ಫ್ಯಾಕ್ಟ್‌ಚೆಕ್ : ಮದುವೆ ವಿಚಾರವಾಗಿ ರೂಮರ್ಸ್ ಹಬ್ಬಿಸಬೇಡಿ ಎಂದ ನಟಿ ಸಾಯಿ ಪಲ್ಲವಿ

ಸಹಜ ಸೌಂದರ್ಯ ಮತ್ತು ತಮ್ಮ ನಟನೆ ಮೂಲಕ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಟಿ ಸಾಯಿ ಪಲ್ಲವಿ ಅವರ ಮದುವೆ ನಿರ್ದೇಶಕ ರಾಜ್‌ಕುಮಾರ್ ಪೆರಿಯಸ್ವಾಮಿ ಅವರೊಂದಿಗೆ ರಹಸ್ಯವಾಗಿ ನಡೆದಿದೆ ಎಂಬ ಪ್ರತಿಪಾದನೆಯೊಂದಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ವೊಂದು ವೈರಲ್ ಆಗುತ್ತಿದೆ.

ಸಾಯಿ ಪಲ್ಲವಿ ಏನೇ ಮಾಡಿದ್ರೂ ಸಿಕ್ಕಾಪಟ್ಟೆ ಸುದ್ದಿಯಲ್ಲಿರುತ್ತಾರೆ. ಈ ಹಿಂದೆಯೂ ಸಾಕಷ್ಟು ಬಾರಿ ಸುದ್ದಿಯಾಗಿದ್ದರು. ಇದೀಗ ಯಾರಿಗೂ ಹೇಳದೇ ಸಾಯಿ ಪಲ್ಲವಿ ಮದುವೆಯಾಗಿದ್ದಾರೆ ಅನ್ನೋ ಸುದ್ದಿ ಸೋಷಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.

ನಿರ್ದೇಶಕರ ಜೊತೆ ಹಾರ ಹಾಕಿಕೊಂಡು ನಿಂತಿರುವ ಫೋಟೋ ವೈರಲ್ ಆಗಿದ್ದು, ಅನೇಕರು ಸಾಯಿ ಪಲ್ಲವಿ  ಮತ್ತು ನಿರ್ದೇಶಕ ಜೋಡಿಗೆ ಶುಭ ಹಾರೈಸಿದ್ದಾರೆ. ಸಾಯಿ ಪಲ್ಲವಿ ಫ್ಯಾನ್ಸ್ ಪೇಜ್‍ ನಲ್ಲಿ ಫೋಟೋಗಳು ಹೆಚ್ಚಾಗಿ ಶೇರ್ ಆಗಿದ್ದು, ಯಾವುದೇ ಬಣ್ಣ, ಬ್ಯೂಟಿ ನೋಡದೇ ತಮ್ಮ ನೆಚ್ಚಿನ ನಟಿ ಮದುವೆಯಾಗಿದ್ದಾರೆ ಎಂದು ಎಲ್ಲರೂ ಕಮೆಂಟ್‌ ಮಾಡುತ್ತಿದ್ದಾರೆ. ಹಾಗಿದ್ದರೆ ಸಾಯಿ ಪಲ್ಲವಿ ಮತ್ತು ನಿರ್ದೇಶಕರನ್ನು ರಹಸ್ಯವಾಗಿ ಮದುವೆ ಆಗಿದ್ದಾರೆ ಎಂಬ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯ್ನು ಪರಿಶೀಲಿಸಿದಾಗ, ನಿಳಿ ಬಣ್ಣದ ಡ್ರೆಸ್‌ನಲ್ಲಿ ಗುಲಾಬಿ ಹಾರ ಧರಿಸಿ ನಟಿ ಸಾಯಿ ಪಲ್ಲವಿ ಮತ್ತು ಸಹನಟರೊಂದಿಗೆ ತೆಗೆಸಿರುವ ಫೋಟೊ ಸಾಯಿ ಪಲ್ಲವಿಯ ಮದುವೆಯ ಪೋಟೊ ಅಲ್ಲ ಬದಲಿಗೆ ಸಿನಿಮಾವೊಂದರ ಮುಹೂರ್ತದ ಸಂದರ್ಭದಲ್ಲಿ ತೆಗೆದ ಚಿತ್ರ ಎಂದು ತಿಳಿದು ಬಂದಿದೆ.

ತಮಿಳು ಸಿನಿಮಾ ಮುಹೂರ್ತದ ಫೋಟೋ

 ಅಸಲಿಗೆ ವೈರಲ್‌ ಆಗಿರುವ ಫೋಟೋ, ಸಾಯಿ ಪಲ್ಲವಿ ನಟಿಸುತ್ತಿರುವ ಹೊಸ ಸಿನಿಮಾ ಫೋಟೋ. ಈ ಸಿನಿಮಾದಲ್ಲಿ ಶಿವಕಾರ್ತಿಕೇಯನ್‌ ನಾಯಕನಾಗಿ ನಟಿಸುತ್ತಿದ್ದಾರೆ. ಚಿತ್ರವನ್ನು ರಾಜ್‌ಕುಮಾರ್‌ ಪೆರಿಯಸಾಮಿ ನಿರ್ದೇಶಿಸುತ್ತಿದ್ದಾರೆ. ಅಸಲಿಗೆ ಇದು ಕಳೆದ ವರ್ಷ ಆ ಸಿನಿಮಾ ಮುಹೂರ್ತದ ವೇಳೆ ತೆಗೆಯಲಾದ ಫೋಟೋ, ಶುಭ ಸಮಾರಂಭವಾಗಿದ್ದರಿಂದ ಚಿತ್ರತಂಡದ ಎಲ್ಲರಿಗೂ ಮುಹೂರ್ತ ಕಾರ್ಯಕ್ರಮದಲ್ಲಿ ಹಾರ ಹಾಕಲಾಗಿತ್ತು. ಆದರೆ ಯಾರೋ ಬೇಕಂತಲೇ ಸಾಯಿ ಪಲ್ಲವಿ ಹಾಗೂ ಆಕೆಯ ಪಕ್ಕ ನಿಂತಿದ್ದ ನಿರ್ದೇಶಕ ರಾಜ್‌ಕುಮಾರ್‌ ಇಬ್ಬರ ಫೋಟೋವನ್ನು ಮಾತ್ರ ಕ್ರಾಪ್‌ ಮಾಡಿ ಇಬ್ಬರೂ ಮದುವೆ ಆಗಿರುವಂತೆ ಸುಳ್ಳು ಸುದ್ದಿ ಹಬ್ಬಿಸಿದ್ದಾರೆ.

 

ಇದು ಶಿವಕಾರ್ತಿಕೇಯನ್‌ ನಟನೆಯ 21ನೇ ಸಿನಿಮಾವಾಗಿದ್ದು, ಈ ಚಿತ್ರದ ಮುಹೂರ್ತದ ಫೋಟೋಗಳನ್ನು ಹಂಚಿಕೊಂಡಿರುವ ಸಾಯಿ ಪಲ್ಲವಿ ಅಭಿಮಾನಿಗಳು ದಯವಿಟ್ಟು ಇಲ್ಲಸಲ್ಲದ ರೂಮರ್‌ ಹಬ್ಬಿಸಬೇಡಿ ಎಂದು ಮನವಿ ಮಾಡುತ್ತಿದ್ದಾರೆ. ಸಾಯಿ ಪಲ್ಲವಿ ಕೊನೆಯದಾಗಿ ಕಳೆದ ವರ್ಷ ತೆರೆ ಕಂಡಿದ್ದ ‘ಗಾರ್ಗಿ’ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಆದರೆ ಈ ಸಿನಿಮಾ ನಿರೀಕ್ಷಿಸಿದ ಮಟ್ಟಕ್ಕೆ ಯಶಸ್ಸು ತರಲಿಲ್ಲ. ಸದ್ಯಕ್ಕೆ ಈ ಪಿಂಪಲ್‌ ಬ್ಯೂಟಿ, ಶಿವಕಾರ್ತಿಕೇಯನ್‌ ಜೊತೆ ಹೆಸರಿಡದ ತಮಿಳು ಚಿತ್ರದಲ್ಲಿ, ನಾಗಚೈತನ್ಯ ಜೊತೆ ತೆಲುಗು ಚಿತ್ರದಲ್ಲಿ ನಟಿಸುತ್ತಿದ್ದಾರೆ.

7 ಜನರು, ಜನರ ಮುಗುಳುನಗೆ ಮತ್ತು ಪಠ್ಯ 'Rajkumar Perias... @Rajkumar_KP Follow Happy birthday dear @Sai_Pallavi92 You are the best and May God bless you with everything that's best as always! I feel blessed to have you too by my side in this! Thank you for being there! #HappyBirthdaySaiPallavi SK21 R 11:11 am 09 May 23. 250K Views' ಹೇಳುತ್ತಿದೆ ನ ಚಿತ್ರವಾಗಿರಬಹುದು

ಒಟ್ಟಾರೆಯಾಗಿ ಹೇಳುವುದಾದರೆ, ಸಾಮಾಜಿಕ ಮಾಧ್ಯಮಗಳಲ್ಲಿ  ಸಾಯಿ ಪಲ್ಲವಿ ಮದುವೆ ಆಗಿದೆ ಎಂದು ಸುಳ್ಳು ಪ್ರತಿಪಾದನೆಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ಗುಜರಾತಿನ ಹಿಂದೂ ದೇವಾಲಯದ ಕೆತ್ತನೆಗಳಿಗೆ ಹಾನಿ ಮಾಡಿದ ವ್ಯಕ್ತಿ ಮುಸ್ಲಿಂ ಅಲ್ಲ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights