ಫ್ಯಾಕ್ಟ್‌ಚೆಕ್ : BBC ಚುನಾವಣಾ ಸಮೀಕ್ಷೆ ಪ್ರಕಾರ ಕರ್ನಾಟಕದಲ್ಲಿ ಮತ್ತೆ ಕಮಲ ಅರಳಲಿದೆ ಎಂದು ನಕಲಿ ಸಮೀಕ್ಷೆ ಹಂಚಿಕೆ

ಕರ್ನಾಟಕ 2023ರ ವಿಧಾನಸಭಾ ಚುನಾವಣೆ ಮೇ 10 ಕ್ಕೆ ಘೋಷಣೆಯಾಗಿ, ಮೇ 10ರಂದು ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ ಈಗಾಗಲೇ ಸಿ ಓಟರ್ಸ್ ಸೇರಿದಂತೆ ಹಲವು ಏಜೆನ್ಸಿಗಳು ಚುನಾವಣಾ ಪೂರ್ವ ಸಮೀಕ್ಷೆಗಳನ್ನು ನಡೆಸಿ ಯಾವ ಪಕ್ಷ ಎಷ್ಟು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂಬ ವರದಿಗಳನ್ನು ಪ್ರಕಟಿಸಿವೆ. ಆದರೆ ಚುನಾವಣೆ ದಿನಾಂಕ ಘೋಷಣೆಯಾದ ನಂತರ BBC news ಸಮೀಕ್ಷೆಯೊಂದನ್ನು ಪ್ರಕಟಿಸಿದೆ ಎಂಬ ಪೋಸ್ಟ್‌ವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಪ್ರಸಾರವಾಗುತ್ತಿದೆ.

ಈಗ ಬಿಬಿಸಿ ನ್ಯೂಸ್‌ನ ಲೋಗೋವನ್ನು ಹೊಂದಿರುವ ಚುನಾವಣಾ ಸಮೀಕ್ಷೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.  “BBC ಸಮೀಕ್ಷೆ ಪ್ರಕಾರ: ಕರ್ನಾಟಕದಲ್ಲಿ ಬಿಜೆಪಿ ಭಾರೀ ಬಹುಮತದೊಂದಿಗೆ ಅಧಿಕಾರಕ್ಕೆ ಮರಳಲಿದೆ, ಕರ್ನಾಟಕ ಚುನಾವಣೆಯಲ್ಲಿ ಆಡಳಿತ ಪಕ್ಷ 140+ ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಸಮೀಕ್ಷೆಗಳು ಹೇಳುತ್ತವೆ ” ಎಂದು ಪ್ರತಿಪಾತಿಸಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ.

ಒಟ್ಟು ಸೀಟುಗಳು : 224
ಬಹುಮತ: 113

ಬಿಜೆಪಿ : 130-142 ಸ್ಥಾನಗಳನ್ನು ಗಳಿಸಿದರೆ ಕಾಂಗ್ರೆಸ್ : 58-66 ಸ್ಥಾನಗಳನ್ನು, ಜೆಡಿಎಸ್ : 22-29 ಮತ್ತು ಇತರೆ : 1-3 ಸ್ಥಾನಗಳನ್ನು ಪಡೆಯುತ್ತೆ ಎಂದು ಸಮೀಕ್ಷೆಯ ವರದಿಯನ್ನು ಪ್ರಕಟಿಸಿದೆ. ಬಿಬಿಸಿ ನಿಜವಾಗಿಯೂ ಇಂತಹದೊಂದು ಸಮೀಕ್ಷೆಯನ್ನು ನಡೆಸಿದೆಯೇ? ಚುನಾವಣಾ ದಿನಾಂಕ ಘೋಷಣೆಯಾದ ನಂತರ ಇಂತಹ ಸಮೀಕ್ಷೆಗಳನ್ನು ಮಾಡಬಹುದೇ ಎಂದು ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮ ಮತ್ತು ವಾಟ್ಸಾಪ್‌ಗಳಲ್ಲಿ ಪ್ರಸಾರವಾಗುತ್ತಿರುವ ಸಮೀಕ್ಷೆಯನ್ನು ಪರಿಶೀಲಿಸಿದಾಗ, 2018ರಲ್ಲಿ ಇಂತಹದ್ದೇ ಒಂದು ಸಮೀಕ್ಷೆ ವರದಿಯೊಂದನ್ನು ಹಂಚಿಕೊಳ್ಳಲಾಗಿತ್ತು. ಫ್ಯಾಕ್ಟ್‌ಚೆಕ್ ಸುದ್ದಿ ಸಂಸ್ಥೆಯಾದ ಆಲ್ಟ್‌ನ್ಯೂಸ್‌ ಕೂಡ ಬಿಬಿಸಿ ನ್ಯೂಸ್ ಹೆಸರಿನಲ್ಲಿ ಪ್ರಕಟಿಸಿರುವ 2018ರ ಕರ್ನಾಟಕ ವಿಧಾನಸಭಾ ಚುನಾವಣಾ ಸಮೀಕ್ಷೆ ನಕಲಿ ಎಂದು ತಿಳಿಸಿತ್ತು.

ಅದರ ಪ್ರಕಾರ ಈಗ ವೈರಲ್ ಆಗುತ್ತಿರುವ ಸುದ್ದಿಯೂ ಕೂಡ ನಕಲಿಯಾಗಿದ್ದು, ಯಾವುದೇ ವಿಶ್ವಾಸಾರ್ಹತೆಯನ್ನು ಹೊಂದಿಲ್ಲ ಮತ್ತು BBC ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆಯೇ ಎಂದು ಪರಿಶೀಲಿಸಿದಾಗ, ವೈರಲ್ ಸಮೀಕ್ಷೆಯನ್ನು ಹೋಲುವ ಯಾವ ವರದಿಗಳು ಲಭ್ಯವಾಗಿಲ್ಲ.

ವಾಟ್ಸಾಪ್‌ನಲ್ಲಿ ಪ್ರಕಟವಾಗುತ್ತಿರುವ ಬಿಬಿಸಿ ಮಾಡಿದೆ ಎನ್ನಲಾದ ಸಮೀಕ್ಷೆಯಲ್ಲಿ ಕರ್ನಾಟಕದ ಇತರೆ ಭಾಗಗಳಲ್ಲಿ ಯಾವ ಯಾವ ಪಕ್ಷಗಳು ಎಷ್ಟು ಸ್ಥಾನಗಳನ್ನು ಪಡೆಯುತ್ತವೆ ಎಂದೂ ಹೇಳಲಾಗಿದೆ.

ಪ್ರದೇಶವಾರು ಲೆಕ್ಕ

ಮುಂಬೈ ಕರ್ನಾಟಕ: 50
◆ ಬಿಜೆಪಿ : 37-38
◆ INC : 11-12
◆ ಜೆಡಿಎಸ್ : 00

ಹೈದರಾಬಾದ್ ಕರ್ನಾಟಕ: 40
◆ ಬಿಜೆಪಿ : 23-25
◆ INC : 14-16
◆ ಜೆಡಿಎಸ್ : 1-3
◆ OTH : 1-2

ಬೃಹತ್ ಬೆಂಗಳೂರು: 32
◆ ಬಿಜೆಪಿ : 14-16
◆ INC : 13-15
◆ ಜೆಡಿಎಸ್ : 1-3

ಮಧ್ಯ ಕರ್ನಾಟಕ: 26
◆ ಬಿಜೆಪಿ : 15-17
◆ INC : 8-9
◆ ಜೆಡಿಎಸ್ : 00
◆ OTH : 0-1

ಕರಾವಳಿ ಕರ್ನಾಟಕ: 19
◆ ಬಿಜೆಪಿ : 16-17
◆ INC : 2-3
◆ ಜೆಡಿಎಸ್ : 00

ಹಳೆ ಮೈಸೂರು : ೫೭
◆ ಬಿಜೆಪಿ : 25-29
◆ INC : 10-11
◆ ಜೆಡಿಎಸ್ : 20-23

ಆದರೆ ಈ ಕ್ಷೇತ್ರಗಳಲ್ಲಿ ನಡೆಸಿರುವ ಸಮೀಕ್ಷೆಗೆ ಸಂಬಂಧಿಸಿದಂತೆ ಯಾವುದೇ ವಿಶ್ವಾಸಾರ್ಹತೆಯಾಗಲಿ, ಉಲ್ಲೇಖಗಳಾಗಲೀ ಇಲ್ಲ. ಮತ್ತು ಅದರಲ್ಲಿ ನಮೂದಿಸಿರುವ ಅಂಕಿ ಅಂಶಗಳೂ ಸಹ ತಪ್ಪಾಗಿವೆ. ಆದರೆ ಬಿಬಿಸಿ ಸುದ್ದಿ ಸಂಸ್ಥೆ ನಡೆಸಿದೆ ಎನ್ನಲಾದ ಸಮೀಕ್ಷೆಯಲ್ಲೇ ಬಿಜೆಪಿ ಮುನ್ನಡೆ ಸಾಧಿಸಿದೆ ಎಂಬ ಕಾರಣಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ.

ಆದರೆ ನಿಜಕ್ಕೂ ಬಿಬಿಸಿ ಚುನಾವಣಾಪೂರ್ವ ಸಮೀಕ್ಷೆ ನಡೆಸಿತ್ತೇ ಎಂದು ಪರಿಶೀಲಿಸಿದಾಗ, ಇದು ಬಿಬಿಸಿ ಹೆಸರಿನ ಸುಳ್ಳು ಸಮೀಕ್ಷೆ ಎಂಬುದು ಸ್ಪಷ್ಟವಾಗಿದೆ. ಬಿಬಿಸಿಗೆ ಸಂಬಂಧಿಸಿದ ಯಾವುದೋ ಒಂದು ಲಿಂಕ್ ಹಾಕಿ ಈ ರೀತಿ ಸುಳ್ಳು ಸಮೀಕ್ಷೆಯನ್ನು ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್ : ಮಸೀದಿಗೆ ನುಗ್ಗಿ ಪ್ರಾರ್ಥನೆಗೆ ಅಡ್ಡಿಪಡಿಸಿದ್ದು ಹಿಂದೂ ಮಹಿಳೆಯಲ್ಲ! ಮತ್ತ್ಯಾರು?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights