FACT CHECK | ಬಾಲಕನೊಬ್ಬ ಹೂಗುಚ್ಚಕ್ಕೆ ಉಗುಳುವ ವಿಡಿಯೋ ಭಾರತದ್ದಲ್ಲ ಮತ್ತೆಲ್ಲಿಯದ್ದು?
18 ಸೆಕೆಂಡ್‌ಗಳ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದು, ಹೂವು ಮಾರಾಟ ಮಾಡುತ್ತಿರುವ ಮುಸ್ಲಿಂ ಬಾಲಕನೊಬ್ಬ ಹೂವು ಗುಚ್ಛದ ಮೇಲೆ ಉಗುಳುತ್ತಿರುವ ವಿಡಿಯೋ ಪ್ರಸಾರವಾಗುತ್ತಿದೆ.
“ನಿಮ್ಮ ಪೂಜಾ ಸಾಮಗ್ರಿಗಳು ಮತ್ತು ಹೂವುಗಳನ್ನು ನೀವು ಎಲ್ಲಿಂದ ಖರೀದಿಸುತ್ತೀರಿ ಎಂಬುದರ ಕುರಿತು ಜಾಗರೂಕರಾಗಿರಿ! ನೀವು ‘ಮಕ್ಕಳ’ ಬಳಿ ವ್ಯಾಪಾರ ಮಾಡುವಾಗ ಅವರಿಗೆ ಸಹಾಯವಾಗುತ್ತದೆ ಎಂದು ಭಾವಿಸಿ ಖರೀದಿಸಬೇಡಿ. ಆ ಮಕ್ಕಳ ಚಲನವಲನಗಳನ್ನು ಗಮನಿಸಿ. ಒಂದು ವೇಳೆ ನೀವು ಈಗಾಗಲೇ ಪೂಜಾ ವಸ್ತುಗಳನ್ನು ಖರೀದಿಸಿದ್ದೀರಾ ? ಎಂಬ ಶೀರ್ಷಿಕೆಯೊಂದಿಗೆ ವೀಡಿಯೊವನ್ನು ಎಕ್ಸ್‌ನಲ್ಲಿ ಪೋಸ್ಟ್ ಮಾಡಲಾಗಿದೆ.
ಹೂವು ಮಾರಾಟ ಮಾಡುತ್ತಿರುವ ಮುಸ್ಲಿಂ ಬಾಲಕನೊಬ್ಬ ಹೂವು ಗುಚ್ಛದ ಮೇಲೆ ಉಗುಳುತ್ತಿರುವ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಭಾರತದ ದೇವಾಲಯವೊಂದರ ಹೊರಗಡೆ ಪೂಜೆಗಾಗಿ ಹೂವುಗಳನ್ನು ಮಾರುತ್ತಿರುವ ಮುಸ್ಲಿಂ ಬಾಲಕ ಬಾಯಲ್ಲಿ ನೀರು ತುಂಬಿ ನಂತರ ಹೂವಿನ ಮೇಲೆ ಉಗುಳುತ್ತಿದ್ದಾನೆ ಎಂಬರ್ಥದಲ್ಲಿ ಈ ವಿಡಿಯೊವನ್ನು ವಿಶ್ಲೇಷಿಸಿ ‘ಎಕ್ಸ್’, ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಲಾಗುತ್ತಿದೆ. ಇದಕ್ಕೆ ಫ್ಲವರ್ ಜಿಹಾದ್ ಎಂಬಂತಹ ಒಕ್ಕಣೆಗಳನ್ನೂ ನೀಡಲಾಗುತ್ತಿದೆ. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕೆ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, 1 ಸೆಪ್ಟಂಬರ್ 2024ರಂದು ಪಾಕಿಸ್ತಾನ ಮೂಲದ YouTube ನಲ್ಲಿ ಅಪ್‌ಲೋಡ್ ಮಾಡಿದ ವಿಡಿಯೋ ಲಭ್ಯವಾಗಿದೆ.
ಸೆ.1ರಂದು ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಕೂಡ ಮಾಡಲಾಗಿದೆ. ಜೊತೆಗೆ ವಿಡಿಯೊದಲ್ಲಿ ಕಾಣಿಸುವ ಕಾರಿನ ನಂಬರ್ ಪ್ಲೇಟ್‌ನಲ್ಲಿ ನೋಂದಣಿ ಸಂಖ್ಯೆ ಕೂಡ ಪಾಕಿಸ್ತಾನದ ಸಿಂಧ್ ಪ್ರಾಂತ್ಯದ್ದು ಎಂದು ಬೂಮ್‌ಲೈವ್ ಫ್ಯಾಕ್ಟ್ ಚೆಕ್ ವರದಿ ತಿಳಿಸಿದೆ.
ಮಾರ್ಚ್ 2023 ರಲ್ಲಿ, ಸಿಂಧ್ ಸರ್ಕಾರವು ವಾಹನ ನೋಂದಣಿಗಾಗಿ ಹಳದಿ ನಂಬರ್ ಪ್ಲೇಟ್‌ಗಳನ್ನು ನೀಡುವುದನ್ನು ನಿಲ್ಲಿಸಿತು. ದಿ ನೇಷನ್ ಪ್ರಕಾರ, ಸಿಂಧ್ ಸರ್ಕಾರವು ಭದ್ರತಾ ವೈಶಿಷ್ಟ್ಯಗಳೊಂದಿಗೆ ಸುಧಾರಿತ ಮೋಟಾರು ವಾಹನಗಳ ನಂಬರ್ ಪ್ಲೇಟ್‌ಗಳಿಗೆ ರಾಜ್ಯ ಕ್ಯಾಬಿನೆಟ್ ಅನುಮೋದನೆಯ ನಂತರ ತಮ್ಮ ಹಳದಿ ನಂಬರ್ ಪ್ಲೇಟ್‌ಗಳನ್ನು ಹೊಸದರೊಂದಿಗೆ ಬದಲಾಯಿಸಲು ಜನರನ್ನು ಕೇಳಿದೆ.
ಸಿಂಧ್‌ನಲ್ಲಿ ಬಳಸಲಾದ ಹಳೆಯ ನಂಬರ್ ಪ್ಲೇಟ್‌ಗಳಲ್ಲಿ ಯೂಟ್ಯೂಬ್ ವೀಡಿಯೊಗಳಲ್ಲಿ ಇದೇ ರೀತಿಯ ಹಳದಿ ನಂಬರ್ ಪ್ಲೇಟ್‌ಗಳನ್ನು ನೋಡಬಹುದು.
ಒಟ್ಟಾರೆಯಾಗಿ ಹೇಳುವುದಾದರೆ, ಪಾಕಿಸ್ತಾನಲ್ಲಿ ಬಾಲಕನೊಬ್ಬ ಹೂವು ಗುಚ್ಛದ ಮೇಲೆ ಉಗುಳುತ್ತಿರುವ ವಿಡಿಯೋವನ್ನು ಭಾರತದ್ದು ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಗೌತಮ್ ಅದಾನಿ ವಿಡಿಯೋವನ್ನು ಎಡಿಟ್ ಮಾಡಿ ಹಂಚಿಕೆ, ಮೂಲ ವಿಡಿಯೋದಲ್ಲಿ ಏನನ್ನು ಹೇಳಿದ್ದಾರೆ ಗೊತ್ತಾ?