FACT CHECK | ಮಲ್ಲಿಕಾರ್ಜುನ ಖರ್ಗೆಯವರನ್ನು ಅವಮಾನಿಸಿದ್ರಾ ರಾಹುಲ್ ?
ಸಾಮಾಜಿಕ ಮಾಧ್ಯಮಗಳಲ್ಲಿ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸಂಬಂಧಿಸಿದಂತೆ ವಿಡಿಯೋವೊಂದು ವೈರಲ್ ಆಗುತ್ತಿದ್ದು , ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಅವರನ್ನು ಕುರ್ಚಿಯಿಂದ ಎದ್ದು ನಿಲ್ಲುವಂತೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. 23 ಸೆಕೆಂಡ್ಗಳ ದೃಶ್ಯಾವಳಿಯಲ್ಲಿ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಕಾಂಗ್ರೆಸ್ ಅಧ್ಯಕ್ಷ ಮತ್ತು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಆಸನವನ್ನು ಸರಿಸುತ್ತಿರುವುದನ್ನು ಕಾಣಬಹುದು.

‘‘ಕಾಂಗ್ರೆಸ್ನ ಅಧ್ಯಕ್ಷರು ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೋನಿಯಾ ಗಾಂಧಿ ರಾಹುಲ್ ಗಾಂಧಿ ಕುಟುಂಬ ನಡೆಸಿಕೊಳ್ಳುವ ರೀತಿ ನೋಡಿ ಇಷ್ಟೆಲ್ಲ ಅವಮಾನ ಆದರೂ ಅಲ್ಲಿರಬೇಕೇ’’ ಎಂಬ ಬರಹದೊಂದಿಗೆ ಫೇಸ್ಬುಕ್ ಬಳಕೆದಾರರೊಬ್ಬರು ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಇದೇ ರೀತಿಯ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ವೀಡಿಯೊವನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು. ಹಾಗಿದ್ದರೆ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ವಿಡಿಯೋದ ಕೀಫ್ರೇಮ್ಗಳನ್ನು ತೆಗೆದು ಗೂಗಲ್ ಸರ್ಚ್ ಮಾಡಿದಾಗ, ಜನವರಿ 15 ರಂದು ಕಾಂಗ್ರೆಸ್ ಪಕ್ಷದ ಅಧಿಕೃತ ಯೂಟ್ಯೂಬ್ ಚಾನೆಲ್ನಲ್ಲಿ ‘ಹೊಸ ಎಐಸಿಸಿ ಹೆಚ್ಕ್ಯು ಇಂದಿರಾ ಭವನ ಉದ್ಘಾಟನೆ’ ಎಂಬ ಶೀರ್ಷಿಕೆಯ ವೀಡಿಯೊವನ್ನು ಲೈವ್-ಸ್ಟ್ರೀಮ್ ಮಾಡಿರುವುದು ಕಂಡುಬಂದಿದೆ.
ಈ ವಿಡಿಯಯೋದ ವಿಸ್ತೃತ ಆವೃತ್ತಿಯಲ್ಲಿ, ಮಲ್ಲಿಕಾರ್ಜುನ ಖರ್ಗೆ ಅವರನ್ನು ಮಾತನಾಡಲು ಆಹ್ವಾನಿಸಿದಾಗ ರಾಹುಲ್ ಗಾಂಧಿ ಅವರು, ಖರ್ಗೆ ಅವರನ್ನು ವೇದಿಕೆಗೆ ಹೋಗಲು ಸಹಾಯ ಮಾಡುವುದನ್ನು ತೋರಿಸುತ್ತದೆ.
ವಿಡಿಯೋದಲ್ಲಿ ರಾಜ್ಯಸಭಾ ಸಂಸದ ಮತ್ತು ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಖಜಾಂಚಿ ಅಜಯ್ ಮಾಕೆನ್ ಅವರು 28 ನಿಮಿಷಗಳ ಅವಧಿಯಲ್ಲಿ ರಾಹುಲ್ ಗಾಂಧಿಯನ್ನು ಮಾತನಾಡಲು ಆಹ್ವಾನಿಸಿದರು, ರಾಹುಲ್ ತಮ್ಮ ಭಾಷಣವನ್ನು 46:06 ನಿಮಿಷಗಳಲ್ಲಿ ಮುಗಿಸಿದರು.
ರಾಹುಲ್ ತಮ್ಮ ಭಾಷಣ ಮುಗಿಸಿದ ನಂತರ ವೇದಿಕೆಗೆ ಹಿಂತಿರುಗಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಮಾತನಾಡಲು ಆಹ್ವಾನಿಸಿದರು. ನಿಖರವಾಗಿ 46:45 ನಿಮಿಷಗಳಲ್ಲಿ, ವೈರಲ್ ಕ್ಲಿಪ್ ಕಾಣಿಸಿಕೊಳ್ಳುತ್ತದೆ, ರಾಹುಲ್ ಅವರು ಖರ್ಗೆ ಅವರನ್ನು ಭಾಷಣ ಮಾಡಲು ಎದ್ದೇಳಲು ಸಹಾಯ ಮಾಡಲು ಕುರ್ಚಿಯನ್ನು ಹಿಂದೆ ಸರಿಸುತ್ತಾರೆ. ವಿಸ್ತೃತ ಆವೃತ್ತಿಯಲ್ಲಿ ರಾಹುಲ್ ಅವರು ಸೌಜನ್ಯಕ್ಕಾಗಿ ಖರ್ಗೆ ಅವರಿಗೆ ಸಹಾಯ ಮಾಡುತ್ತಿರುವುದು ಕಾಣಬಹುದು, ಅವರನ್ನು ಅವಮಾನಿಸಿಲ್ಲ ಎಂದು ಸ್ಪಷ್ಟವಾಗಿ ಕಾಣುತ್ತದೆ.
ಜನವರಿ 15 ರಂದು ಪ್ರಿಯಾಂಕಾ ಗಾಂಧಿಯವರ ಅಧಿಕೃತ ಯೂಟ್ಯೂಬ್ ಚಾನೆಲ್ನಲ್ಲಿ ಈವೆಂಟ್ನ ವೀಡಿಯೊವನ್ನು ಲೈವ್-ಸ್ಟ್ರೀಮ್ ಮಾಡಿರುವುದನ್ನು ನಾವು ಕಂಡುಕೊಂಡಿದ್ದೇವೆ. ಈ ವೀಡಿಯೊ ಕೂಡ 45:04-ನಿಮಿಷಗಳ ನಂತರ ಅದೇ ಅನುಕ್ರಮವನ್ನು ತೋರಿಸುತ್ತದೆ, ಅಲ್ಲಿ ರಾಹುಲ್ ಖರ್ಗೆ ಅವರಿಗೆ ಕುರ್ಚಿಯಿಂದ ಸಹಾಯ ಮಾಡುವುದನ್ನು ಕಾಣಬಹುದು.
ಒಟ್ಟಾರೆಯಾಗಿ ಹೇಳುವುದಾದರೆ, ರಾಹುಲ್ ಗಾಂಧಿಯವರು ಮಲ್ಲಿಕಾರ್ಜುನ ಖರ್ಗೆ ಅವರನ್ನು ಅವರ ಕುರ್ಚಿಯಿಂದ ಕೆಳಗಿಳಿಸುವ ಮೂಲಕ ಅವಮಾನಿಸಿದ್ದಾರೆ ಎಂದು ಎಡಿಟ್ ಮಾಡಿದ ವಿಡಿಯೋವನ್ನು ತಪ್ಪಾಗಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದ್ದನ್ನು ಓದಿರಿ : FACT CHECK | ಅಮೆರಿಕದಲ್ಲಿ ಬೆಂಕಿ ಹಚ್ಚಿ ಅನಾಹುತ ಸೃಷ್ಠಿಸಲು ಯತ್ನಿಸಿದ ವ್ಯಕ್ತಿ ಹಿಂದೂ ಸಮುದಾಯದವನಲ್ಲ

