂಚಿಸಿದ ಬೆನ್ನಲ್ಲೆ ಮೋದಿ ಪಠಾಣ್ ಚಿತ್ರದ ಟ್ರೇಲರ್‌ಅನ್ನು ವೀಕ್ಷಿಸಿದ್ದಾರೆ ಎಂದು ಹಂಚಿಕೊಳ್ಳಲಾಗಿದೆ. ಒಂದು ವೇಳೆ ಪ್ರಧಾನಿ ಮೋದಿ ಪಠಾಣ್ ಚಿತ್ರದ ಟ್ರೇಲರ್‌ಅನ್ನು ನೋಡಿದ್ದರೂ ಇರಬಹುದು, ಅದನ್ನು ಅವರೇ ಹೇಳಬೇಕು, ಆದರೆ ಸಾಮಾಜಿಕ ಜಾಲತಾಣದಲ್ಲಿ 2019ರ ಹಳೆಯ ವಿಡಿಯೋವನ್ನು ಮೋದಿ ಪಠಾಣ್ ಚಿತ್ರದ ಟ್ರೇಲರ್ ನೋಡುತ್ತಿರುವಂತೆ ಎಡಿಟ್ ಮಾಡಿ ಹಂಚಿಕೊಂಡಿರುವುದಂತೂ ಸತ್ಯ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: FaceBook ನಲ್ಲಿ 3 ಬಾರಿ ಹುಡುಗಿಗೆ ಫ್ರೆಂಡ್ ರಿಕ್ವೆಸ್ಟ್‌ ಕಳುಹಿಸಿದರೆ ಜೈಲು ಶಿಕ್ಷೆಯೆ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.