ಫ್ಯಾಕ್ಟ್‌ಚೆಕ್ : ಸೊಸೆಯನ್ನೇ ಮದುವೆಯಾದ ಮಾವ ಎಂದು ಸ್ಕ್ರಿಪ್ಟೆಡ್ ವಿಡಿಯೋ ಹಂಚಿಕೆ

ವ್ಯಕ್ತಿಯೊಬ್ಬ ತನ್ನ ಮಗ ಸಾವನ್ನಪ್ಪಿದ ಎಂದು ಮಗನ ಹೆಂಡಿಯನ್ನೇ (ಸೊಸೆ) ಮದುವೆಯಾಗಿರುವ ಘಟನೆ ನಡೆದಿದೆ ಎಂದು ಪ್ರತಿಪಾದಿಸಿ ಪೋಸ್ಟ್‌ಅನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಮದುವೆಯ ನಂತರ ವಧು-ವರರು ದೇವಸ್ಥಾನದ ಒಳಗಿನಿಂದ ಮಾಲೆ ಧರಿಸಿ ಹೊರಗೆ ಬಂದಾಗ ಯುವಕರು ಅವರನ್ನು ತಡೆದು ಮಾತನಾಡಿಸುತ್ತಾರೆ. ಮದುವೆ ಬಗ್ಗೆ ಯುವತಿಯನ್ನು ಕೇಳುತ್ತಾರೆ. ವಿಡಿಯೋದಲ್ಲಿ ಯುವತಿಗೆ 25 ವರ್ಷ ಮತ್ತು ಆಕೆಯ ಮಾವ 45 ವರ್ಷ ಎಂದು ಹೇಳಿದ್ದಾರೆ. ಮಗಳಾಗಬೇಕಿದ್ದ ಹುಡುಗಿಯನ್ನೇ ಮದುವೆಯಾಗಲು ಏನನ್ನಿಸಿತು ಎಂದೂ ಮಾವನನ್ನು ಕೇಳುತ್ತಿದ್ದಾರೆ.

ಇದಕ್ಕೆ ಉತ್ತರಿಸುವ ಯುವತಿ ಅವರನ್ನು ಹೊರತುಪಡಿಸಿ ಯಾರೂ ನನ್ನನ್ನು ನೋಡಿಕೊಳ್ಳುವುದಿಲ್ಲ. ತನ್ನ ಸ್ವಂತ ಇಚ್ಛೆಯ ಮೇರೆಗೆ ಮದುವೆಯಾಗಿದ್ದೇನೆ ಎಂದು ಹೇಳುವುದನ್ನು ಕೇಳಬಹುದು. ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಪ್ರಸಾರವಾಗುತ್ತಿದೆ. ಇದು ಉತ್ತರ ಭಾರತದಲ್ಲಿ ನಡೆದ ಘಟನೆ ಎಂದು ಪ್ರತಿಪಾದಿಸಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ.

ಮಗನ ಸಾವಿನ ನಂತರ ಸೊಸೆಯನ್ನು ಮದುವೆಯಾಗಿದ್ದೇನೆ ಎಂದು ವೃದ್ಧ ಪ್ರತಿಕ್ರಿಯಿಸುವುದನ್ನು ವಿಡಿಯೋದಲ್ಲಿ ತೋರಿಸಲಾಗಿದೆ. ಹಲವು ಮುಖ್ಯವಾಹಿನಿ ಮಾಧ್ಯಮಗಳು ಈ ವಿಡಿಯೋವನ್ನು ಪ್ರಸಾರ ಮಾಡುತ್ತ ನೈಜ ಘಟನೆ ಎಂದು ಸುದ್ದಿ ಬಿತ್ತರಿಸಿವೆ. ಹಾಗಿದ್ದರೆ ಈ ಘಟನೆ ಎಲ್ಲಿ ನಡೆದಿದೆ ಮತ್ತುಈ ಸುದ್ದಿಗಳ ಹಿಂದಿರುವ ವಾಸ್ತವವೇನು ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಮತ್ತು ಮುಖ್ಯವಾಹಿನಿಗಳಲ್ಲಿ ಪ್ರಸಾರವಾಗುತ್ತಿರುವ ವಿಡಿಯೋವನ್ನು ಪರಿಶೀಲಿಸಿದಾಗ, ಈ ವಿಡಿಯೋ ಟ್ವಿಟ್ಟರ್‌ನಲ್ಲಿ ವೈರಲ್ ಆಗಿದ್ದು, ಮಗನ ನಿಧನದ ನಂತರ ಮಾವ ಸೊಸೆಯನ್ನು ಮದುವೆಯಾಗುತ್ತಾನೆ.” ಎನ್ನುವ ಶಿರ್ಷಿಕೆಯೊಂದಿಗೆ  ಸೋಶಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿದೆ. ಸಾಮಾಜಿಕ ಮಾಧ್ಯಮಗಳ  ಬಳಕೆದಾರರು ಪರ ವಿರೋಧದ ಕಮೆಂಟ್ ಮಾಡಿದ್ದಾರೆ.
ಮತ್ತಷ್ಟು ಮಾಹಿತಿಗಾಗಿ ವಿಡಿಯೋವನ್ನು ಕೀ ವರ್ಡ್ ಬಳಸಿ ಸರ್ಚ್ ಮಾಡಿದಾಗ, ಜೂನ್ 4,  2022ರಲ್ಲಿ ಪೇಸ್‌ಬುಕ್‌ನಲ್ಲಿ ಅಪ್‌ಲೋಡ್ ಮಾಡಿದ ವಿಡಿಯೋ ಪೋಸ್ಟ್‌ ಲಭ್ಯವಾಗಿದೆ. ಲಭ್ಯವಾದ ವಿಡಿಯೋದ ಕೊನೆಯಲ್ಲಿ ಇದೊಂದು ಸ್ಕ್ರಿಪ್ಟೆಡ್‌ ವಿಡಿಯೋ ಎಂದು ಡಿಸ್‌ಕ್ಲೈಮ್ ಮಾಡಲಾಗಿದೆ.
(Source: YouTube)
ವಾಸ್ತವವಾಗಿ ಈ ವೈರಲ್ ದೃಶ್ಯಗಳು ಕಾಲ್ಪನಿಕ ಮತ್ತು ಜಾಗೈತಿ ಮೂಡಿಸುವ ಉದ್ದೇಶದಿಂದ ಪ್ರಸಾರ ಮಾಡಲಾಗಿದೆ ಎಂದು ವಿಡಿಯೋದ ಕೊನೆಯಲ್ಲಿ ತಿಳಿಸಲಾಗಿದೆ. ಅಲ್ಲದೆ 2022ರ ಹಿಂದಿನ ವಿಡಿಯೋವನ್ನು ಈಗ ಪ್ರಸಾರ ಮಾಡುತ್ತ ಸೊಸೆಯನ್ನೆ ಮದುವೆಯಾದ ಮಾವ, ಮಗ ಸತ್ತ ನಂತರ ಸೊಸೆಯನ್ನೆ ಮದುವೆಯಾದ ಮಾವ ಎನ್ನು ಕಲರ್ ಕಲರ್ ಶೀರ್ಷಿಕೆ ನೀಡುತ್ತ ಸುಳ್ಳು ಸುದ್ದಿ ಮಾಡಲಾಗಿದೆ. ಇಂತಹ ಸುಳ್ಳು ಸುದ್ದಿಗಳನ್ನು ಪ್ರಸಾರ ಮಾಡುವ, ವಿಡಿಯೋವನ್ನು ಹಂಚಿಕೊಳ್ಳುವ ಮುನ್ನ ಸತ್ಯಾಸತ್ಯತೆಗಳನ್ನು ಪರಿಶೀಲಿಸಿ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights