ಫ್ಯಾಕ್ಟ್‌ಚೆಕ್ : ಪ್ರಧಾನಿ ಮೋದಿ ಮೆಟ್ಟಿಲುಗಳ ಮೇಲೆ ನಿಂತು ಕೈ ಬೀಸುತ್ತಿರುವಂತೆ ಎಡಿಟ್ ಮಾಡಿದ ಚಿತ್ರ ಹಂಚಿಕೆ

ನಿರ್ಮಾಣ ಹಂತದಲ್ಲಿರುವ ಕಟ್ಟಡದ ಮೆಟ್ಟಿಲುಗಳ ಮೇಲೆ ಪ್ರಧಾನಿ ಮೋದಿ ನಿಂತು ಕೈ ಬೀಸುತ್ತಿರುವ ಚಿತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

ನಿರ್ಮಾಣ ಹಂತದಲ್ಲಿರುವ, ಪ್ಲಾಸ್ಟ್ರಿಂಗ್ ಕೂಡ ಮಾಡದಂತಹ ಕಟ್ಟಡದ ಮೆಟ್ಟಿಲುಗಳ ಮೇಲೆ ನಿಂತು ವಿಕಾಸ ಪುರುಷ ಪ್ರಧಾನಿ ಮೋದಿ ಜನರತ್ತ ಕೈ ಬೀಸುತಿದ್ದಾರೆ ಎಂದು ಪ್ರತಿಪಾದಿಸಿ ಟ್ವಿಟರ್ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ. ಹಾಗಿದ್ದರೆ ಈ ದೃಶ್ಯಗಳ ಹಿಂದಿನ ವಾಸ್ತವೇನೆಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪ್ರಧಾನಿ ನರೇಂದ್ರ ಮೋದಿ ನಿರ್ಮಾಣ ಹಂತದಲ್ಲಿರುವ ಕಟ್ಟಡದ ಮೆಟ್ಟಿಲುಗಳ ಮೇಲೆ ನಿಂತು ಕೈ ಬೀಸುತ್ತಿರುವ ಫೋಟೊವನ್ನು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಪ್ರಧಾನಿ ನರೇಂದ್ರ ಮೋದಿಯವರ ಹಲವು ಚಿತ್ರಗಳು ಲಭ್ಯವಾಗಿವೆ. ವೈರಲ್ ಪೋಸ್ಟ್‌ನಲ್ಲಿ ಹಂಚಿಕೊಂಡ ಚಿತ್ರ ಕರ್ನಾಟಕದಲ್ಲಿ ನಡೆದ 2023ರ ಚುನಾವಣಾ ಸಂದರ್ಭದ್ದು ಎಂದು ತಿಳಿದುಬಂದಿದೆ.

ಮೇ ತಿಂಗಳಲ್ಲಿ ನಡೆದ ಚುನಾವಣಾ ಪ್ರಚಾರಕ್ಕೆಂದು ತುಮಕೂರಿಗೆ ಆಗಮಿಸಿದ ಚಿತ್ರ ಎಂದು ತಿಳಿದು ಬಂದಿದೆ. ಆ ಸಂದರ್ಭದಲ್ಲಿ ಮೋದಿ ಅವರು ಕೇಸರಿ ಬಣ್ಣದ ಜಾಕೆಟ್ ಧರಿಸಿದ್ದರು. ವೈರಲ್ ಚಿತ್ರ.

ಇದನ್ನು ಆಧರಿಸಿ ಮತ್ತಷ್ಟು ಸರ್ಚ್ ಮಾಡಿದಾಗ, ತುಮಕೂರಿನಲ್ಲಿ ಮೋದಿ ಭಾಗವಹಿಸಿದ್ದ ವಿವಿಧ ಕಾರ್ಯಕ್ರಮಗಳ ವಿಡಿಯೋ ಮತ್ತು ಚಿತ್ರಗಳು ಲಭ್ಯವಾಗಿವೆ. ಪ್ರಧಾನಿ ನರೇಂದ್ರ ಮೋದಿ ವೇದಿಕೆಗೆ ಪ್ರವೇಶಿಸುವ ಸಂದರ್ಭದಲ್ಲಿ ಜನರತ್ತ ಕೈ ಬೀಸುವ ವಿವಿಧ ಚಿತ್ರಗಳನ್ನು ಕಾಣಬಹುದು.

ವೈರಲ್ ಚಿತ್ರದೊಂದಿಗೆ ಈ ದೃಶ್ಯಗಳನ್ನು ಹೋಲಿಸಿದಾಗ, ನಿರ್ಮಾಣ ಹಂತದಲ್ಲಿರುವ ಕಟ್ಟಡದ ಮೆಟ್ಟಿಲುಗಳ ಮೇಲೆ ನಿಂತು ಪ್ರಧಾನಿ ಮೋದಿ  ಕೈ ಬೀಸುತ್ತಿರುವಂತೆ ಎಡಿಟ್ ಮಾಡಲಾಗಿದೆ. ಹಾಗಾಗಿ ಇದು ಎಡಿಟ್ ಮಾಡಿ ಹಂಚಲಾದ ಚಿತ್ರ ಎಂಬುದು ಸ್ಪಷ್ಟವಾಗುತ್ತದೆ.

ಒಟ್ಟಾರೆಯಾಗಿ ಹೇಳುವುದಾದರೆ, ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಫೋಟೊ 2023ರ ಚುನಾವಣಾ ಸಂದರ್ಭದ್ದು. ತುಮಕೂರಿನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಪ್ರಧಾನಿ ಮೋದಿಯವರು ನಮಸ್ಕರಿಸುತ್ತಿರುವುದನ್ನು ಮತ್ತು ಕೈ ಬೀಸುತ್ತಿರುವ ನೈಜ ಚಿತ್ರವನ್ನು ಎಡಿಟ್ ಮಾಡಿ ಪ್ರಧಾನಿಯವರನ್ನು ವ್ಯಂಗ್ಯ ಮಾಡಲು ಈ ರೀತಿ ನಿರ್ಮಾಣ ಹಂತದಲ್ಲಿರುವ ಕಟ್ಟಡದ ಮೆಟ್ಟಿಲುಗಳ ಮೇಲೆ ನಿಂತು ಪ್ರಧಾನಿ ಮೋದಿ  ಕೈ ಬೀಸುತಿದ್ದಾರೆ ಎಂಬಂತೆ ಚಿತ್ರಿಸಿದ್ದಾರೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ವರದಕ್ಷಿಣೆ ಕಿರುಕುಳದ ಘಟನೆಯನ್ನು ಲವ್ ಜಿಹಾದ್ ಎಂದು ತಪ್ಪಾಗಿ ಹಂಚಿಕೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights