FACT CHECK | ರಾಹುಲ್ ಗಾಂಧಿ ಕಾಲಿಗೆ ನಮಸ್ಕರಿಸಿದ್ರಾ ಉದ್ಧವ್ ಠಾಕ್ರೆ?

ಶಿವಸೇನಾ (UTB) ಮುಖ್ಯಸ್ಥ ಉದ್ಧವ್ ಠಾಕ್ರೆ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ, ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಕಾಂಗ್ರೆಸ್ ನಾಯಕನಿಗೆ ನಡು ಬಗ್ಗಿಸಿ ನಮಸ್ಕರಿಸಿದ್ದಾರೆ ಎಂಬ ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ.

2 ಜನರು ನ ಚಿತ್ರವಾಗಿರಬಹುದು

ನಾವೆಲ್ಲರೂ ಹಿಂದೂ ಹೃದಯ ಸಾಮ್ರಾಟ್ ಬಾಳಾಸಾಹೇಬ್ ಜಿ ಅವರನ್ನು ಗೌರವಿಸುತ್ತೇವೆ ಮತ್ತು ಮೆಚ್ಚುತ್ತೇವೆ. ಅವರ ಮಗ ಉದ್ಧವಸಾಹೇಬ್ ಠಾಕ್ರೆ ಜಿ ವರು ಸಿಎಂ ಆಗುವವರೆಗೂ ಸಮಾನವಾಗಿ ಗೌರವಿಸಲ್ಪಟ್ಟರು. ಆದರೆ ಬಾಳಾಸಾಹೇಬ್ ಜಿಯವರ ಹೆಜ್ಜೆಗಳನ್ನು ಅನುಸರಿಸಿದ್ದರೆ ನಾವು ಉಧವ್ ಜಿ ಅವರನ್ನು ಇನ್ನೂ ಗೌರವಿಸುತ್ತಿದ್ದೆವು. ಆದರೆ ಈಗ ನೋಡಿ ಹೇಗೆ ಬಾಗಿ ಬೆಂಡಾಗಿದ್ದಾರೆ ಎಂಬ ಹೇಳಿಕೆಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ. 

“ಅಧಿಕಾರದ ಲಾಲಸೆಯು ಜನರನ್ನು ಏನು ಬೇಕಾದರೂ ಮಾಡುತ್ತದೆ” ಎಂಬ ಶೀರ್ಷಿಕೆಯೊಂದಿಗೆ ಚಿತ್ರವನ್ನು ಹಂಚಿಕೊಂಡಿದ್ದಾರೆ. ಅದೇ ರೀತಿ, X (ಹಿಂದೆ ಟ್ವಿಟರ್), ನಹರ್ ಸಿಂಗ್ ಎಂಬ ಬಳಕೆದಾರರು ಅದೇ ಚಿತ್ರವನ್ನು ಹಂಚಿಕೊಂಡಿದ್ದಾರೆ, “ಅಧಿಕಾರದ ಲಾಲಸೆಯು ಜನರನ್ನು ಏನು ಮಾಡುವಂತೆ ಮಾಡುತ್ತದೆ. ಅವರು ಎಷ್ಟು ಕೆಳಕ್ಕೆ ಹೋಗುತ್ತಾರೆ?” ಎಂಬ ಪ್ರತಿಪಾದನೆಯೊಂದಿಗೆ ಹಂಚಿಕೊಂಡಿದ್ದಾರೆ. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ : 

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು, ಉದ್ಧವ್ ಠಾಕ್ರೆಯವರ ಪಕ್ಷವಾದ ಶಿವಸೇನೆಯ (UBT) X ಹ್ಯಾಂಡಲ್ ಅನ್ನು ಪರಿಶೀಲಿಸಿದಾಗ, 8 ಆಗಸ್ಟ್‌ 2024ರಂದು ಶಿವಸೇನಾ ಪಕ್ಷವು ತನ್ನ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡ ಪೋಸ್ಟ್‌ ಲಭ್ಯವಾಗಿದೆ.

ಎಕ್ಸ್‌ನಲ್ಲಿ ಹಂಚಿಕೊಂಡ ಟ್ವೀಟ್‌ ಪ್ರಕಾರ, ಪಕ್ಷದ ಮುಖ್ಯಸ್ಥ ಗೌರವಾನ್ವಿತ. ಶ್ರೀ. ಉದ್ಧವಸಾಹೇಬ್ ಠಾಕ್ರೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಕುಟುಂಬವನ್ನು ಭೇಟಿ ಮಾಡಿದರು. ಈ ಸಂದರ್ಭದಲ್ಲಿ ಶಿವಸೇನೆ ಮುಖಂಡ ಶಾಸಕ ಆದಿತ್ಯ ಠಾಕ್ರೆ, ಶಿವಸೇನೆ ನಾಯಕ ಸಂಸದ ಸಂಜಯ್ ರಾವುತ್, ಸಂಸದ ರಾಘವ್ ಚಡ್ಡಾ, ಸಂಸದ ಸಂಜಯ್ ಸಿಂಗ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು ಎಂದು ಉಲ್ಲೇಖಿಸಲಾಗಿದೆ.

ಉದ್ಧವ್ ಠಾಕ್ರೆ ಅವರು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರ ಕುಟುಂಬವನ್ನು ಭೇಟಿಯಾಗುತ್ತಿರುವುದನ್ನು ತೋರಿಸುವ ಟ್ವೀಟ್ ಅನ್ನು ಆಗಸ್ಟ್ 8 ರಂದು ಶೀವಸೇನಾ ಪಕ್ಷದ ಅಧಿಕೃತ ಟ್ಈಟ್‌ ಖಾತೆಯ ಮೂಲಕ ಹಂಚಿಕೊಳ್ಳಲಾಗಿದೆ. ಅಲ್ಲಿ ಉದ್ಧವಸಾಹೇಬ್ ಠಾಕ್ರೆ  ರಾಹುಲ್ ಗಾಂಧಿಯೊಂದಿಗೆ ವೈರಲ್ ಫೋಟೋದಲ್ಲಿ ಕಂಡುಬರುವ ಅದೇ ಕುರ್ತಾವನ್ನು ಧರಿಸಿ ಅವರಿಗೆ ನಮಸ್ಕರಿಸುತ್ತಿದ್ದಾರೆ.

Fact-Check | This Image of Uddhav Thackeray Bowing Down in Front of Rahul  Gandhi Is Edited

ರಾಹುಲ್ ಗಾಂಧಿಯವರೊಂದಿಗೆ ಉದ್ಧವ್ ಠಾಕ್ರೆಯವರ ಚಿತ್ರವನ್ನು ಹುಡುಕಲು ನಾವು ಶಿವಸೇನಾ UBT ಯ ಎಕ್ಸ್ ಹ್ಯಾಂಡಲ್ ಅನ್ನು ಸ್ಕ್ರೋಲ್ ಮಾಡಿದಾಗ, ನಮಗೆ ಒಂದು ದಿನದ ಹಿಂದೆ ಅಂದರೆ ಆಗಸ್ಟ್ 7 ರಂದು ಮಾಡಿದ ಟ್ವೀಟ್ ಲಭ್ಯವಾಗಿದೆ. ಈ ಫೋಟೋದಲ್ಲಿ, ರಾಹುಲ್ ಗಾಂಧಿ ಅದೇ ಟೀ ಶರ್ಟ್ ಧರಿಸಿದ್ದು  ವೈರಲ್ ಚಿತ್ರದಲ್ಲಿರುವ ಅದೇ ಪುಷ್ಪಗುಚ್ಛವನ್ನು ಹಿಡಿದಿರುವಂತೆ ಕಾಣುತ್ತಾರೆ. .ಉದ್ಧವ್ ಠಾಕ್ರೆ ಮತ್ತು ರಾಹುಲ್ ಗಾಂಧಿ ಅವರ ವೈರಲ್ ಫೋಟೋವನ್ನು ಮ್ಯಾನಿಪುಲೇಟ್ ಮಾಡಿರುವುದು ಇದರಿಂದ ದೃಢಪಟ್ಟಿದೆ. ವಾಸ್ತವವಾಗಿ, ಉದ್ಧವ್ ಠಾಕ್ರೆ ಅರವಿಂದ್ ಕೇಜ್ರಿವಾಲ್ ಅವರ ಪೋಷಕರಿಗೆ ನಮಸ್ಕರಿಸಿ ನಮಸ್ಕರಿಸುತ್ತಿರುವ ಫೋಟೋವನ್ನು ಎಡಿಟ್ ಮಾಡಿ ಉದ್ಧವ್ ಠಾಕ್ರೆ ರಾಹುಲ್ ಗಾಂದಿ ಕಾಲಿಗೆ ನಮಸ್ಕರಿತ್ತಿರುವಂತೆ ಎಡಿಟ್‌ ಮಾಡಲಾಗಿದೆ.

ರಾಹುಲ್ ಗಾಂಧಿ ಮತ್ತು ಉದ್ದವ್ ಠಾಕ್ರೆಯವರ ಫೋಟೊವನ್ನು ತಿರುಚಿ ಹಂಚಿಕೊಂಡಿರುವ ಕಾರಣ ಎಕ್ಸ್‌ ಖಾತೆ ಮತ್ತು ಬಳಕೆದಾರರ ವಿರುದ್ದ ಪ್ರಕರಣ ದಾಖಲಿಸುವುದಾಗಿ ಶಿವಸೇನೆ 8 ಆಗಸ್ಟ್‌ 2024ರಂದು ಟ್ವೀಟ್ ಮಾಡಿದೆ. “ನಕಲಿ ಮತ್ತು AI ನಿಂದ ಮಾಡಿದ ಚಿತ್ರಗಳನ್ನು ಟ್ವೀಟ್ ಮಾಡಿದ್ದಕ್ಕಾಗಿ ನಾವು ಪೊಲೀಸ್ ಕೇಸ್ ಅನ್ನು ದಾಖಲಿಸುತ್ತೇವೆ. ಸುಳ್ಳು ಹೇಳುವಂತಹ ಕೆಟ್ಟ ಪರಂಪರೆಗೆ ಕೈ ಹಾಕುವುದು ‘ಬಿಜೆಪಿ’ ಡಿಎನ್‌ಎ ಎಂದು ನಮಗೆ ತಿಳಿದಿದೆ ಎಂದು” ಶಿವಸೇನಾ (UBT) ಪೋಸ್ಟ್‌ನಲ್ಲಿ ಬರೆದುಕೊಂಡಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಉದ್ಧವ್ ಠಾಕ್ರೆ ಅವರು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರ ಕುಟುಂಬವನ್ನು ಭೇಟಿಯಾಗಿರುವ ಫೋಟೊವನ್ನು ಎಡಿಟ್‌ ಮಾಡುವ ಮೂಲಕ ಉದ್ಧವ್ ಠಾಕ್ರೆ ರಾಹುಲ್ ಗಾಂಧಿ ಕಾಲಿಗೆ ನಮಸ್ಕರಿತ್ತಿರುವಂತೆ ಫೋಟೊವನ್ನು ಎಡಿಟ್‌ ಮಾಡಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ  ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಬ್ಯಾಂಕ್ ಮ್ಯಾನೇಜರ್‌ ಕಪಾಳಕ್ಕೆ ಹೊಡೆದದ್ದು BJP ಮುಖಂಡನಲ್ಲ! ಮತ್ತ್ಯಾರು?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights