ಫ್ಯಾಕ್ಟ್‌ಚೆಕ್ : ದಸರಾ ಕಲಾವಿದರಿಗೆ ನೀಡಿದ ಚೆಕ್ ಬೌನ್ಸ್‌! ಕಾಂಗ್ರೆಸ್ ಸರ್ಕಾರದ ಮತ್ತೊಂದು ಹಗರಣವೇ?

ವಿಶ್ವ ವಿಖ್ಯಾತ ನಾಡ ಹಬ್ಬ ದಸರಾ ಮಹೋತ್ಸವದಲ್ಲಿ ಭಾಗವಹಿಸಿದ್ದ ಕಲಾವಿದರಿಗೆ, ಲಲಿತ ಕಲೆ ಮತ್ತು ಕರಕುಶಲ ಉಪಸಮಿತಿ ನೀಡಿದ ಗೌರವ ಧನದ ಚೆಕ್ ಬೌನ್ಸ್‌ ಆಗಿದೆ. ದಸರಾ ಮಹೋತ್ಸವದಲ್ಲಿ ಭಾಗವಹಿಸಿದ್ದ ಕಲಾವಿದರು ಹಣ ಡ್ರಾ ಮಾಡಲು ಹೋದಾಗ ಚೆಕ್ ಬೌನ್ಸ್ ಆಗಿರುವುದು ತಿಳಿದು ಬಂದಿದೆ. ಇದು ಕಾಂಗ್ರೆಸ್ ಸರ್ಕಾರದ ಮತ್ತೊಂದು ಹಗರಣ ಎಂಬ ಹೇಳಿಕೆಯೊಂದಿಗೆ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದೆ.

ವಿಡಿಯೋ ಶೀರ್ಷಿಕೆಯಲ್ಲಿ “ಥೂ ನಿಮ್ಮ ಸರ್ಕಾರಕ್ಕೆ !! ದಸರಾ ಕಲಾವಿದರಿಗೆ ಕೊಟ್ಟ ಚೆಕ್‌ ಬೌನ್ಸ್‌ ಆಗಿದ್ದಲ್ಲದೆ ಅವರಿಗೆ ದಂಡ ಹಾಕಲಾಗಿದೆ!! ನಾಡಹಬ್ಬದಲ್ಲೂ ಹಗರಣ ಮಾಡಿದ ಕಾಂಗ್ರೆಸ್ಸನ್ನು ಖಂಡಿಸಲು ಶೇರ್‌ ಮಾಡಿ” ಎಂದು ಬರೆದುಕೊಳ್ಳಲಾಗಿದೆ. ದಸರಾ ಉತ್ಸವದಲ್ಲಿ ಕಾರ್ಯಕ್ರಮ ನೀಡುವ ಕಲಾವಿದರಿಂದ ಕಮಿಷನ್ ಬೇಡಿಕೆಯನ್ನು ಇಡಲಾಗಿತ್ತು ಎಂಬ ಆರೋಪ ಕೇಳಿಬಂದಿತ್ತು.

ನಾಡಹಬ್ಬ ದಸರಾ ಸಾಸ್ಕೃತಿಕ ಉತ್ಸವದಲ್ಲಿ ಕಾರ್ಯಕ್ರಮ ನೀಡಲು  ಅಂತಾರಾಷ್ಟ್ರೀಯ ಖ್ಯಾತೀಯ ಸರೋದ್‌ ವಾದಕ ಪಂ.ರಾಜೀವ ತಾರನಾಥ್‌ ಅವರನ್ನು ಆಹ್ವಾನಿಸಿದ ದಸರಾ ಅಧಿಕಾರಿಗಳು ಸಂಭಾವನೆಯಲ್ಲಿ ಕಮಿಷನ್‌ಗೆ ಬೇಡಿಕೆ ಇಟ್ಟ ಆರೋಪ ಜೋರು ಸದ್ದು ಮಾಡಿತ್ತು. ಈಗ ಚೆಕ್ ಬೌನ್ಸ್‌ ಪ್ರಕರಣ ಹೊರಬರುತ್ತಿದ್ದು ಇದರ ಸತ್ಯಾಸತ್ಯತೆ ಏನೆಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ಮೋದಿ ಮತ್ತೊಮ್ಮೆ ಎಂಬ ಲೋಗೋನ್ನು ಕಾಣಬಹುದಾಗಿದೆ. ಮೋದಿ ಮತ್ತೊಮ್ಮ ಎಂಬ ಪೇಜ್‌ನಿಂದ ಇದನ್ನು ಹಂಚಿಕೊಳ್ಳಲಾಗಿದೆ.

ಇದರ ಕುರಿತು ಪರಿಶೀಲನೆ ನಡೆಸಿದಾಗ ದಸರಾ ಅಂಗವಾಗಿ ಖರ್ಚು ವೆಚ್ಚದ ಲೆಕ್ಕಕ್ಕಾಗಿ ಆಯಾ ಉಪಸಮಿತಿಗಳ ಹೆಸರಿನಲ್ಲಿಯೇ ಬ್ಯಾಂಕ್‌ ಖಾತೆ ತೆರೆದು ಆ ಮೂಲಕವೇ ಕಲಾವಿದರಿಗೆ ಗೌರವ ಸಂಭಾವನೆಯ ಚೆಕ್‌ ನೀಡಲಾಗುತ್ತಿದೆ. ಉಪಸಮಿತಿಗಳ ಕಾರ್ಯಧ್ಯಕ್ಷರು, ಕಾರ್ಯದರ್ಶಿಗಳು ಈ ಖಾತೆಗಳನ್ನು ನಿರ್ವಹಿಸುತ್ತಾರೆ. ಈ ಕುರಿತು ಪ್ರಜಾವಾಣಿ ಕೂಡ ವರದಿಯನ್ನ ಮಾಡಿದೆ.

ಈ ಬಾರಿ ದಸರಾ ಅಂಗವಾಗಿ 18 ಉಪಸಮಿತಿಗಳನ್ನು ರಚಿಸಲಾಗಿತ್ತು. ಈ ಉಪಸಮಿತಿಗೆ ಈ ವರ್ಷ ಕಾರ್ಯಧ್ಯಕ್ಷರು ಮತ್ತು ಕಾರ್ಯದರ್ಶಿಗಳು ಬದಲಾಗಿದ್ದರು, ಅವರ ಸಹಿಗಳನ್ನ ಬ್ಯಾಂಕ್‌ ಖಾತೆಗೆ ಅಪ್‌ಡೇಟ್‌ ಮಾಡದ ಕಾರಾಣ ದಸರಾ ಕಲಾವಿದರ ಚೆಕ್‌ ಬೌನ್ಸ್‌ ಆಗಿದೆಯೇ ಹೊರತು ಹಗರಣ ನಡೆದಿದೆ ಎಂಬುದು ಸುಳ್ಳಿನಿಂದ ಕೂಡಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಅಧ್ಯಕ್ಷ ಮತ್ತು ಕಾರ್ಯದರ್ಶಿಗಳ ಸಹಿಯನ್ನು ಬ್ಯಾಂಕ್‌ ಖಾತೆಗೆ ಅಪ್‌ಡೆಟ್ ಮಾಡದ ಕಾರಣ ಚೆಕ್ ಬೌನ್ಸ್‌ ಆದ ಘಟನೆಯನ್ನು ಸರ್ಕಾರದ ಹಗರಣ ಎಂದು ಸುಳ್ಳು ಸುದ್ದಿಯನ್ನು ಹಂಚಿಕೊಳ್ಳಲಾಗಿದೆ. ಇಲ್ಲಿ ನೆನಪಡಬೇಕಾದ ಇನ್ನೊಂದು ಅಂಶವೆಂದರೆ ಇಂತಹ ಲೋಪಗಳು ಆಗದಂತೆ ಕ್ರಮ ವಹಿಸುವುದು ಸಮಿತಿ ಮತ್ತು ಆಡಳಿತ ಸಂಸ್ಥೆಗಳ ಜವಬ್ದಾರಿಯಾಗಿರುತ್ತದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್ : ಡೀಪ್‌ಫೇಕ್ ತಂತ್ರಜ್ಞಾನಕ್ಕೆ ಗುರಿಯಾದ ನಟಿ ರಶ್ಮಿಕಾ ಮಂದಣ್ಣ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights