ಫ್ಯಾಕ್ಟ್‌ಚೆಕ್: ನಾನು ಮತ್ತು ನನ್ನ ಪೂರ್ವಜರು ಮುಸ್ಲಿಂ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ ಎಂಬ ಸುಳ್ಳು ಪೋಸ್ಟ್‌ ಹಂಚಿಕೆ

‘ನನ್ನ ಪೂರ್ವಜರು ಮುಸ್ಲಿಮರು, ನಾನೊಬ್ಬ ಮುಸ್ಲಿಂ’ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ರ್ ರೀತಿಯಲ್ಲಿ ಪೋಸ್ಟ್‌ವೊಂದು ವೈರಲ್ ಆಗಿದೆ. ಈ ಪೋಸ್ಟ್ ಎಬಿಪಿ ನ್ಯೂಸ್‌ನಲ್ಲಿ ಬರುವ ಬ್ರೇಕಿಂಗ್ ಸುದ್ದಿಯಂತೆ  ಕಾಣುವ ಗ್ರಾಫಿಕ್ ಚಿತ್ರವನ್ನು ಒಳಗೊಂಡಿದೆ.

ಹಲವು ಬಲಪಂಥೀಯ ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಇದೇ ಬ್ರೇಕಿಂಗ್ ನ್ಯೂಸ್‌ನ ಗ್ರಾಫಿಕ್ಸ್‌ ಪೋಸ್ಟ್‌ರ್‌ಅನ್ನುವ್ಯಾಪಕವಾಗಿ ಹಂಚಿಕೊಂಡಿದ್ದಾರೆ.

ಈ ಪೋಸ್ಟ್‌ ವೈರಲ್ ಆಗುತ್ತಿದಂತೆ ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಏನ್‌ಸುದ್ದಿ.ಕಾಂ ಗೆ ಸಂದೇಶಗಳ ಮೂಲಕ ಇದರ ಸತ್ಯಾಸತ್ಯೆತೆಯನ್ನು ಪರಿಶೀಲಿಸುವಂತೆ ವಿನಂತಿಸಿದ್ದಾರೆ. ಹಾಗಿದ್ದರೆ ಈ ಫೊಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ಸಾಮಾಜಿಕ ಮಾಧಯಮಗಳಲ್ಲಿ ವೈರಲ್ ಆಗಿರುವ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು, ABP ಸುದ್ದಿ ವಾಹಿನಿಯ ಟ್ವಿಟರ್ ಅಕೌಂಟ್‌ಅನ್ನು ಪರಿಶೀಲಿಸಿದಾಗ, 2018ರಲ್ಲಿ ABP ನ್ಯೂಸ್ ಮಾಡಿದ ಟೀಟ್‌ವೊಂದು ಲಭ್ಯವಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗುತ್ತಿರುವ ಪೋಸ್ಟ್‌ ನಖಲಿಯಾಗಿದೆ. ABP ಲೋಗೋವನ್ನು ಬಳಸಿಕೊಂಡು ಎಡಿಟ್ ಮಾಡಿ ABP ಚಾನಲ್‌ನ ಟೆಂಪ್ಲೇಟ್‌ನೊಂದಿಗೆ ಡಾಕ್ಟರೇಟ್ ಮಾಡಿ ಹಂಚಿಕೊಂಡಿದೆ.ಈ ಚಿತ್ರಗಳನ್ನು ಹೊಂದಿರುವ ರಾಹುಲ್ ಗಾಂಧಿಯವರ ಹೇಳಿಕೆಗಳನ್ನು ಎಬಿಪಿ ವರದಿ ಮಾಡಿಲ್ಲ ಮತ್ತು ಎಬಿಪಿ ನ್ಯೂಸ್ ನೆಟ್‌ವರ್ಕ್‌ಗೆ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದೆ.

ಸಂಬಂಧಿತ ಕೀವರ್ಡ್‌ಗಳನ್ನು ಬಳಸಿಕೊಂಡು ಸರ್ಚ್ ಮಾಡಿದೆವಾದರೂ, ವೈರಲ್ ಪೋಸ್ಟ್‌ನಲ್ಲಿ ಇರುವಂತೆ ಯಾವುದೇ ವಿಶ್ವಾಸಾರ್ಹ ಮೂಲಗಳು ಅಥವಾ ರಾಹುಲ್ ಗಾಂಧಿಯವರ ಹೇಳಿಕೆಗಳು ಕಂಡುಬಂದಿಲ್ಲ. ಅಲ್ಲದೆ ಈ ಪೋಸ್ಟ್‌ಗಳು ಸುಮಾರು 2018 ರಿಂದಲೇ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ ಎಂದು ABP ಸುದ್ದಿ ವಾಹಿನಿಯ ಟ್ವೀಟ್ ಮೂಲಕ ಸ್ಪಷ್ಟವಾಗಿದೆ.

ರಾಹುಲ್ ಗಾಂಧಿಯವರ ಇತ್ತೀಚಿನ ಅಮೆರಿಕ ಪ್ರವಾಸದ ಸಂದರ್ಭದಲ್ಲಿ ಅವರ ವಿವಿಧ ಭಾಷಣಗಳ ಬಗ್ಗೆ ವಿವಾದಗಳು ಹುಟ್ಟಿಕೊಂಡವು. ಆದರೆ, ಅಲ್ಲಿಯೂ ರಾಹುಲ್ ಗಾಂಧಿ ತಾವು ಅಥವಾ ತಮ್ಮ ಕುಟುಂಬ ಮುಸ್ಲಿಮರು ಎಂಬ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ.

ಒಟ್ಟಾರೆಯಾಗಿ ಹೇಳುವುದಾದರೆ, ರಾಹುಲ್ ಗಾಂಧಿ ತನ್ನನ್ನು ಮತ್ತು ತನ್ನ ಪೂರ್ವಜರನ್ನು ಮುಸ್ಲಿಮರು ಎಂದು ಘೋಷಿಸಿದ್ದಾರೆ ಎಂಬ ವೈರಲ್ ಪೋಸ್ಟ್‌ನಲ್ಲಿ ತಪ್ಪಾಗಿ ಹಂಚಿಕೊಳ್ಳಲಾಗಿದೆ. ಎಡಿಟ್ ಮಾಡಿ ABP ಸುದ್ದಿ ವಾಹಿನಿಯ ಟೆಂಪ್ಲೇಟ್‌ಗಳನ್ನು ಬಳಸಿಕೊಂಡು APB ಸುದ್ದಿ ವಾಹಿನಿ ಪ್ರಕಟಿಸಿದಂತೆ ಬಿಂಬಿಸಲಾಗಿದೆ. ಆದರೆ ABP ಸುದ್ದಿ ಸಂಸ್ಥೆ ಸ್ಪಷ್ಟನೆ ನೀಡಿದ್ದು ಇದಕ್ಕೂ ತನ್ನ ಸಂಸ್ಥೆಗೂ ಸಂಬಧವಿಲ್ಲ ಎಂದು ಸ್ಪಷ್ಟಪಡಿಸಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ: ವಿಶ್ವಾಸ್ ನ್ಯೂಸ್

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ಯೋಗೇಂದ್ರ ಯಾದವ್ ಅವರ ಮೂಲ ಹೆಸರು ಸಲೀಂ ಎಂಬುದು ನಿಜವೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights