FACT CHECK | ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ ಮಾಡಿದ್ರಾ ನಟ ಪ್ರಕಾಶ್ ರಾಜ್?
ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಕುಂಭ ಮೇಳದಲ್ಲಿ ಬಹುಭಾಷಾ ನಟ ಪ್ರಕಾಶ್ ರೈ ಭಾಗವಹಿಸಿ ಪವಿತ್ರ ಸ್ನಾನ ಮಾಡಿದ್ದಾರೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಕಾಶ್ ರಾಜ್ ನದಿ ನೀರಿನಲ್ಲಿ ಸ್ನಾನ ಮಾಡುತ್ತಿರುವ ಫೋಟೊವೊಂದು ವೈರಲ್ ಆಗುತ್ತಿದೆ.
ಪ್ರಶಾಂತ್ ಸಂಬರ್ಗಿ ಎಂಬ ಫೇಸ್‌ಬುಕ್ ಬಳಕೆದಾರರೊಬ್ಬರು, ಪ್ರಕಾಶ್ ರೈ ನದಿಯಲ್ಲಿ ಮುಳುಗೇಳುವ ಚಿತ್ರವೊಂದನ್ನು ಹಂಚಿಕೊಂಡಿದ್ದಾರೆ. ಈ ಚಿತ್ರದ ಜೊತೆಗೆ ಅವರು, “ಕುಂಭಮೇಳದಲ್ಲಿ ನಟ ಪ್ರಕಾಶ್ ರಾಜ್. ತ್ರಿವೇಣಿ ಸಂಗಮದಲ್ಲಿ ಮಿಂದೆದ್ದರು. ಅವರ ಎಲ್ಲಾ ಪಾಪಗಳನ್ನು ಕ್ಷಮಿಸಿ, ತೆಗೆದುಹಾಕಲಾಗುವುದು ಎಂದು ಭಾವಿಸುತ್ತೇನೆ,” ಎಂದು ಬರೆದಿದ್ದಾರೆ.
ಇನ್ನೂ ಹಲವರು ಈ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಅವುಗಳನ್ನು ಇಲ್ಲಿ ಕಾಣಬಹುದಾಗಿದೆ. ಹಾಗಾಗಿ ಈ ವೈರಲ್ ಚಿತ್ರದಲ್ಲಿ ಕಾಣುತ್ತಿರುವಂತೆ ನಿಜವಾಗಿಯೂ ಪ್ರಕಾಶ್ ರಾಜ್ ಉತ್ತರಪ್ರದೇಶದ ಮಹಾ ಕುಂಭಮೇಳದಲ್ಲಿ ಭಾಗವಹಿಸಿ ಪವಿತ್ರ ಸ್ನಾನ ಮಾಡಿದ್ದಾರೇಯೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ಪ್ರಶಾಂತ್ ಸಂಬರ್ಗಿ ಹಂಚಿಕೊಂಡಿರುವ ಚಿತ್ರವನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಪ್ರಕಾಶ್ ರೈ ಚಿತ್ರ ಎಐನಿಂದ ರಚಿಸಿದ್ದಾಗಿರಬಹುದು ಎಂಬ ಅನುಮಾನದ ಮೇಲೆ, ಎಐ ಚಿತ್ರಗಳನ್ನು ಕಂಡು ಹಿಡಿಯುವ ‘ಸೈಟ್ ಎಂಜಿನ್’ನಲ್ಲಿ ಮೊದಲಿಗೆ ಈ ಚಿತ್ರವನ್ನು ಪರಿಶೀಲನೆಗೆ ಒಳಪಡಿಸಲಾಯಿತು. ಆಗ ಇದು ಶೇ. 92ರಷ್ಟು ಜರನೇಟಿವ್ ಎಐ ಬಳಸಿ ರಚಿಸಿದ ಚಿತ್ರ ಎಂದು ‘ಸೈಟ್ ಇಂಜಿನ್’ ಫಲಿತಾಂಶ ತೋರಿಸಿತು.
![]()
ಇದನ್ನು ಮತ್ತಷ್ಟು ಖಚಿತಪಡಿಸಿಕೊಳ್ಳಲು ‘ಹೈವ್ ಮಾಡರೇಷನ್’ ಎಂಬ ಇನ್ನೊಂದು ಎಐ ಚಿತ್ರಗಳನ್ನು ಪತ್ತೆ ಹಚ್ಚುವ ಟೂಲ್‌ನ ಮೊರೆ ಹೋಗಲಾಯಿತು. ಆಗ ಅದು ಕೂಡ, ಇದು ಶೇ. 99.9ರಷ್ಟು ಎಐನಿಂದ ರಚಿಸಿದ ಚಿತ್ರ ಎಂಬ ಫಲಿತಾಂಶವನ್ನು ನೀಡಿತು.
![]()
ಇನ್ನು ಪ್ರಕಾಶ್ ರೈ (ರಾಜ್) ಕುಂಭ ಮೇಳಕ್ಕೆ ಹೋಗಿದ್ದರಾ ಎಂದು ತಿಳಿದುಕೊಳ್ಳಲು ‘Prakash Rai in Kumbh Mela’, ‘Prakash Raj in Kumbh Mela’ ಎಂದು ಗೂಗಲ್‌ನಲ್ಲಿ ಹುಡುಕಾಟ ನಡೆಸಿದಾಗ, ಆಗ ಬಗ್ಗೆ ಯಾವುದೇ ಮಾಹಿತಿಯೂ ಲಭ್ಯವಾಗಿಲ್ಲ.
ಕುಂಭ ಮೇಳದಲ್ಲಿ ಖ್ಯಾತ ನಟ ಪ್ರಕಾಶ್ ರೈ ಭಾಗವಹಿಸಿ, ಪುಣ್ಯ ಸ್ನಾನ ಮಾಡಿದರು ಎಂದು ಹಂಚಿಕೊಳ್ಳಲಾಗಿರುವ ವಿಡಿಯೋ ಅಸಲಿಯಲ್ಲ ಎಂದು ವಿವರವಾದ ಪರಿಶೀಲನೆಯಿಂದ ತಿಳಿದು ಬಂದಿದೆ. ಈ ಚಿತ್ರವನ್ನು ವಿವಿಧ ಎಐ ಚಿತ್ರಗಳನ್ನು ಪತ್ತೆ ಹಚ್ಚುವ ಟೂಲ್‌ಗಳಲ್ಲಿ ಪರಿಶೀಲನೆಗೆ ಒಳಪಡಿಸಿದಾಗ, ಈ ಚಿತ್ರವನ್ನು ಕೃತಕ ಬುದ್ಧಿಮತ್ತೆ ಟೂಲ್‌ಗಳನ್ನು ಬಳಸಿ ಸೃಷ್ಟಿಸಲಾಗಿದೆ ಎಂಬುದು ಸ್ಪಷ್ಟವಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಪ್ರಕಾಶ್ ರಾಜ್ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಾಹಾ ಕುಂಭಮೇಳಕ್ಕೆ ಹೋಗಿ ಪವಿತ್ರ ಸ್ನಾನ ಮಾಡಿದ್ದಾರೆ ಎಂದು ಹಂಚಿಕೊಳ್ಳಲಾಗುತ್ತಿರುವ ಫೋಟೊ AI ನಿಂದ ರಚಿತವಾದ ಚಿತ್ರವಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | 2014ರ ಟಿಪ್ಪು ಸುಲ್ತಾನ್ ಸ್ತಬ್ದ ಚಿತ್ರವನ್ನು 2025ರದ್ದು ಎಂದು ತಪ್ಪಾಗಿ ಹಂಚಿಕೆ

