FACT CHECK | ಪಿಕ್‌ಅಪ್‌ ವ್ಯಾನಿನಲ್ಲಿ ಪತ್ತೆಯಾದ EVM ಯಂತ್ರಗಳ ವಿಡಿಯೋದ ಅಸಲೀಯತ್ತೇನು?

ಈ ವಿಡಿಯೋ ನೋಡಿ ವಾರಣಾಸಿಯಲ್ಲಿನ ಪಿಕ್‌ಅಪ್‌ ವ್ಯಾನಿನಲ್ಲಿ ಚುನಾವಣೆಯಲ್ಲಿ ಮತ ಚಲಾಯಿಸಿದ EVM ಯಂತ್ರಗಳು, ವಿವಿಪ್ಯಾಟ್‌ಗಳು ಕಂಡುಬಂದಿದೆ. ಈ ವಿಡಿಯೋ ನೋಡಿದ ಮೇಲೂ ನೀವು ಈ ಬಾರಿಯ ಲೋಕಸಭೆ ಚುನಾವಣೆ  ಪಾರದರ್ಶಕತೆಯಿಂದ ನಡೆಯುತ್ತಿದೆ ಎಂದು ನಂಬುತ್ತೀರಾ?” ಎಂಬ ಬರಹದೊಂದಿಗೆ ವೈರಲ್ ವಿಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ.

 

ಈ ವಿಡಿಯೋದಲ್ಲಿ ಪಿಕ್‌ಅಪ್‌ ವ್ಯಾನ್‌ವೊಂದರಲ್ಲಿ ವಿವಿಧ ಪೆಟ್ಟಿಗೆಗಳಿದ್ದು, ಆ ಪೆಟ್ಟಿಗೆಗಳ ಒಳಗೆ EVM ಯಂತ್ರಗಳು, ವಿವಿಪ್ಯಾಟ್ ಗಳು ಕಂಡುಬಂದಿದೆ. ಈ ದೃಶ್ಯಗಳನ್ನು ಹಲವರು ತಮ್ಮ ಮೊಬೈಲ್‌fಳನ ಚಿತ್ರೀಕರಿಸುತ್ತಿರುವುದನ್ನು ನೋಡಬಹುದು. ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಈ ವಿಡಿಯೋವನ್ನು ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ಹಾಗಿದ್ದರೆ ಈ ವಿಡಿಯೋದಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ವಿಡಿಯೋಗಳಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ,  2022ರ ಮಾರ್ಚ್ 9ರಂದು ಪ್ರಕಟವಾಗಿದ್ದ ಇಂಡಿಯನ್ ಎಕ್ಸ್‌ಪ್ರೆಸ್‌ ಮತ್ತು ಎನ್‌ಡಿಟಿವಿ ವರದಿ ಲಭ್ಯವಾಗಿದೆ. ಈ ವರದಿಗಳ ಆಧಾರದ ಮೇಲೆ ಈ ಘಟನೆಗೂ, ದೇಶದಲ್ಲಿ ನಡೆಯುತ್ತಿರುವ 2024ರ ಲೋಕಸಭೆ ಚುನಾವಣೆಗೂ ಯಾವುದೇ  ಸಂಬಂಧವಿಲ್ಲ ಎಂಬುದು ಪ್ರಾಥಮಿಕವಾಗಿ ದೃಢಪಟ್ಟಿದೆ.

ಈ ವಿಡಿಯೋ 2022ರ ಉತ್ತರಪ್ರದೇಶದ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಾಗಿದೆ ಎಂಬುದು ಖಚಿತವಾಗಿದೆ. ಇನ್ನು ಈ ಘಟನೆಗೆ ಸಂಬಂಧಪಟ್ಟಂತೆ 2022ರಲ್ಲಿ ವಾರಣಾಸಿಯ ಕಮಿಷನರ್ ದೀಪಕ್ ಅಗರ್ವಾಲ್ ಅವರು “ವಾಹನದಲ್ಲಿ ಕೊಂಡೊಯ್ಯಲಾಗುತ್ತಿದ್ದಂತಹ ವಿವಿ ಪ್ಯಾಟ್‌ಗಳು ಚುನಾವಣಾ ಸಿಬ್ಬಂದಿಗಳ ತರಬೇತಿಗಾಗಿ ಮತ್ತು ಜನರಲ್ಲಿ ಅರಿವು ಮೂಡಿಸುವ ಸಲುವಾಗಿ ಈ ಪ್ರಾಯೋಗಿಕ ಯಂತ್ರಗಳನ್ನ ಬಳಸಲಾಗುತ್ತದೆ” ಎಂಬುದನ್ನ ಸ್ಪಷ್ಟಪಡಿಸಿದ್ದರು.

ಈ ಘಟನೆಯ ನಂತರ ವಾರಣಾಸಿಯ ಡಿಎಂ ಕುಶಲ್‌ರಾಜ್ ಶರ್ಮಾ ಅವರು 8 ಮಾರ್ಚ್ 2022 ರಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, “ಎರಡನೇ ಹಂತದ ತರಬೇತಿಗಾಗಿ 20 EVM ಗಳನ್ನು ಪಿಕ್‌ಅಪ್‌ ವ್ಯಾನ್ ನಲ್ಲಿ ಕೊಂಡೊಯ್ಯಲಾಗಿತ್ತು. ಆದರೆ ಇದನ್ನು ಕೆಲವು ಜನರು ತಡೆದಿದ್ದರು. ಹೀಗಾಗಿ ಜನರಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾಗಿದೆ. ಇದು ಕೇವಲ ತರಬೇತಿಗಾಗಿ ಬಳಸುವ ಇವಿಎಂ ಯಂತ್ರಗಳಾಗಿದೆ.” ಎಂದು ಸ್ಪಷ್ಟನೆಯನ್ನು ಕೂಡ ನೀಡಿದ್ದರು.

 

ಇನ್ನು ಇತ್ತೀಚಿಗೆ ವಾರಣಾಸಿಯಲ್ಲಿ ಮತಚಲಾವಣೆ ಮಾಡಿದ EVM ಯಂತ್ರಗಳು ಮತ್ತು ವಿವಿಪ್ಯಾಟ್ ಗಳು ಪತ್ತೆಯಾಗಿದೆ ಎಂಬುದು ಕೂಡ ಸುಳ್ಳು. ಏಕೆಂದರೆ ವಾರಣಾಸಿಯಲ್ಲಿ ಜೂನ್ 1ರಂದು ಲೋಕಸಭೆ ಚುನಾವಣೆಗೆ ಮತದಾನ ನಡೆಯಲಿದ್ದು, ಇದು 7ನೇ ಮತ್ತು ಕೊನೆಯ ಹಂತದ ಚುನಾವಣೆಯಾಗಿದೆ. ಇನ್ನು  ದೇಶಾದ್ಯಂತ ಜೂನ್ 4 ರಂದು ಮತ ಎಣಿಕೆ ಕಾರ್ಯ ನಡೆಯಲಿದೆ.

 

 

 

 

 

 

 

 

 

 

 

 

 

ಒಟ್ಟಾರೆಯಾಗಿ ಹೇಳುವುದಾದರೆ,2022ರಲ್ಲಿ ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಯ ಹಿನ್ನಲೆಯಲ್ಲಿ ಚುನಾವಣಾ ಸಿಬ್ಬಂದಿಗಳಿಗೆ ತರಬೇತಿ ನೀಡುವ ಸಲುವಾಗಿ EVM ಮತ್ತು ವಿವಿ ಪ್ಯಾಟ್‌ಗಳನ್ನು ತೆರೆದ ವಾಹನದಲ್ಲಿ ಕೊಂಡೊಯ್ಯೂವಾಗ ಜನರು ವಾಹನವನ್ನು ತಡೆದಿದ್ದರಿಂದ ಗೊಂದಲದ ವಾತಾವರಣ ಸೃಷ್ಟಿಯಾಗಿದ್ದ ಹಳೆಯ ಘಟನೆಯನ್ನು, ವಾರಣಾಸಿಯಲ್ಲಿ ಮತ ಚಲಾಯಿಸಿದ EVM ಯಂತ್ರಗಳು ಮತ್ತು ವಿವಿಪ್ಯಾಟ್ ಗಳು ಪಿಕಪ್ ವ್ಯಾನ್‌ನಲ್ಲಿ ಕೊಂಡೊಯ್ಯೊಲಾಗುತ್ತಿದೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಹೈದರಾಬಾದ್‌ನ ಬಹದ್ದೂರ್‌ಪುರ ಕ್ಷೇತ್ರದ ಮತಗಟ್ಟೆಯಲ್ಲಿ ನಕಲಿ ಮತದಾನ ನಡೆದಿದೆ ಎಂದು 2022ರ ಹಳೆಯ ವಿಡಿಯೋ ಹಂಚಿಕೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights