FACT CHECK | ತಿರುಪತಿ ದೇವಸ್ಥಾನದ ವಿಶೇಷ ದರ್ಶನದ ಟಿಕೆಟ್ ಬೆಲೆಗಳನ್ನು ಇಳಿಸಲಾಗಿದೆ ಎಂಬುದು ಸುಳ್ಳು

ತಿರುಪತಿ ದೇವಸ್ಥಾನದಲ್ಲಿ ವಿಶೇಷ ದರ್ಶನದ ಟಿಕೆಟ್ ಬೆಲೆಗಳನ್ನು ಇಳಿಸಲಾಗಿದೆ ಮತ್ತು ಲಡ್ಡು ಪ್ರಸಾದದ ಬೆಲೆಗಳನ್ನೂ ಇಳಿಸಲಾಗಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಹೇಳಿಕೆಗಳನ್ನು ಹಂಚಿಕೊಳ್ಳಲಾಗುತ್ತಿದೆ.

ವಾಟ್ಸಾಪ್‌ ನಲ್ಲಿ ಕಂಡುಬಂದ ಈ ಹೇಳಿಕೆಯಲ್ಲಿ, “ತಿರುಮಲ ವಿಶೇಷ ದರ್ಶನ ಟಿಕೆಟ್ ದರ ಇಳಿಕೆ- ಈ ಹಿಂದೆ 300 ರೂ.ನಿಂದ 200 ರೂ. ಲಡ್ಡು ರೂ.50ರಿಂದರೂ.25ಕ್ಕೆ ಇಳಿಕೆಯಾಗಿದೆ” ಎಂದಿದೆ.

 

Fact Check: ತಿರುಪತಿ ದೇಗುಲದಲ್ಲಿ ವಿಶೇಷ ದರ್ಶನ, ಲಡ್ಡು ಬೆಲೆ ಇಳಿಸಲಾಗಿದೆಯೇ?
ವಾಟ್ಸಾಪ್‌ ನಲ್ಲಿ ಹರಿದಾಡುತ್ತಿರುವ ಸಂದೇಶ

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಫೋಟೋದಲ್ಲಿರುವ ಮಾಹಿತಿಯನ್ನು ಪರಿಶೀಲಿಸಲು , ತಿರುಪತಿ ದೇಗುಲದ ವೆಬ್‌ಸೈಟ್ ನೋಡಿದ್ದು, ಇದರಲ್ಲಿ ಟಿಕೆಟ್ ಬೆಲೆ ₹300 ಇರುವುದಾಗಿ ಇದೆ ಜೊತೆಗೆ ವೈರಲ್ ಹೇಳಿಕೆಯಲ್ಲಿ ತಿಳಿಸಿದಂತೆ ₹200 ಗೆ ಇಳಿಕೆಯಾಗಿಲ್ಲ ಎಂಬುದನ್ನ ಸ್ಪಷ್ಟಪಡಿಸಿದೆ.

ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ಸಂದೇಶದಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಇಓ ಸ್ಪಷ್ಟಪಡಿಸಿದ್ದಾರೆ. ಭಕ್ತರಿಗೆ ಮೋಸ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ಅದೇ ರೀತಿ ಭಕ್ತರು ಸುಳ್ಳು, ದಲ್ಲಾಳಿಗಳನ್ನು ನಂಬಿ ಮೋಸ ಹೋಗಬಾರದು ಎಂದು ಸಲಹೆ ನೀಡಿದರು.

 

Fact Check: ತಿರುಪತಿ ದೇಗುಲದಲ್ಲಿ ವಿಶೇಷ ದರ್ಶನ, ಲಡ್ಡು ಬೆಲೆ ಇಳಿಸಲಾಗಿದೆಯೇ?
ದೇಗುಲ ವೆಬ್‌ ಸೈಟ್ ಸ್ಕ್ರೀನ್‌ ಶಾಟ್

ಇದೇ ವಿಚಾರ ಕುರಿತಂತೆ ಟಿಟಿಡಿ ನ್ಯೂಸ್‌ ಕೂಡ ತಿರುಪತಿ ತಿರುಮಲ ದೇಗುಲ ಟ್ರಸ್ಟ್ ಪ್ರಕಟಣೆಯನ್ನು ಪ್ರಕಟಿಸಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಗಳು ಕಂಡುಬಂದಂತೆ ದರ್ಶನ ಟಿಕೆಟ್ ಬೆಲೆ ಮತ್ತು ಲಡ್ಡು ಪ್ರಸಾದದ ದರದಲ್ಲಿ ಯಾವುದೇ ವ್ಯತ್ಯಾಸ ಇಲ್ಲ ಎಂಬುದನ್ನು ಸ್ಪಷ್ಟಪಡಿಸಿದೆ.

ಇದೇ ವೇಳೆ ನಾವು 22 ಜೂನ್‌ , 2024ರಂದು ಎಕ್ಸ್ ನಲ್ಲೂ ಟಿಟಿಡಿ ಹೇಳಿಕೆಯನ್ನು ಕಂಡುಕೊಂಡಿದ್ದು, ವಿಶೇಷ ದರ್ಶನದ ಬೆಲೆ ಮತ್ತು ಲಡ್ಡು ಪ್ರಸಾದದ ಬೆಲೆ ಇಳಿಕೆಯಾಗಿದೆ ಎನ್ನುವುದು ಸುಳ್ಳು ಎಂದು ಹೇಳಿದೆ.

 

 

ಇತ್ತ ತಿರುಮಲ ಲಡ್ಡು ಬೆಲೆ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿರುವ ಪ್ರಚಾರಕ್ಕೆ ಟಿಟಿಡಿ ಪ್ರತಿಕ್ರಿಯೆ ನೀಡಿದೆ. ತಿರುಮಲ ಲಡ್ಡು ಬೆಲೆ 50 ರೂಪಾಯಿ ಇಂದ 25 ರೂಪಾಯಿಗೆ ಹಾಗೂ ವಿಶೇಷ ಪ್ರವೇಶ ಟಿಕೆಟ್ ಗಳನ್ನು 300 ರೂಪಾಯಿ ಇಂದ 200 ರೂಪಾಯಿಗೆ ಇಳಿಸಲಾಗಿದೆ ಎಂಬ ಪೋಸ್ಟ್ ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಈ ಹಿನ್ನೆಲೆಯಲ್ಲಿ ಇದಕ್ಕೆ ಪ್ರತಿಕ್ರಿಯಿಸಿರುವ ಟಿಟಿಡಿ ಇವೆಲ್ಲವೂ ವದಂತಿ ಎಂದು ಸ್ಪಷ್ಟಪಡಿಸಿದೆ.

Fact Check: ತಿರುಪತಿ ದೇಗುಲದಲ್ಲಿ ವಿಶೇಷ ದರ್ಶನ, ಲಡ್ಡು ಬೆಲೆ ಇಳಿಸಲಾಗಿದೆಯೇ?

ನಕಲಿ ಪ್ರಚಾರಗಳಿಗೆ ಮರುಳಾಗಬೇಡಿ ಎಂದು ಟಿಟಿಡಿ ಎಚ್ಚರಿಕೆ ನೀಡಿದ್ದು, ತಿರುಮಲ ಶ್ರೀಗಳ ವಿಶೇಷ ಪ್ರವೇಶ ದರ್ಶನಕ್ಕೆ ಟಿಟಿಡಿ ವೆಬ್‌ಸೈಟ್‌ನಲ್ಲಿ ಟಿಕೆಟ್ ಲಭ್ಯವಾಗಲಿದೆ ಎಂದು ದೇವಸ್ತಾನಂ ಮಂಡಳಿ ತಿಳಿಸಿದೆ. ಟಿಟಿಡಿ ವೆಬ್‌ಸೈಟ್ ಹೊರತುಪಡಿಸಿ, ವಿವಿಧ ರಾಜ್ಯಗಳ ಪ್ರವಾಸೋದ್ಯಮ ಇಲಾಖೆಗಳಿಗೆ ಟಿಟಿಡಿ ಕೆಲವು ಟಿಕೆಟ್‌ಗಳನ್ನು ಹಂಚಿಕೆ ಮಾಡುತ್ತಿದೆ. ಟಿಕೆಟ್‌ಗಳನ್ನು ಬಯಸುವವರು ಆಯಾ ಪ್ರವಾಸೋದ್ಯಮ ಇಲಾಖೆಗಳ ವೆಬ್‌ಸೈಟ್‌ಗಳಿಗೆ ಭೇಟಿ ನೀಡುವಂತೆ ಅದು ಮನವಿ ಮಾಡಿದೆ.

ಆದರೆ ಕೆಲವು ದಲ್ಲಾಳಿಗಳು ಈ ಪ್ರವಾಸೋದ್ಯಮ ಇಲಾಖೆಗಳ ಮೂಲಕ ಟಿಕೆಟ್ ನೀಡುವುದಾಗಿ ಹೇಳಿ ಹೆಚ್ಚಿನ ದರ ವಸೂಲಿ ಮಾಡುತ್ತಿರುವುದು ಗಮನಕ್ಕೆ ಬಂದಿದೆ ಎಂದು ಟಿಟಿಡಿ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಪ್ರವಾಸೋದ್ಯಮ ಇಲಾಖೆಗಳ ಮೂಲಕ ವಿಶೇಷ ಪ್ರವೇಶ ದರ್ಶನ ಟಿಕೆಟ್ ಖರೀದಿಸಲು ಇಚ್ಛಿಸುವ ಭಕ್ತರು. ಅಧಿಕೃತ ವೆಬ್‌ಸೈಟ್‌ಗೆ ನೇರವಾಗಿ ಭೇಟಿ ನೀಡಲು ಸೂಚಿಸಲಾಗಿದೆ. ದಲ್ಲಾಳಿಗಳಿಗೆ ಮೋಸ ಹೋಗಬೇಡಿ. ಅವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಜಾಗೃತ ಇಲಾಖೆ ಎಚ್ಚರಿಕೆ ನೀಡಿದೆ.

ಪ್ರವಾಸೋದ್ಯಮ ವೆಬ್‌ಸೈಟ್ ಮೂಲಕ ಟಿಕೆಟ್ ಕಾಯ್ದಿರಿಸಲು ದಲ್ಲಾಳಿಗಳು ಭಾರಿ ಹಣ ವಸೂಲಿ ಮಾಡುತ್ತಿರುವುದು ನಮ್ಮ ಗಮನಕ್ಕೆ ಬಂದಿದ್ದು, ಬೆಲೆ ಹೆಚ್ಚಾಗಿರುತ್ತದೆ. ವಿಶೇಷ ಪ್ರವೇಶ ದರ್ಶನ ಟಿಕೆಟ್ ಬುಕ್ ಮಾಡುವಲ್ಲಿ ಅಮಾಯಕ ಭಕ್ತರಿಗೆ ವಂಚನೆ ಮಾಡುವ ದಲ್ಲಾಳಿಗಳ ವಿರುದ್ಧ ಟಿಟಿಡಿ ವಿಜಿಲೆನ್ಸ್ ಇಲಾಖೆ ಕಠಿಣ ಕ್ರಮ ಕೈಗೊಳ್ಳಲಿದೆ. ಮೇಲಾಗಿ ಇಂತಹ ದಲ್ಲಾಳಿಗಳ ಮಾತನ್ನು ನಂಬಿ ಭಕ್ತರು ಮೋಸ ಹೋಗಬೇಡಿ ಎಂದು ಮನವಿ ಮಾಡಿಕೊಳ್ಳುತ್ತಿರುವುದಾಗಿ ಟಿಟಿಡಿ 22 ಜೂನ್‌ , 2024ರಂದು ಎಕ್ಸ್ ನಲ್ಲಿ ಸ್ಪಷ್ಟನೆ ನೀಡಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಚಿರತೆ ಮೊಸಳೆಯನ್ನು ಭೇಟೆಯಾಡಿದ ದೃಶ್ಯ ಬಂಟ್ವಾಳದಲ್ಲ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights