ಫ್ಯಾಕ್ಟ್‌ಚೆಕ್: ಅಮೆರಿಕಾ ಅಧ್ಯಕ್ಷ ಜೋ ಬೈಡೆನ್ ತಮ್ಮ ಮೊಮ್ಮಗಳೊಂದಿಗೆ ಅನುಚಿತವಾಗಿ ನಡೆದುಕೊಂಡರೇ?

ಅಮೆರಿಕಾ ಅಧ್ಯಕ್ಷ ಜೋ ಬೈಡೆನ್ ಅವರು ತಮ್ಮ ಮೊಮ್ಮಗಳೊಂದಿಗೆ ಅನುಚಿತ ರೀತಿಯಲ್ಲಿ ವರ್ತಿಸುತ್ತಿದ್ದಾರೆ ಎಂದು ಪ್ರತಿಪಾದಿಸಿ ವಿಡಿಯೋವೊಂದು ವೈರಲ್ ಆಗುತ್ತಿದೆ. ಸಾಮಾಜಿಕ ಜಾಲತಾಣಗಲ್ಲಿ ಈ ವೀಡಿಯೊವನ್ನು ಹಂಚಿಕೊಂಡಿರುವ ಕೆಲವರು “ಜೋ ಬಿಡನ್ ಅವರೊಂದಿಗೆ ಕಾಣಿಸಿಕೊಂಡ ಯುವತಿ ಬೇರೆ ಯಾರೂ ಅಲ್ಲ ಅವರ ಮೊಮ್ಮಗಳು ಎಂದು ಹೇಳಿದ್ದಾರೆ. ಬಿಡೆನ್ ತನ್ನ ಮೊಮ್ಮಗಳನ್ನು ಅನುಚಿತವಾಗಿ ಸ್ಪರ್ಶಿಸಿದ್ದಾರೆ ಎಂದು ಆರೋಪಿಸಿ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ.

https://twitter.com/RaheemKassam/status/1616537275512356887

ವಿಶ್ವದ ದೊಡ್ಡಣ ಎಂದು ಕರೆಸಿಕೊಳ್ಳುವ ಅಮೆರಿಕಾದ ಅಧ್ಯಕ್ಷರೇ ಈ ರೀತಿ ಮಾಡಿದರೆ ಹೇಗೆ ಎಂದು ಹೇಳುವ ಪೋಸ್ಟ್‌ವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರ ಮಾಡಲಾಗಿದೆ. ಬಿಡೆನ್ ಅವರು ತಪ್ಪಾಗಿ ನಡೆದುಕೊಂಡಿದ್ದಾರೆ ಎಂದು ಆರೋಪಿಸಿ ಇದೇ ರೀತಿಯ ಶೀರ್ಷಿಕೆಗಳೊಂದಿಗೆ, ಅನೇಕರು ಈ ವೀಡಿಯೊವನ್ನು ಫೇಸ್‌ಬುಕ್ ಮತ್ತು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಅದರ ಆರ್ಕೈವ್ ಮಾಡಿದ ಆವೃತ್ತಿಯನ್ನು ಇಲ್ಲಿ ನೋಡಬಹುದು. ಹಾಗಿದ್ದರೆ ಈ ವೈರಲ್ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ವೈರಲ್ ಆಗಿರುವ ವೀಡಿಯೊದ ಕೀಫ್ರೇಮ್‌ಗಳನ್ನು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಅಕ್ಟೋಬರ್ 30 2022 ರ ವರದಿಯೊಂದು ಲಭ್ಯವಾಗಿದ್ದು, ಯುಎಸ್ ಮಧ್ಯಂತರ ಚುನಾವಣೆಗೆ ಮತ ಹಾಕಿದ ನಂತರ ಬಿಡೆನ್ ತನ್ನ ಮೊಮ್ಮಗಳು ನಟಾಲಿ ಬಿಡೆನ್ ಅವರ ಟೀ ಶರ್ಟ್‌ಗೆ ನಾನು ವೋಟ್ ಮಾಡಿದೆ ಎಂಬ ಸಿಂಬಲ್ ಸ್ಟಿಕ್ಕರ್ ಅನ್ನು ಹಾಕಿದ್ದಾರೆ ಎಂದು ವರದಿಯಾಗಿದೆ.

ದಿ ಹಿಂದೂ ವರದಿಯ ಪ್ರಕಾರ ಬಿಡೆನ್ ಅವರ ಮೊಮ್ಮಗಳು ನಟಾಲಿ ಇಬ್ಬರೂ ಯುಎಸ್ ಮಧ್ಯಂತರ ಚುನಾವಣೆಗೆ ಮತ ಚಲಾಯಿಸಿದ ನಂತರ ಅಧ್ಯಕ್ಷ ಬಿಡನ್ ನಟಾಲಿ ಅವರ ಟೀ ಶರ್ಟ್ ಮೇಲೆ “ಐ ವೋಟೆಡ್” ಎಂಬ ಸ್ಟಿಕರ್ ಅನ್ನು ಹಾಕಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಕಳೆದ ವರ್ಷ ನವೆಂಬರ್‌ನಲ್ಲಿ ಚುನಾವಣೆ ನಡೆದಾಗ ಅಧ್ಯಕ್ಷ ಜೋ ಬಿಡೆನ್ ಮೊದಲ ಬಾರಿಗೆ ಮತದಾರರಾದ ನಟಾಲಿಯಾ ಅವರೊಂದಿಗೆ ಆರಂಭಿಕ ಮತದಾನವನ್ನು ಆರಿಸಿಕೊಂಡರು. ಡೆಲವೇರ್‌ನ ವಿಲ್ಮಿಂಗ್ಟನ್‌ನಲ್ಲಿರುವ ಮತಗಟ್ಟೆಯಲ್ಲಿ ಇಬ್ಬರೂ ಮತದಾನ ಮಾಡಿದರು. ರಿಪಬ್ಲಿಕನ್ನರು ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಮೇಲೆ ಹಿಡಿತ ಸಾಧಿಸಿದ್ದರಿಂದ ಮಧ್ಯಂತರ ಚುನಾವಣಾ ಫಲಿತಾಂಶದಲ್ಲಿ ಡೆಮೋಕ್ರಾಟ್‌ಗಳು ಮತ್ತು ಬಿಡೆನ್ ಸಿಂಡಿಕೇಟ್‌ಗೆ ನಿರಾಸೆಯಾಗಿತ್ತು.

ಕಳೆದ ವರ್ಷ ಅಕ್ಟೋಬರ್ 29 ರಂದು AP ಯ YouTube ಚಾನಲ್‌ಗೆ ಅಪ್‌ಲೋಡ್ ಮಾಡಲಾದ ಮೂಲ ವೀಡಿಯೊ ಲಭ್ಯವಾಗಿದೆ. ಈ ವೀಡಿಯೊದ 16-ಸೆಕೆಂಡ್ ಟೈಮ್‌ ಸ್ಟ್ಯಾಂಪ್‌ನಲ್ಲಿ, ನಟಾಲಿ ಬಿಡೆನ್‌ನ ಎದೆಯ ಮೇಲೆ ಸ್ಟಿಕ್ಕರ್ ಅಂಟಿಸುವುದನ್ನು ಕಾಣಬಹುದು.

ಮೂಲ ವಿಡಿಯೋದಲ್ಲಿ ಜೋ ಬಿಡೆನ್ ಮತ್ತು ನಟಾಲಿ ಮತದಾದ ಮಾಡಿದ ನಂತರ ಬಿಡೆನ್ ತನ್ನ ಕೈಯಲ್ಲಿ ಸ್ಟಿಕ್ಕರ್‌ ಹಿಡಿದು ನಟಾಲಿಯ ಕಡೆಗೆ ತಿರುಗಿ ಯಾವ ಕಡೆಗೆ ಅಂಟಿಸಲಿ ಎಂದು ಕೇಳುತ್ತಾರೆ ಆಗ ನಟಾಲಿಯಾ “ಈ ಕಡೆ” ಎಂದು ಹೇಳುವ ಮೂಲಕ ಪ್ರತಿಕ್ರಿಯಿಸುತ್ತಾಳೆ, ಬಿಡೆನ್ ಸ್ಟಿಕ್ಕರ್ ಅನ್ನು ಅಂಟಿಸಿ ತನ್ನ ಮೊಮ್ಮಗಳಿಗೆ ಪ್ರೀತಿಯಿಂದ ಮುತ್ತಿಕ್ಕುತ್ತಾರೆ. ಈ ವಿಡಿಯೋದಲ್ಲಿ ಬರುವ 6ಸೆಕೆಂಡುಗಳ ತುಣುಕನ್ನು ಕ್ಲಿಪ್ ಮಾಡಿ ಎಡಿಟ್ ಮಾಡಿ ಅಮೆರಿಕಾ ಅಧ್ಯಕ್ಷ ಜೋ ಬಿಡೆನ್ ತನ್ನ ಮೊಮ್ಮಗಳೊಂದಿಗೆ ಅನುಚಿತ ವರ್ತನೆ ತೋರಿದ್ದಾರೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ.

“ನಾನು ಮತ ಹಾಕಿದ್ದೇನೆ” ಎಂಬ ಸ್ಟಿಕ್ಕರ್ ಯುನೈಟೆಡ್ ಸ್ಟೇಟ್ಸ್‌ನಲ್ಲಿ ಹೊಸದಾಗಿ ಹುಟ್ಟಕೊಂಡ ಪ್ರವೃತ್ತಿಯೇನಲ್ಲ. ಬ್ಲೂಮ್‌ಬರ್ಗ್ ಪ್ರಕಾರ, ಈ ಸ್ಟಿಕ್ಕರ್‌ಗಳು 1950-80 ರ ನಡುವೆ ಚಾಲ್ತಿಗೆ ಬಂದಿದ್ದು, ಸಾಮಾನ್ಯವಾಗಿ ದೇಶಭಕ್ತಿಯ ಚಿಹ್ನೆಗಳೊಂದಿಗೆ ವಿನ್ಯಾಸಗೊಳಿಸಲಾಗಿದೆ, ಉದಾ. ರಾಷ್ಟ್ರಧ್ವಜ, ಇದು ಚುನಾವಣಾ ದಿನಗಳಲ್ಲಿ ನಾಗರಿಕರಲ್ಲಿ ಉತ್ಸಾಹವನ್ನು ತೋರಿಸುತ್ತದೆ. ಇದನ್ನೆ ಬಿಡೆನ್ ಮತ್ತು ಬಿಡೆನ್ ಮೊಮ್ಮಗಳು ಮಾಡಿದ್ದಾರೆ. ಇದರಲ್ಲಿ ಅನುಚಿತ ವರ್ತನೆಯಾಗಲಿ ಕೆಟ್ಟ ಸ್ಪರ್ಶವಾಗಲಿ ತನ್ನ ಮೊಮ್ಮಗಳೊಂದಿಗೆ ಮಾಡಿಲ್ಲ ಎಂಬುದು ಸ್ಪಷ್ಟವಾಗಿದೆ.

ಕೃಪೆ: ಇಂಡಿಯಾ ಟುಡೇ

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: FaceBook ನಲ್ಲಿ 3 ಬಾರಿ ಹುಡುಗಿಗೆ ಫ್ರೆಂಡ್ ರಿಕ್ವೆಸ್ಟ್‌ ಕಳುಹಿಸಿದರೆ ಜೈಲು ಶಿಕ್ಷೆಯೆ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.