FACT CHECK | 450 ಅಡಿ ಎತ್ತರದ ಬಾಬಾ ಸಾಹೇಬ್ ಅಂಬೇಡ್ಕರ್ ಪ್ರತಿಮೆಯನ್ನು ಚೀನಾ ಸ್ಥಾಪಿಸುತ್ತಿದೆಯೇ?

ಚೀನಾದಲ್ಲಿ 450 ಅಡಿ ಎತ್ತರದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಯನ್ನು ಸ್ಥಾಪಿಸಲಾಗುತ್ತಿದೆ ಮತ್ತು ಇದು ವಿಶ್ವದ ಅತಿ ಎತ್ತರದ ಹಾಗೂ  ಅತ್ಯಂತ ದುಬಾರಿ ಕಂಚಿನ ಪ್ರತಿಮೆ ಎಂದು ಹೇಳುತ್ತಾ, ನಿರ್ಮಾಣ ಹಂತದಲ್ಲಿರುವ ಅಂಬೇಡ್ಕರ್ ಅವರ ಪ್ರತಿಮೆಯ ಫೋಟೊವನ್ನು ಸಾಮಾಜಿಕ ಮಾಧ್ಯಮದಲ್ಲಿ  ಪೋಸ್ಟ್  ಮಾಡಲಾಗಿದೆ.

ಆರ್ಕೈವ್ ಮಾಡಿದ ಪೋಸ್ಟ್ ಅನ್ನು ಇಲ್ಲಿ ನೋಡಬಹುದು.

ಹಾಗಿದ್ದರೆ ಅಂಬೇಡ್ಕರ್‌ ಗೌರವಾರ್ಥ ನಿಜವಾಗಿಯೂ ಚೀನಾದಲ್ಲಿ 450 ಅಡಿ ಅತೀ ಎತ್ತರದ ಕಂಚಿನ ಪ್ರತಿಮೆಯನ್ನು ಸ್ಥಾಪಿಸಲಾಗುತ್ತಿದೆ ಎಂಬುದು ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಚೀನಾದಲ್ಲಿ ಅಂಬೇಡ್ಕರ್ ಅವರ ಬೃಹತ್ ಪ್ರತಿಮೆ ಸ್ಥಾಪನೆ ಕುರಿತು ಗೂಗಲ್‌ ಸರ್ಚ್ ಮಾಡಿದಾಗ, ಚೀನಾ ಮತ್ತು ಭಾರತೀಯ ಮಾಧ್ಯಮಗಳಲ್ಲಿ ಈ ಕುರಿತಾದ ಯಾವುದೇ ಮಾಹಿತಿಗಳು ಲಭ್ಯವಾಗಿಲ್ಲ.

ವೈರಲ್ ಪೋಸ್ಟ್‌ನಲ್ಲಿ ನಿರ್ಮಾಣ ಹಂತದಲ್ಲಿರುವ ಅಂಬೇಡ್ಕರ್ ಪ್ರತಿಮೆಯ ಫೋಟೋವನ್ನು 2023 ರಲ್ಲಿ ವಿಜಯವಾಡದಲ್ಲಿ ಅಂಬೇಡ್ಕರ್ ಪ್ರತಿಮೆ ನಿರ್ಮಾಣದ ಸಮಯದಲ್ಲಿ ತೆಗೆದುಕೊಳ್ಳಲಾಗಿದೆ ಎಂದು ದಿ  ಹಿಂದೂ (ಆರ್ಕೈವ್) ವೆಬ್‌ಸೈಟ್ ಹೇಳಿದೆ. 125 ಅಡಿ ಎತ್ತರದ ಈ ಪ್ರತಿಮೆಯನ್ನು ಹೈದರಾಬಾದ್‌ನ ಕೆಪಿಸಿ ಪ್ರಾಜೆಕ್ಟ್ಸ್ ಲಿಮಿಟೆಡ್,  ವಿಜಯವಾಡದಲ್ಲಿ  ಸ್ಥಾಪಿಸಿದೆ. ಪ್ರತಿಮೆಯನ್ನು ತಯಾರಿಸಲು ಆಂಧ್ರ ಪ್ರದೇಶ ಸರ್ಕಾರವು ಚೀನಾದ ಕಂಪನಿಗಳನ್ನು ಸಂಪರ್ಕಿಸಿದೆ ಎಂದು ಬಿಬಿಸಿ ವರದಿ ಮಾಡಿದೆ.

ಆದರೆ ಮುಂಬೈನಲ್ಲಿ ನಿರ್ಮಾಣವಾಗುತ್ತಿರುವ 450 ಅಡಿ (350 ಅಡಿ ಪ್ರತಿಮೆ, 100 ಅಡಿ ಪೀಠ) ಅಂಬೇಡ್ಕರ್ ಕಂಚಿನ ಪ್ರತಿಮೆಯ ಕೆಲವು ಭಾಗಗಳನ್ನು ಚೀನಾದಿಂದ ಆಮದು ಮಾಡಿಕೊಳ್ಳಲಾಗುತ್ತಿದೆ ಎಂದು ಕೇಂದ್ರ ಸಚಿವ ರಾಮದಾಸ್ ಅಠವಳೆ ಹೇಳಿದ್ದಾರೆ. ಕೆಲಸದ ಹಂತದಲ್ಲಿರುವ ಈ ಪ್ರತಿಮೆ ಪೂರ್ಣಗೊಂಡರೆ  ಇದು, ‘ಐಕ್ಯತಾ ಪ್ರತಿಮೆ’ (ಸ್ಟ್ಯಾಚು ಆಫ್ ಯುನಿಟಿ ) ಮತ್ತು ದೇಶದ ಎರಡನೇ ಅತಿ ಎತ್ತರದ ಪ್ರತಿಮೆಯಾಗಲಿದೆ.

ಒಟ್ಟಾರೆಐಆಗಿ ಹೇಳುವುದಾದರೆ, ಚೀನಾ ಸರ್ಕಾರವು ತಮ್ಮ ದೇಶದಲ್ಲಿ 450 ಅಡಿ ಅಂಬೇಡ್ಕರ್ ಪ್ರತಿಮೆಯನ್ನು ಸ್ಥಾಪಿಸುತ್ತಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಮಾಡಲಾದ ಪ್ರತಿಪಾದನೆ ಸುಳ್ಳು. ಅಂತಹ ಯಾವುದೇ ನಿರ್ಮಾಣನ್ನು ಚೀನಾ ಸರ್ಕಾರ ಮಾಡುತ್ತಿಲ್ಲ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಮತ್ತೆ ವೈರಲ್ ಆಗ್ತಿದೆ ಎಂ.ಬಿ ಪಾಟೀಲ್ ಬರೆದಿದ್ದರು ಎನ್ನಲಾದ ನಕಲಿ ಪತ್ರ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights