FACT CHECK | ಉತ್ತರ ಪ್ರದೇಶದ ಪೇಂಟರ್‌ನನ್ನು ಕೇರಳದಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದು ಬ್ರೆಜಿಲ್‌ನ ವಿಡಿಯೋ ಹಂಚಿಕೆ

“ಈ ವಿಡಿಯೋ ನೋಡಿ ಉತ್ತರ ಪ್ರದೇಶದ ರಾಂಪುರ ಪಟ್ಟಣದ ಮನೆ ಪೇಂಟರ್ ಒಬ್ಬರನ್ನು ಕೇರಳದಲ್ಲಿ ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದಾರೆ. ಕೇರಳದಲ್ಲಿಇಂತಹ ಕೃತ್ಯಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.” ಎಂಬ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಇನ್ನು ಕೆಲವರು ಈ ಘಟನೆ ಉತ್ತರಖಂಡ್‌ನಲ್ಲಿ ನಡೆದಿದೆ ಎಂದರೆ, ಮತ್ತೆ ಕೆಲವರು ಈ ಘಟನೆ ನೋಯ್ಡಾದಲ್ಲಿ ನಡೆದಿದೆ ಎಂದು ಕೂಡ ಹಂಚಿಕೊಳ್ಳುತ್ತಿದ್ದಾರೆ.

 

 

 

 

 

 

 

 

 

 

 

 

 

 

 

ಗೋಡೆಗೆ ಪೇಂಟ್ ಮಾಡುತ್ತಿದ್ದ ವ್ಯಕ್ತಿಯೊಬ್ಬನ ಮೇಲೆ ಗುಂಡಿನ ಮಖೆಗರೆಯುವ ಭಯಾನಕ ವಿಡಿಯೋ ಇದಾಗಿದೆ. ಮರದ ಆಸರೆಯ ಮೇಲೆ ನಿಂತುಕೊಂಡು ಗೋಡೆಗೆ ಪೇಂಟಿಂಗ್ ಮಾಡುತ್ತಿರುವಂತೆ ಕಾಣುವ ವ್ಯಕ್ತಿಯನ್ನು, 13 ಸೆಕೆಂಡ್‌ಗಳ ಅಂತರದಲ್ಲಿ ಕನಿಷ್ಠ ಹದಿನೇಳು ಬಾರಿ ಗುಂಡು ಹಾರಿಸಲಾಗಿದೆ. ಈ ವಿಡಿಯೋವನ್ನು ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ವ್ಯಾಪಕವಾಗಿ ಹಂಚಿಕೊಂಡಿದ್ದಾರೆ.

 

 

 

 

 

 

 

 

 

 

 

 

 

 

 

 

 

ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾಅದನೆ ನಿಜಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್‌ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು  ಕೀ ಫ್ರೇಮ್‌ಗಳನ್ನು ಬಳಸಿ ಗೂಗಲ್‌ ರಿವರ್ಸ್‌ ಇಮೇಜಸ್‌ನಲ್ಲಿ ಪರಿಶೀಲಿಸಿದಾಗ, 30 ಜೂನ್‌ 2024 ರಂದು ಎಕ್ಸ್‌ನಲ್ಲಿ ಕೂಡ ಇದೇ ವೈರಲ್‌ ವಿಡಿಯೋದ ಮೂಲ ವಿಡಿಯೋ ಪತ್ತೆಯಾಗಿದೆ. ಪೋರ್ಚುಗೀಸ್‌ ಶೀರ್ಷಿಕೆಯನ್ನು ಹೊಂದಿದ್ದರಿಂದ ಇದನ್ನು ಇಂಗ್ಲೀಷ್‌ಗೆ ಭಾಷಾಂತರಗೊಳಿಸಿದಾಗ  “ಕ್ರೇಜಿ! ಮನೌಸ್‌ನಲ್ಲಿರುವ ನೊವೊ ಅಲೆಕ್ಸೊ ನೆರೆಹೊರೆಯಲ್ಲಿ “ಓಲ್ಹಾವೊ” ಎಂದು ಕರೆಯಲ್ಪಡುವ ವ್ಯಕ್ತಿಯನ್ನು ಕ್ರಿಮಿನಲ್‌ ಒಬ್ಬ ಕೊಲೆ ಮಾಡಿ ವಿಡಿಯೋವನ್ನು ಚಿತ್ರೀಕರಿಸಿದ್ದಾನೆ ಎಂದು ಬರೆಯಲಾಗಿತ್ತು.

 

ಇದರಿಂದ ಮಾಹಿತಿಯನ್ನು ಪಡೆದ ನಾವು,  ಈ ಘಟನೆಗೆ ಸಂಬಂಧಿಸಿದಂತೆ ಕೆಲವೊಂದು ಕೀ ವರ್ಡ್ಸ್‌ಗಳನ್ನು ಬಳಸಿ ಅಂತರ್ಜಾಲದಲ್ಲಿ ಹುಡುಕಾಟವನ್ನು ನಡೆಸಿದ್ದೇವೆ. ಈ ವೇಳೆ 28-06-2024 ರಂದು ಪ್ರಕಟಗೊಂಡ ಪೋರ್ಚುಗೀಸ್‌ ವರದಿಯೊಂದು ಪತ್ತೆಯಾಗಿದೆ. ಆ ವರದಿಯಲ್ಲಿ ಬ್ರೆಜಿಲ್‌ನ ಮನೌಸ್ ನಗರದಲ್ಲಿ ನೊವೊ ಅಲೆಕ್ಸೊ ನೆರೆಹೊರೆಯಲ್ಲಿರುವ ಮನೆಯಲ್ಲಿ ಪೇಂಟಿಂಗ್‌ ಕೆಲಸ ಮಾಡುತ್ತಿದ್ದ ಲ್ಯೂಕಾಸ್ ಪೆರೇರಾ ಎಂಬುವವರನ್ನು ಗುಂಡಿಟ್ಟು ಹತ್ಯೆ ಮಾಡಲಾಗಿದೆ ಎಂದು ಉಲ್ಲೇಖಿಸಲಾಗಿತ್ತು.

 

 

 

 

 

 

 

 

 

 

 

ಪೋರ್ಟಾಲ್‌ ಡೊ ಹೋಲಾಂಡ ಈ ಘಟನೆಯ ಕುರಿತು ವರದಿಯ ವಿಡಿಯೋವೊಂದನ್ನು ತನ್ನ ಯುಟ್ಯುಬ್‌ ಚಾನಲ್‌ನಲ್ಲಿ ಅಪ್‌ಲೋಡ್‌ ಮಾಡಿದ್ದು, ಅದರಲ್ಲಿ ಹತ್ಯೆಗೊಳಗಾದ ಲ್ಯೂಕಾಸ್ ಪೆರೇರಾ ಮಾಧಕ ಕಳ್ಳ ಸಾಗಾಟದ ಪ್ರಕರಟವನ್ನು ಹೊಂದಿದ್ದು, ಈತ ಈ ವಿಚಾರದಲ್ಲಿ ಗುಂಪೊಂದರ ಜೊತೆ ಜಗಳವಾಡಿದ್ದ ಎಂಬ ಮಾಹಿತಿ ಲಭ್ಯವಾಗಿದೆ. ಜೊತೆಗೆ ಇದೇ ಕಾರಣಕ್ಕೆ ಈತನ ಹತ್ಯೆ ನಡೆದಿರಬಹುದು ಎಂದು ಉಲ್ಲೇಖಿಸಲಾಗಿದೆ. ಈ ಅಂಶಗಳಿಂದ ಈ ವೈರಲ್‌ ವಿಡಿಯೋ ಭಾರತಕ್ಕೆ ಸಂಬಂಧಿಸಿದ್ದಲ್ಲ ಎಂದು ತಿಳಿದು ಬಂದಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುತ್ತಿರುವ ಹಾಗೆ ವೈರಲ್‌ ವಿಡಿಯೋದ ಘಟನೆ ಕೇರಳದಲ್ಲಿ ನಡೆದಿದೆ ಎಂಬುದು ಸುಳ್ಳು, ಅಸಲಿಗೆ ಈ ವಿಡಿಯೋ ಭಾರತಕ್ಕೆ ಸಂಬಂಧಿಸಿದ್ದಲ್ಲ ಮತ್ತು ಇದು ಬ್ರೆಜಿಲ್‌ನಲ್ಲಿ ನಡೆದ ಘಟನೆಯಾಗಿದೆ. ಹಾಗಾಗ ವೈರಲ್‌ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | EV ವಾಹನಗಳು ರಸ್ತೆಯಲ್ಲಿ ಚಲಿಸುವಾಗಲೇ ಚಾರ್ಜ್ ಆಗುವಂತ ರಸ್ತೆಗಳನ್ನು ಸ್ವೀಡನ್‌ನಲ್ಲಿ ನಿರ್ಮಿಸಲಾಗಿದೆಯೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights