FACT CHECK | ICC ಚಾಂಪಿಯನ್ಸ್ ಟ್ರೋಫಿ 2025 ಪಂದ್ಯದಲ್ಲಿ ಬಾಂಗ್ಲಾ-ಭಾರತ ಆಟಗಾರರ ನಡುವೆ ಜಗಳ ಆಗಿದ್ದು ನಿಜವೇ?
ICC ಚಾಂಪಿಯನ್ಸ್ ಟ್ರೋಫಿ ಆರಂಭವಾಗಿದೆ. ಫೆಬ್ರವರಿ 20 ರಂದು ಭಾರತ ಮತ್ತು ಬಾಂಗ್ಲಾದೇಶ ನಡುವೆ ಪಂದ್ಯವಿತ್ತು, ಇದರಲ್ಲಿ ಭಾರತ 6 ವಿಕೆಟ್‌ಗಳಿಂದ ಜಯಗಳಿಸಿತು. ಈ ಪಂದ್ಯದ ನಂತರ ಭಾರತ ಮತ್ತು ಬಾಂಗ್ಲಾದೇಶ ಆಟಗಾರರು ಮೈದಾನದಲ್ಲಿ ಹೊಡೆದಾಡಿಕೊಂಡಿದ್ದಾರೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.
ಈ ವೀಡಿಯೊವನ್ನು ಹಂಚಿಕೊಳ್ಳುವಾಗ, ಫೆಬ್ರವರಿ 20 ರಂದು ನಡೆದ ಪಂದ್ಯದ ನಂತರ ಎರಡೂ ದೇಶಗಳ ಆಟಗಾರರು ಪರಸ್ಪರ ಹೊಡೆದಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ.
View this post on Instagram
Instagram ನಲ್ಲಿ ವೀಡಿಯೊವನ್ನು ಹಂಚಿಕೊಳ್ಳುವಾಗ, ‘ಕ್ರಿಕೆಟ್ ಕಿ ದುನಿಯಾ 2025’ ಎಂಬ ಬಳಕೆದಾರರು ಭಾರತ ಮತ್ತು ಬಾಂಗ್ಲಾದೇಶದ ನಡುವೆ ಹೊಸ ಹೋರಾಟವಿದೆ ಎಂದು ಬರೆದಿದ್ದಾರೆ.
ಹಮೀಮ್. ರಾಝಾ. 18 ಹೆಸರಿನ ಯೂಟ್ಯೂಬ್ ಚಾನೆಲ್ 3 ದಿನಗಳ ಹಿಂದೆ ಎರಡು ತಂಡಗಳ ನಡುವಿನ ಕಾದಾಟದ ವೀಡಿಯೊವನ್ನು ಹಂಚಿಕೊಂಡಿದೆ. ವೈರಲ್ ವಿಡಿಯೋದಲ್ಲಿ ಭಾರತ vs ಬಾಂಗ್ಲಾದೇಶ 20/02/2025 ಎಂದು ಬರೆಯಲಾಗಿದೆ. ಹಾಗಿದ್ದರೆ ಈ ವೈರಲ್ ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾಗುತ್ತಿರುವ ವಿಡಿಯೋಗಳ ಸತ್ಯಾಸತ್ಯತೆಗಳನ್ನು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿರುವ ವಿಡಿಯೋದ ಸತ್ಯಾಸತ್ಯತೆ ತಿಳಿಯಲು ಈ ವಿಡಿಯೋಗೆ ಸಂಬಂಧಿಸಿದ ಕೀವರ್ಡ್ ಗಳನ್ನು ಗೂಗಲ್ ನಲ್ಲಿಸರ್ಚ್ ಮಾಡಿದಾಗ ಯಾವುದೇ ವರದಿ ಯಾವುದೇ ವರದಿಗಳು ಲಭ್ಯವಾಗಲಿಲ್ಲ. ಇದರಲ್ಲಿ ಫೆಬ್ರವರಿ 20 ರಂದು ಉಭಯ ದೇಶಗಳ ಆಟಗಾರರ ನಡುವೆ ಹೊಡೆದಾಟ ನಡೆದಿತ್ತು ಎನ್ನಲಾಗಿದೆ.
ಆದರೆ, ಗೂಗಲ್ ಲೆನ್ಸ್ ಸಹಾಯದಿಂದ ವೀಡಿಯೊದ ಕೀಫ್ರೇಮ್‌ಗಳನ್ನು ಸರ್ಚ್ ಮಾಡಿದಾಗ, ನವಭಾರತ್ ಟೈಮ್ಸ್‌ನ ವರದಿ ಲಭ್ಯವಾಗಿದೆ. ಈ ವರದಿಯ ಪ್ರಕಾರ, ಭಾರತ ಮತ್ತು ಬಾಂಗ್ಲಾದೇಶದ ಆಟಗಾರರ ನಡುವೆ ಈ ಘರ್ಷಣೆ 2020 ರಲ್ಲಿ ನಡೆಯಿತು. ವರದಿ ಪ್ರಕಾರ ಬಾಂಗ್ಲಾದೇಶ ಆಟಗಾರರು ಭಾರತೀಯ ಆಟಗಾರರ ಮುಂದೆ ಹೋಗಿ ನಿಂದಿಸಿದ್ದು, ಎರಡೂ ತಂಡಗಳ ಆಟಗಾರರ ನಡುವೆ ಮಾತಿನ ಚಕಮಕಿ ನಡೆದಿದೆ. ಆದರೆ, ಇದಕ್ಕೆ ಬಾಂಗ್ಲಾದೇಶ ತಂಡದ ನಾಯಕ ಕೂಡ ಕ್ಷಮೆ ಯಾಚಿಸಿದ್ದಾರೆ.

ಮತ್ತಷ್ಟು ಮಾಹಿತಿಗಾಗಿ ಗೂಗಲ್‌ನಲ್ಲಿ ಸರ್ಚ್ ಮಾಡಿದಾಗ, 10 ಫೆಬ್ರವರಿ 2020ರಂದು ಪ್ರಜಾವಾಣಿ ಪ್ರಕಟಿಸಿದ ವರದಿಯೊಂದು ಲಭ್ಯವಾಗಿದೆ. ಅಂಡರ್-19 ವಿಶ್ವಕಪ್ ಕ್ರಿಕೆಟ್: ಗೆದ್ದ ನಂತರ ಉದ್ದಟತನ ತೋರಿದ ಬಾಂಗ್ಲ ಎಂಬ ಶೀರ್ಷಿಕೆಯೊಂದಿಗೆ ವರದಿಯನ್ನು ಪ್ರಕಟಿಸಿದೆ. ವರದಿಯ ಪ್ರಕಾರ ಕ್ರಿಕೆಟ್‌ಯುವ ವಿಶ್ವಕಪ್ ಗೆದ್ದವೇಳೆ ಬಾಂಗ್ಲಾ ತಂಡ ಹಾಗೂ ಭಾರತದ ಯುವ ಆಟಗಾರರ ನಡುವೆ ಮಾತಿನ ಚಕಮಕಿ ನಡೆದು ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದ ಘಟನೆ ನಡೆದಿದೆ ಎಂದು ಹೇಳಿದೆ.
17 ಫೆಬ್ರವರಿ 2020ರಂದು ನ್ಯೂಸ್ 18 ಘಟನೆ ಬಗ್ಗೆ ವರದಿ ಮಾಡಿದ್ದು, ಬಾಂಗ್ಲಾ ಯುವ ಆಟಗಾರರು ಭಾರತವನ್ನು ಫೈನಲ್ ನಲ್ಲಿಸೋಲಿಸಿದ ನಂತರಬಾಂಗ್ಲಾ ಆಟಗಾರನೊಬ್ಬ ಭಾರತೀಯ ಆಟಗಾರನ ಕುರಿತು ಆಡಿದ ಮಾತು ಅಲ್ಲಿದ್ದ ಇತರೆ ಭಾರತೀಯ ಆಟಗಾರರನ್ನು ರೊಚ್ಚಿಗೆಬ್ಬಿಸಿತ್ತು. ಇದರಿಂದಾಗಿ ಆಟಗಾರರ ನಡುವೆ ಮಾತಿನ ಚಕಮಕಿ ಆರಂಭಾಯಿತು.

ಈ ಸಂದರ್ಭದಲ್ಲಿ ಭಾರತ ತಂಡದ ನಾಯಕಪ್ರಿಯಂಗರ್ಗ್ ಮಧ್ಯಪ್ರವೇಶಿಸಿದಾಗಲೂ ಬಾಂಗ್ಲಾ ಆಟಗಾರರು ತಮ್ಮ ದರ್ಪ ತೋರಿದರು. ಆಗಎರಡೂ ಆಟಗಾರರ ನಡುವೆ ಘರ್ಷಣೆ ನಡೆಯುವ ಹಂತಕ್ಕೆ ತಲುಪಿದೆ.ಕ್ರಿಕೆಟ್ ಚಿತ್ರೀಕರಣ ನಡೆಸುತ್ತಿದ್ದ ಕ್ಯಾಮರಾಗಳು ಪ್ರೇಕ್ಷಕರ ಗ್ಯಾಲರಿಯತ್ತ ತಮ್ಮ ಗಮನ ಹರಿಸಿದ್ದರಿಂದ ಅಲ್ಲಿ ಏನಾಯಿತು ಎಂದು ತಂಡದ ಆಟಗಾರರನ್ನು ಹೊರತುಪಡಿಸಿ ಬೇರಾರಿಗೂ ತಿಳಿಯದಾಯಿತು ಎಂದು ಸುದ್ದಿಸಂಸ್ಥೆಗಳು ವರದಿ ಮಾಡಿವೆ.
ಇದಾದ ಬಳಿಕ ಐದು ವರ್ಷಗಳ ಹಿಂದೆ ಅಪ್ಲೋಡ್ ಮಾಡಿರುವ ವಿಡಿಯೋ ಕೂಡ ಯೂಟ್ಯೂಬ್ ನಲ್ಲಿ ಪತ್ತೆಯಾಗಿತ್ತು. ಇದರಲ್ಲಿ ಉಭಯ ತಂಡಗಳ ಆಟಗಾರರು ಕಿತ್ತಾಡಿಕೊಳ್ಳುತ್ತಿರುವುದು ಕಂಡುಬಂದಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ICC ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲಿ ಭಾರತ-ಬಾಂಗ್ಲಾದೇಶ ಆಟಗಾರರ ನಡುವಿನ ಘರ್ಷಣೆಯ ಹೇಳಿಕೆಯು ತಪ್ಪುದಾರಿಗೆಳೆಯುವಂತಿದೆ. ವೈರಲ್ ವಿಡಿಯೋ 5 ವರ್ಷಗಳಷ್ಟು ಹಳೆಯದಾಗಿದ್ದು ಅಂಡರ್19 ವಿಶ್ವಕಪ್‌ನಲ್ಲಿ ಭಾರತದ ವಿರುದ್ದ ಪಂದ್ಯ ಗೆದ್ದ ಬಾಂಗ್ಲಾದೇಶದ ಆಟಗಾರರು ಉದ್ದಟತನ ರೋರಿದ ವಿಡಿಯೋ ಎಂದು ತನಿಖೆಯಿಂದ ತಿಳಿದುಬಂದಿದೆ. ಇಬ್ಬರು ಆಟಗಾರರ ನಡುವೆ ಈ ಘರ್ಷಣೆ 2020 ರಲ್ಲಿ ನಡೆದಿತ್ತು. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಬಾಸ್ಮತಿ ಅಕ್ಕಿಯನ್ನು ಪಾಕಿಸ್ತಾನಿ ಉತ್ಪನ್ನವೆಂದು ಯುರೋಪಿಯನ್ ಒಕ್ಕೂಟ ಅಧಿಕೃತವಾಗಿ ಘೋಷಿಸಿದೆಯೇ?

