FACT CHECK | ಪ್ರತಿ ಮನೆಗಳಿಗೆ ಉಚಿತ ವೈ-ಫೈ ನೀಡಲಿದೆಯೇ ಕೇಂದ್ರ ಸರ್ಕಾರ?

ಕೇಂದ್ರ ಸರ್ಕಾರವು ತನ್ನ ಸಂಚಾರ್ ಸಾಥಿ ವೆಬ್ಸೈಟ್‌ನಲ್ಲಿ “ನಿಮ್ಮ ISP (ಇಂಟರ್ನೆಟ್ ಸರ್ವಿಸ್ ಪ್ರೊವೈಡರ್) ಅನ್ನು ತಿಳಿಯಿರಿ” ಸೌಲಭ್ಯದ ಮೂಲಕ ಪ್ರತಿ ಮನೆಗಳಿಗೆ ಉಚಿತ ವೈಫೈಯನ್ನು ಒದಗಿಸುತ್ತಿದೆ. ಈ ಸೌಲಭ್ಯವನ್ನು ನೀವು ಪಡೆಯಿರಿ ಮತ್ತು ಈ ಕುರಿತು ನಿಮ್ಮ ಇತರ ಸ್ನೇಹಿತರಿಗೂ ಹಂಚಿಕೊಳ್ಳಿ ಎಂದು ಇನ್‌ಸ್ಟಾಗ್ರಾಂನ ಕ್ಲಾಸಿಫೈಡ್ ಎಐ ಎಂಬ ಖಾತೆಯಿಂದ ಮಾಹಿತಿಯೊಂದನ್ನು ಹಂಚಿಕೊಳ್ಳಲಾಗಿದೆ.

ಸಾಮಾಜಿಕ ಮಾಧ್ಯಮಗಳಲ್ಲಿ ಈ ವಿಡಿಯೋವನ್ನು ವೀಕ್ಷಿಸಿದ ಹಲವರು ಸಂಚಾರ್‌ ಸಾಥಿ ವೆಬ್‌ಸೈಟ್‌ಗೆ ಭೇಟಿ ನೀಡಿ, ಈ ಕುರಿತು ಪರಿಶೀಲನೆ ನಡೆಸುತ್ತಿದ್ದಾರೆ. ಇನ್ನೂ ಕೆಲವರು ಇದರ ಸತ್ಯಾಸತ್ಯತೆಯನ್ನು ಪರಿಶೀಲಿಸುವಂತೆ ಹಲವು ಬಳಕೆದಾರರು ಏನ್‌ಸುದ್ದಿ.ಕಾಂ ಅನ್ನು ವಿನಂತಿಸಿದ್ದಾರೆ. ಹಾಗಿದ್ದರೆ ನಿಜವಾಗಿಯೂ ಕೇಂದ್ರ ಸರ್ಕಾರ “ನಿಮ್ಮ ISP ತಿಳಿಯಿರಿ” ಎಂಬ ಆಯ್ಕೆಯ ಮೂಲಕ ಉಚಿತ ವೈಫೈಯನ್ನು ನೀಡುತ್ತಿದೆಯೇ ಎಂಬುದನ್ನ ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್‌

ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ಈ ವಿಡಿಯೋ ಕುರಿತು ಪರಿಶೀಲನೆ ನಡೆಸಲು  ಗೂಗಲ್ ಸರ್ಚ್ ಮಾಡಿದ ವೇಳೆ PIB (ಪ್ರೆಸ್ ಇನ್‌ಫಾರ್‌ಮೇಶನ್‌ ಬ್ಯೂರೋ) ತನ್ನ ಫ್ಯಾಕ್ಟ್‌ಚೆಕ್‌ ಎಕ್ಸ್ ಖಾತೆಯಲ್ಲಿ ಹಂಚಿಕೊಂಡ ಪೋಸ್ಟ್‌ವೊಂದು ಲಭ್ಯವಾಗಿದೆ. ಈ ಪೋಸ್ಟ್‌ನಲ್ಲಿ ಫ್ರೀ ವೈಫೈ ನೀಡಲಾಗುತ್ತದೆ ಎಂಬ ಪೋಸ್ಟ್ ಸಂಪೂರ್ಣವಾಗಿ ಸುಳ್ಳಿನಿಂದ ಕೂಡಿದೆ. ಸಂಚಾರ್‌ ಸಾತಿ ವೆಬ್‌ಸೈಟ್‌ ಕೇವಲ ನಾಗರಿಕರ ಇಂಟರ್ನೆಟ್ ಸರ್ವಿಸ್ ಪ್ರೊವೈಡ್ ಕುರಿತ ಮಾಹಿತಿಯನ್ನು ನೀಡಲು ಉಪಯುಕ್ತವಾಗಿದೆ ಎಂದು ತಿಳಿಸಿದೆ.

 

ಇನ್ನೂ ಹೆಚ್ಚಿನ ಮಾಹಿತಿಗಾಗಿ ಸಂಚಾರ್‌ ಸಾತಿ ವೆಬ್‌ಸೈಟ್‌ ಅನ್ನು ಪರಿಶೀಲಿಸಿದಾಗ,  ಉಚಿತ ವೈಫೈ ಯೋಜನೆ ಸಂಬಂಧಿಸಿದಂತೆ ವೆಬ್‌ಸೈಟ್‌ನಲ್ಲಿ ಯಾವುದೇ ಮಾಹಿತಿ ಲಭ್ಯವಿಲ್ಲ .ಈ ಕುರಿತು ರಾಷ್ಟ್ರೀಯ ಸುದ್ದಿ ಮಾಧ್ಯಮಗಳು ಯಾವುದಾದರೂ ವರದಿಯನ್ನು ಪ್ರಕಟಿಸಿವೆ ಅಂತಲೂ ಪರಿಶೀಲನೆ ನಡೆಸಲಾಯಿತು. ಆದರೆ ಈ ಕುರಿತು ಅಂತಹ ಯಾವುದೇ ವರದಿಗಳು ರಾಷ್ಟ್ರೀಯ ಮಾಧ್ಯಮಗಳಾಗಲಿ ಅಥವಾ ಸ್ಥಳೀಯ ಮಾಧ್ಯಮಗಳೇ ಆಗಲಿ ಪ್ರಕಟಿಸಿಲ್ಲ.

 

1 ಜೂನ್ 2024ಎಂದು ಲೋಕಸಭಾ ಚುನಾವಣೆಯ ಕೊನೆಯ (7ನೇ) ಹಂತದ ಮತದಾನ ಮುಕ್ತಾಯವಾಗಿದ್ದು ಜೂನ್ 4ಕ್ಕೆ ಫಲಿತಾಂಶ ಹೊರಬೀಳಲಿದೆ. ಅಷ್ಟರಲ್ಲಿ ಇಂತಹ ಯೋಜನೆಯನ್ನು ಕೇಂದ್ರ ಸರ್ಕಾರ ಘೋಷಿಸಲು ಸಾಧ್ಯವಿಲ್ಲ.

ಒಟ್ಟಾರೆಯಾಗಿ ಹೇಳುವುದಾದರೆ, ಈ ಎಲ್ಲಾ ಅಂಶಗಳನ್ನು ಗಮನಿಸಿದಾಗ ಕೇಂದ್ರ ಸರ್ಕಾರವು ಭಾರತದ ನಾಗರಿಕರಿಗೆ ಉಚಿತವಾಗಿ ವೈಫೈ ಅಳವಡಿಸಿ ಕೊಡಲಿದೆ ಎಂಬ ವಿಡಿಯೋ ತಪ್ಪುದಾರಿಗೆಳೆಯುವಂತಿದೆ. ವಾಸ್ತವವಾಗಿ ಅಂತಹ ಯಾವುದೇ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿಲ್ಲ. ಹಾಗಾಗಿ ಪೊಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | 450 ಅಡಿ ಎತ್ತರದ ಬಾಬಾ ಸಾಹೇಬ್ ಅಂಬೇಡ್ಕರ್ ಪ್ರತಿಮೆಯನ್ನು ಚೀನಾ ಸ್ಥಾಪಿಸುತ್ತಿದೆಯೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights