FACT CHECK | ಕೋಲ್ಕತ್ತಾದ ಟ್ರೈನಿ ವೈದ್ಯೆಯ ಸಾವಿಗೂ ಮುನ್ನ ತೆಗೆದ ಸೆಲ್ಫಿ ವಿಡಿಯೋ ಎಂಬುದು ನಿಜವೇ?

ಕೋಲ್ಕತ್ತಾ ಆರ್‌‌ಜಿ ಕರ್ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಕೊಲೆ ಹಾಗೂ ಅತ್ಯಾಚಾರಕ್ಕೊಳಗಾದ ವೈದ್ಯಕೀಯ ವಿದ್ಯಾರ್ಥಿನಿಯ ಜೀವನದ ಕೊನೆಯ ಕ್ಷಣಗಳು ಎಂಬುದಾಗಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ಹರಿದಾಡುತ್ತಿದೆ.

ಇದು ಕೋಲ್ಕತ್ತಾದ ಟ್ರೈನಿ ವೈದ್ಯೆಯು ಕೊನೆ ಉಸಿರೆಳೆಯುವ ಮುನ್ನ ತೆಗೆದ ಸೆಲ್ಫಿ ವಿಡಿಯೋ ಎಂದು ಹೇಳಿಕೊಂಡು ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡುತ್ತಿದ್ದಾರೆ. ಮಲ್ಲಿಕಾರ್ಜುನ ಎಂಬವರು ತಮ್ಮ ಎಕ್ಸ್ ಖಾತೆಯಲ್ಲಿ ‘ವೈದ್ಯೆ ಅವರ ಮರಣದ ಮೊದಲು ಕೊನೆಯ ಉಸಿರು.’ ಎಂಬ ಶೀರ್ಷಿಕೆಯೊಂದಿಗೆ ಈ ವಿಡಿಯೋ ಹಂಚಿಕೊಂಡಿದ್ದಾರೆ.

ಕೋಲ್ಕತ್ತಾದ ಆರ್‌ಜಿಸಿಎಆರ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಟ್ರೈನಿ ವೈದ್ಯೆಯನ್ನು ಅತ್ಯಾಚಾರವೆಸಗಿ ಹತ್ಯೆಗೈದ ಆರೋಪಿಗಳಿಗೆ ಶಿಕ್ಷೆ ನೀಡುವಂತೆ ದೇಶಾದ್ಯಂತ ವಿವಿಧ ಸಮುದಾಯಗಳ ಜನರು ಮತ್ತು ಮುಖಂಡರು ಪ್ರತಿಭಟನೆ ನಡೆಸುತ್ತಿದ್ದಾರೆ. ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಪೀಠವು ಪ್ರಕರಣವನ್ನು ಕೈಗೆತ್ತಿಕೊಂಡು ಆಗಸ್ಟ್ 20 ರಂದು ವಿಚಾರಣೆಯನ್ನು ಕೈಗೆತ್ತಿಕೊಂಡಿತು. ಪ್ರಕರಣದಲ್ಲಿ ಎಫ್‌ಐಆರ್ ದಾಖಲಿಸಲು ವಿಳಂಬವಾಗುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ರಾಜ್ಯ ಸರ್ಕಾರಕ್ಕೆ ಅಸಮಾಧಾನ ವ್ಯಕ್ತಪಡಿಸಿತು ಮತ್ತು ಕೋಲ್ಕತ್ತಾ ಪೊಲೀಸರನ್ನು ಟೀಕಿಸಿದೆ. ಇವುಗಳ ನಡುವೆ

ಗಾಯಾದ ಮಡುವಿನಲ್ಲಿ ನರಳುತ್ತಿರುವ ಯುವತಿಯ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.  ಇದೇ ರೀತಿಯ ಬರಹದೊಂದಿಗೆ ವಿಡಿಯೋವನ್ನು ನೀವು ಇಲ್ಲಿ ಮತ್ತು ಇಲ್ಲಿ ನೋಡಬಹುದು. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ : 
ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿರುವ ಈ ವಿಡಿಯೋ ಕೋಲ್ಕತ್ತಾ ಮೂಲದ ಮೇಕಪ್ ಕಲಾವಿದೆ ಝೀನತ್ ರಹ್ಮಾನ್ ಅವರದ್ದು ಎಂದು ಗುರುತಿಸಲಾಗಿದೆ.
ಗೂಗಲ್​ನಲ್ಲಿ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ, 17 ಆಗಸ್ಟ್ 2024 ರಂದು ಎಕ್ಸ್​ನಲ್ಲಿ ಹಂಚಿಕೊಂಡ ಮುದಸ್ಸಿರ್ ದಾರ್ (مُدثِر دار) ಅವರ ಪೋಸ್ಟ್ ಲಭ್ಯವಾಗಿದೆ. “ಕೊನೆಯ ಬಾರಿ ಮೌಮಿತಾ ತನ್ನ ತಾಯಿಯೊಂದಿಗೆ ಮಾತನಾಡುತ್ತಿರುವುದು” ಎಂಬ ಶೀರ್ಷಿಕೆ ನೀಡಲಾಗಿದೆ ಜೊತೆಗೆ ಈ ವಿಡಿಯೋದಲ್ಲಿರುವುದು ಜೀನತ್ ರೆಹಮಾನ್ ಎಂದು ಅವರು ಉಲ್ಲೇಖಿಸಿದ್ದಾರೆ.

ಅಲ್ಲದೆ, 18 ಆಗಸ್ಟ್ 2024 ರಂದು ಮುನ್ನಿ ಠಾಕೂರ್ ಅವರ ಫೇಸ್‌ಬುಕ್ ಖಾತೆಯಿಂದ ನಾವು ಮತ್ತೊಂದು ಪೋಸ್ಟ್ ಅನ್ನು ಕಂಡುಕೊಂಡಿದ್ದೇವೆ. ಅದರಲ್ಲಿ ಕೋಲ್ಕತ್ತಾದ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಪ್ರಮುಖ ಅಂಶಗಳನ್ನು ಜೀನತ್ ರೆಹಮಾನ್ ಎಂಬ ಕಲಾವಿದೆ ಮರುಸೃಷ್ಟಿಸಿದ್ದಾರೆ ಎಂದು ವೈರಲ್ ವಿಡಿಯೋ ಜೊತೆಗೆ ಪೋಸ್ಟ್ ಮಾಡಲಾಗಿದೆ.

ಹೆಚ್ಚುವರಿಯಾಗಿ, ಎಕ್ಸ್ ಮತ್ತು ಫೇಸ್‌ಬುಕ್ ಖಾತೆಗಳಲ್ಲಿ ಈ ಹೆಸರನ್ನು ಹುಡುಕಿದಾಗ, ಜೀನತ್ ರಹಮಾನ್ ಅವರ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ಪುಟಗಳು ಲಭ್ಯಾಗಿದ್ದು, ಆದರೆ ಅವು ಲಾಕ್ ಆಗಿದ್ದವು. ಆದಾಗ್ಯೂ, ಕೆಲವು ಪೋಸ್ಟ್‌ಗಳು ಅವರ ಪ್ರೊಫೈಲ್‌ನಲ್ಲಿರುವುದು ಕಂಡುಬಂದಿದೆ.

ಈ ಪ್ರೊಫೈಲ್‌ನೊಂದಿಗೆ, ಅವರು ಕೋಲ್ಕತ್ತಾದ ಮೇಕಪ್ ಕಲಾವಿದೆ ಮತ್ತು ಬಹಳ ಹಿಂದಿನಿಂದಲೂ ಅತ್ಯಾಚಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ ಮತ್ತು ಪೋಸ್ಟ್ ಮಾಡುತ್ತಿದ್ದಾರೆ ಎಂದು ನಾವು ಕಂಡುಕೊಂಡಿದ್ದೇವೆ.ಇದಲ್ಲದೆ, ನಾವು ಅವರ ಫೇಸ್‌ಬುಕ್ ಖಾತೆಯಲ್ಲಿ ಅಕ್ಟೋಬರ್ 1, 2020 ರಂದು ‘ಸೇ ನೋ ಟು ರೇಪ್’ ಶೀರ್ಷಿಕೆಯೊಂದಿಗೆ ಪೋಸ್ಟ್ ಸಹ ಲಭ್ಯವಾಗಿದೆ.

ಈ ಎಲ್ಲ ಫೋಟೋಗಳು ಹಾಗೂ ವಿಡಿಯೋಗಳನ್ನು ಪರಿಶಿಲನೆ ನಡೆಸಿದಾಗ ಆರ್‌ಜಿ ಕರ್ ವೈದ್ಯ ವಿದ್ಯಾರ್ಥಿನಿಯ ಜೀವನದ ಕೊನೆಯ ಕ್ಷಣಗಳು ಎಂದು ಹಂಚಿಕೊಳ್ಳಲಾಗುತ್ತಿರುವ ವಿಡಿಯೋ ಕೂಡ ಝೀನತ್ ರಹ್ಮಾನ್‌ರದ್ದು ಎಂಬುದು ಸಾಬೀತಾಗಿದೆ.

ಆದರೆ, ಈ ಕಲಾವಿದೆ ನಿಜವಾಗಿಯೂ ಆರ್‌ ಜಿ ಕರ್ ಸಂತ್ರಸ್ತೆಯ ಹೆಸರನ್ನು ಬಳಸಿ ವಿಡಿಯೋ ಫೋಸ್ಟ್ ಮಾಡಿದ್ದಾರೆಯೋ ಅಥವಾ ಅತ್ಯಾಚಾರ ಸಂತ್ರಸ್ತೆಯ ಕುರಿತು ವಿಡಿಯೊವೊಂದನ್ನು ಸೃಷ್ಟಿಸಿದ್ದರೋ ಎಂಬುದರ ಬಗ್ಗೆ ಪರಿಶೀಲನೆ ನಡೆಸಬೇಕಿದೆ‌.

 

ಜೀನತ್ ರಹಮಾನ್ ಅವರ ಫೇಸ್‌ಬುಕ್ ಪುಟದಲ್ಲಿನ ಇತರ ಫೋಟೋಗಳನ್ನು ಮತ್ತು ವೈರಲ್ ವೀಡಿಯೊದಲ್ಲಿ ಕಂಡುಬರುವ ಮಹಿಳೆಯನ್ನು ಹೋಲಿಕೆ ಮಾಡಿ ನೋಡಿದಾಗ ಕೋಲ್ಕತ್ತಾ ವೈದ್ಯೆಯ ವೀಡಿಯೊ ಇದಲ್ಲ ಎಂಬುದು ಸ್ಪಷ್ವಾಗುತ್ತದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ  ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಶ್ರೀಲಂಕಾದಲ್ಲಿ ಹನುಮಂತನ ಗದೆ ಪತ್ತೆಯಾಗಿದೆ ಎಂಬುದು ವಾಸ್ತವವೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights