FACT CHECK | ಸಾಧುಗಳು ಮಹಾಕುಂಭದಲ್ಲಿ ಮದ್ಯ ಮಾಂಸ ಸೇವಿಸಿದ್ದಾರೆ ಎಂಬ ವಿಡಿಯೋದ ಅಸಲೀಯತ್ತೇನು ಗೊತ್ತೇ?
ಪ್ರಯಾಗರಾಜ್ನಲ್ಲಿ ಮಹಾ ಕುಂಭಮೇಳ ಆರಂಭವಾಗಿದ್ದು, ಸಾಧುಗಳ ಫೋಟೋ, ವಿಡಿಯೋಗಳು ವೈರಲ್ ಆಗುತ್ತಿವೆ. ಅಂತೆಯೇ ಹೋಟೆಲ್ ರೂಂನಲ್ಲಿ 7 – 8 ಸಾಧುಗಳು ಕುಳಿತು ಮದ್ಯ ಮತ್ತು ಮಾಂಸ ಸೇವಿಸುತ್ತಿರುವ ವಿಡಿಯೋ ವೈರಲ್ ಆಗಿದೆ.
View this post on Instagram
ಇನ್ಸ್ಟಾಗ್ರಾಂನಲ್ಲಿ ವಿಡಿಯೋ ಹಂಚಿಕೊಂಡಿರುವ ಬಳಕೆದಾರರೊಬ್ಬರು ‘ಕುಂಭಮೇಳದ ಸ್ನಾನದ ಚಳಿ ಮತ್ತು ದಿನದ ಆಯಾಸವನ್ನು ಹೋಗಲಾಡಿಸಲು ಬಾಬಾಗಳ ಪಾನೀಯ. ಇದು ಬಾಬಾಗಳ ಮೋಕ್ಷದ ಮಾರ್ಗವಾಗಿದೆ “ಸೇಂಟ್ ಆಫ್ ಕಲಿಯುಗ್! ” ಎಂಬ ಬರೆದುಕೊಂಡಿದ್ದಾರೆ. ಇದೇ ಹೇಳಿಕೆಯೊಂದಿಗೆ ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಇದೇ ಪ್ರತಿಪಾದನೆಯೊಂದಿಗೆ ಪೋಸ್ಟ್ಅನ್ನು ಹಂಚಿಕೊಂಡಿದ್ದಾರೆ.
ಫ್ಯಾಕ್ಟ್ಚೆಕ್ :
ವೈರಲ್ ವಿಡಿಯೋದ ಕೀಫ್ರೇಮ್ಗಳನ್ನು ತೆಗೆದು ಗೂಗಲ್ ರಿವರ್ಸ್ ಇಮೇಜಸ್ನಲ್ಲಿ ಸರ್ಚ್ ಮಾಡಿದಾಗ, 17 ಡಿಸೆಂಬರ್ 2024 ರಂದು ಯೋಗಿ ಕುಮಾರ್ ಲಲಿತ್ ಎಂಬ ಬಳಕೆದಾರರು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡ ಪೋಸ್ಟ್ ಲಭ್ಯವಾಗಿದೆ.
View this post on Instagram
ಅಘೋರಿ ಬಾಬಾ ಯೋಗಿ ಕುಮಾರ್ ಲಲಿತ್ ಅವರನ್ನು ಸಂಪರ್ಕಿಸಿ ವೈರಲ್ ವಿಡಿಯೋ ಕುರಿತು ಸ್ಪಷ್ಟನೆ ಕೇಳಿದಾಗ, ವೈರಲ್ ಆದ ವಿಡಿಯೋ ಹಳೆಯದಾಗಿದ್ದು, ಕುಂಭಮೇಳಕ್ಕೂ, ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ. : ಇದೀಗ ನಾವು ಕುಂಭದಲ್ಲಿದ್ದೇವೆ ಮತ್ತು ನಾವು ಕೇಸರಿ ಬಟ್ಟೆಗಳನ್ನು ಧರಿಸಿದ್ದೇವೆ ಮತ್ತು ಕಪ್ಪು ಬಟ್ಟೆ ಅಲ್ಲ ” ಎಂದು ಹೇಳಿದ್ದು, ಪೋಸ್ಟ್ಅನ್ನು ಹಂಚಿಕೊಂಡಿದ್ದಾರೆ.
![]()
“ವೈರಲ್ ಆಗಿರುವ ವಿಡಿಯೋ ಪಶ್ಚಿಮ ಬಂಗಾಳದ ತಾರಾಪೀಠದ್ದು, ಕೌಶಿಕಿ ಅಮಾವಾಸ್ಯೆಯಂದು ವಿಶೇಷ ಪೂಜೆ ಮಾಡಿ ಮಾಂಸ, ಮೀನು ಮತ್ತು ಮದ್ಯವನ್ನು ತಾಯಿ ತಾರಾಗೆ ಅರ್ಪಿಸಲಾಗುತ್ತದೆ ” ಎಂದು ಅವರು ಹೇಳಿದ್ದಾರೆ. ಮುಂದುವರೆದು ತಾರಾಪೀಠದ ಬಗ್ಗೆ ಸರ್ಚ್ ಮಾಡಿದಾಗ, ನವಭಾರತ್ ಟೈಮ್ಸ್ ನ ವರದಿ ಲಭ್ಯವಾಗಿದೆ. ತಾರಾ ಪೀಠದ ದೇವಸ್ಥಾನದಲ್ಲಿ ಮದ್ಯ, ಮಾಂಸವನ್ನು ಪ್ರಸಾದವಾಗಿ ನೀಡಲಾಗುತ್ತದೆ.
ಒಟ್ಟಾರೆಯಾಗಿ ಹೇಳುವುದಾದರೆ, ಒಂದು ವರ್ಷದ ಹಿಂದೆ ಪಶ್ಚಿಮ ಬಂಗಾಳದ ತಾರಾ ಪೀಠದ ದೇವಸ್ಥಾನದಲ್ಲಿ ಕೌಶಿಕಿ ಅಮಾವಾಸ್ಯೆಯಂದು ಪೂಜೆ ಮಾಡಿ ಮದ್ಯ, ಮಾಂಸವನ್ನು ಪ್ರಸಾದವಾಗಿ ಸ್ವೀಕರಿಸಿದ ಸಾಧುಗಳ ವಿಡಿಯೋವನ್ನು ಪ್ರಸ್ತುತ ನಡೆಯುತ್ತಿರುವ ಮಹಾಕುಂಭಕ್ಕೆ ಸಂಬಂಧಿಸಿದ್ದು ಎಂದು ತಪ್ಪಾಗಿ ಹಂಚಿಕೊಂಡಿದ್ದಾರೆ. ಹಾಗಾಗಿ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಮಹಾಕುಂಭದಲ್ಲಿ ಸಾಧುವೊಬ್ಬರು ಬೆಂಕಿ ಸ್ನಾನ ಮಾಡಿದ್ದಾರೆ ಎಂದು ಸಾಕ್ಷ್ಯಚಿತ್ರದ ವಿಡಿಯೋ ಹಂಚಿಕೆ

