FACT CHECK | ನಮಾಜ್‌ ಮಾಡಿದ ವ್ಯಕ್ತಿಯ ಮೇಲೆ ಅಮಾನವೀಯವಾಗಿ ಹಲ್ಲೆ ನಡೆದಿದ್ದು ನಿಜವೇ?

ನಮಾಜ್ ಮಾಡುತ್ತಿದ್ದ ವ್ಯಕ್ತಿಯ ಮೇಲೆ ಮತ್ತೊಬ್ಬ ವ್ಯಕ್ತಿಯು ಅಮಾನವೀಯವಾಗಿ ಹಲ್ಲೆ ನಡೆಸುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದೆ. ಈ ಘಟನೆ ಚೀನಾದಲ್ಲಿ ನಡೆದಿದೆ ಎಂಬ ಹೇಳಿಕೆಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ.

ವಾಟ್ಸ್​​ಆ್ಯಪ್ ಗ್ರೂಪ್​ ಪೋಸ್ಟ್​ನ ಸ್ಕ್ರೀನ್ ಶಾಟ್.

‘ಚೀನಾದಲ್ಲಿ ಪಾಕಿಸ್ತಾನಿ ವ್ಯಕ್ತಿಯೊಬ್ಬ ರೆಸ್ಟೋರೆಂಟ್​ನಲ್ಲಿ ನಮಾಜ್ ಮಾಡುತ್ತಾ ಬಿಲ್ಡಪ್ ಕೊಡುತ್ತಿದ್ದಾನೆ. ಆದರೆ, ಚೀನಾದ ರೆಸ್ಟೋರೆಂಟ್​ ಮಾಲಿಕನು ನಮಾಜ್‌ ಮಾಡಿದ್ದಕ್ಕೆ ಸರಿಯಾದ ಪಾಠವನ್ನು ಕಲಿಸಿದ್ದಾನೆ. ಭಾರತದಲ್ಲಿ ರಸ್ತೆಗಳಲ್ಲಿ ನಮಾಜ್ ಮಾಡುವವರಿಗೆ ಪ್ರತ್ಯುತ್ತರ ನೀಡುವ ಅಗತ್ಯವನ್ನು ಇದು ತೋರಿಸುತ್ತದೆ.’ ಎಂದು ಪ್ರತಿಪಾದಿಸಿ ವಾಟ್ಸಾಪ್‌ ಸೇರಿದಂತೆ ಹಲವು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ.

‘ಚೀನಾದಲ್ಲಿ ಪಾಕಿಸ್ತಾನಿಯೊಬ್ಬ ರೆಸ್ಟೋರೆಂಟ್ ಅನ್ನು ತನ್ನ ತಂದೆಯ ಮನೆ ಎಂದು ಪರಿಗಣಿಸಿ ನಮಾಜ್ ಮಾಡುತ್ತಿದ್ದ. ಇದ್ದಕ್ಕಿದ್ದಂತೆ ರೆಸ್ಟೋರೆಂಟ್ ಮಾಲೀಕರು ಹಿಂದಿನಿಂದ ಬಂದು ಅವರ ನಮಾಜ್ ಸ್ವೀಕರಿಸಿದರು. ಭಾರತದಲ್ಲೂ ಇದೇ ರೀತಿಯ ಚಿಕಿತ್ಸೆ ಬೇಕಾ?’ ಎಂಬ ಹೇಳಿಕೆಯೊಂದಿಗೆ  ಮಹವೀರ ಎಂಬ ಎಕ್ಸ್ ಖಾತೆಯ ಬಳಕೆದಾರರು ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ನಮಾಜ್‌ ಮಾಡಿದ ವ್ಯಕ್ತಿಯ ಮೇಲೆ ಹಲ್ಲೆ ಮಾಡಿದ ಘಟನೆ ಚೀನಾದಲ್ಲಿ ನಡೆದಿದೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ವಿಡಿಯೋದ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಸೆಪ್ಟೆಂಬರ್ 20, 2022 ರಂದು ವೈರಲ್ ವೀಡಿಯೊದಿಂದ ಸ್ಕ್ರೀನ್‌ಗ್ರಾಬ್ ಹೊಂದಿರುವ ಟ್ವೀಟ್ ಲಭ್ಯವಾಗಿದೆ. Niubluer ಎಂಬ ಖಾತೆಯಿಂದ ಈ ಟ್ವೀಟ್ ಮಾಡಲಾಗಿದ್ದು. ‘ಈ ಘಟನೆ ಥೈಲ್ಯಾಂಡ್‌ನಲ್ಲಿ ನಡೆದಿದೆ. ಹಣ ಪಾವತಿ ವಿಚಾರವಾಗಿ ಹಲ್ಲೆ ನಡೆಸಲಾಗಿದೆ’ ಎಂದು ಉಲ್ಲೇಖಿಸಲಾಗಿದೆ.

ಟ್ವೀಟ್‌ನಲ್ಲಿ ಲಭ್ಯವಾದ ಸುಳಿವನ್ನು ಆಧಾರವಾಗಿಟ್ಟುಕೊಂಡು , ಗೂಗಲ್​​ ಮೂಲಕ ಥಾಯ್ ಭಾಷೆಯಲ್ಲಿ “ಉದ್ಯೋಗಿ,” “ಹೊಡೆಯುವುದು” “ಸಾಲ” ಎಂಬ ಕೀವರ್ಡ್‌ಗಳನ್ನು ಸರ್ಚ್ ಮಾಡಿದಾಗ, 4 ಡಿಸೆಂಬರ್ , 2020 ರಂದು Amarintv ಯಲ್ಲಿ ಪ್ರಕಟವಾದ ವರದಿಯನ್ನು ನಾವು ಕಂಡುಕೊಂಡಿದ್ದೇವೆ. ಸಾಲ ನೀಡುವ ಕಂಪನಿಯ ಅಧಿಕಾರಿಯೊಬ್ಬರು ತನ್ನ ಗುಂಪಿನ ಉದ್ಯೋಗಿಯೊಬ್ಬರನ್ನು ಥಳಿಸುತ್ತಿದ್ದಾರೆ ಎಂದು ವರದಿ ಹೇಳುತ್ತದೆ. ಸಾಲ ವಸೂಲಾತಿಗೆ ಸಂಬಂಧಿಸಿದಂತೆ ಈ ಹಿಂದೆಯೂ ಇಂತಹ ಹಲವಾರು ಘಟನೆಗಳು ನಡೆದಿವೆ ಎಂದು ಸಂತ್ರಸ್ತೆ ಹೇಳಿದ್ದಾರೆ ಎಂದು ವರದಿಯಲ್ಲಿದೆ.

Image

2 ಡಿಸೆಂಬರ್  2020 ರಂದು ಡೈಲಿ ನ್ಯೂಸ್ ಥೈಲ್ಯಾಂಡ್‌ನ ಮತ್ತೊಂದು ವರದಿ ಲಭ್ಯವಾಗಿದೆ. ಈ ಘಟನೆ  2020 ರಲ್ಲಿ ಥೈಲ್ಯಾಂಡ್‌ನಲ್ಲಿ ಸಂಭವಿಸಿದೆ ಎಂದು ಉಲ್ಲೇಖಿಸಲಾಗಿದೆ. ಸಾಲ ನೀಡುವ ಕಂಪನಿಯ ಉದ್ಯೋಗಿ ಗ್ರಾಹಕರ ಹಣವನ್ನು ತಪ್ಪಾಗಿ ಉಪಯೋಗಿಸಿದ ಆರೋಪದಲ್ಲಿ ಥಳಿಸಿದ್ದಾರೆ ಎಂದು ಇದರಲ್ಲಿ ಬರೆಯಲಾಗಿದೆ.

ಕಂಪನಿಯು ಟ್ರೇಡ್‌ ಕಾರ್ಡ್‌ಗಳನ್ನು ವಿತರಿಸುವ ಮೂಲಕ ಜನರಿಗೆ ತ್ವರಿತ ಸಾಲವನ್ನು ನೀಡುತ್ತದೆ. ಉದ್ಯೋಗಿಗಳು ಗ್ರಾಹಕರಿಂದ ಬಡ್ಡಿಯೊಂದಿಗೆ ಬಾಕಿ ಮೊತ್ತವನ್ನು ಸಂಗ್ರಹಿಸಬೇಕಾಗುತ್ತದೆ. 2020 ರ ಜನವರಿಯಲ್ಲಿ ಸಂತ್ರಸ್ತರಿಗೆ ಗ್ರಾಹಕರಿಂದ ಬಾಕಿಯನ್ನು ಮರುಪಡೆಯಲು ಸಾಧ್ಯವಾಗದಿದ್ದಾಗ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ.

ಸಂತ್ರಸ್ತನಿಗೆ ಸಮಯಕ್ಕೆ ಸರಿಯಾಗಿ ಸಾಲದ ಹಣವನ್ನು ವಸೂಲಿ ಮಾಡಲು ಸಾಧ್ಯವಾಗಲಿಲ್ಲ. ಇದನ್ನು ಬಹಿರಂಗಪಡಿಸುವುದನ್ನು ತಪ್ಪಿಸಲು ಇತರ ಖಾತೆಗಳಿಂದ ಹಣವನ್ನು ಬದಲಾಯಿಸಿದ್ದಾರೆ. ಈ ವಿಚಾರ ಕಂಪನಿಯ ಅಧಿಕಾರಿಗೆ ತಿಳಿದಿದೆ. ಆತನಿಗೆ ಶಿಕ್ಷಿಸುತ್ತಿರುವಾಗ ರೆಕಾರ್ಡ್ ಮಾಡಲಾಗಿರುವುದು ಸದ್ಯ ವೈರಲ್ ಆಗುತ್ತಿರುವ ವಿಡಿಯೋ ಆಗಿದೆ ಎಂದು ವರದಿಯಲ್ಲಿ ತಿಳಿಸಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಥೈಲ್ಯಾಂಡ್‌ನಲ್ಲಿ ಹಣ ದುರುಪಯೋಗ ಮಾಡಿಕೊಂಡ ವಿಚಾರಕ್ಕೆ ಹಲ್ಲೆ ಮಾಡಿದ 2020ರ ಹಳೆಯ ವಿಡಿಯೋವನ್ನು, ಪಾಕಿಸ್ತಾನದ ಮುಸ್ಲಿಂ ವ್ಯಕ್ತಿಯೊಬ್ಬ ರೆಸ್ಟೋರೆಂಟ್​ನಲ್ಲಿ ನಮಾಜ್ ಮಾಡಿದ ಕಾರಣಕ್ಕೆ ಚೀನಾದಲ್ಲಿ  ಥಳಿಸಲಾಗಿದೆ ಎಂದು ಸುಳ್ಳು ಪ್ರತಿಪಾದನೆಯೊಂದಿಗೆ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ  ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಪತ್ರಕರ್ತರ ಪ್ರಶ್ನೆಗೆ ಹೆದರಿ ಓಡಿ ಹೋದ್ರಾ ಮಾಜಿ ಮುಖ್ಯಮಂತ್ರಿ ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights