FACT CHECK | ರಂಜಾನ್ ಮಾಸದಲ್ಲಿ ಹಿಜಾಬ್ ಧರಿಸಿರುವ ಬಾಲಿವುಡ್ ನಟಿಯರ ಫೋಟೊ ವೈರಲ್! ವಾಸ್ತವವೇನು

ರಂಜಾನ್ ಹಬ್ಬದ ಹಿನ್ನೆಲೆಯಲ್ಲಿ ಸೋನಾಕ್ಷಿ ಸಿನ್ಹಾ ಮತ್ತು ಕರೀನಾ ಕಪೂರ್ ಖಾನ್ ಹಿಜಾಬ್ ಧರಿಸಿರುವ ಫೋಟೋ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದು, ರಂಜಾನ್‌ನಲ್ಲಿ ಮುಸ್ಲಿಮರು ಮಾತ್ರವಲ್ಲದೆ ಇತರರು ತಮ್ಮ ವ್ಯಕ್ತಿತ್ವವನ್ನು ಉತ್ತಮಗೊಳಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಪ್ರತಿಪಾದಿಸಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ.

@Karishma_voice ಎಂಬ ಟ್ವಿಟರ್ (ಎಕ್ಸ್‌) ಬಳಕೆದಾರರು ಈ ಫೋಟೋಗಳನ್ನು ಹಂಚಿಕೊಂಡಿದ್ದಾರೆ. “ರಂಜಾನ್ ಕೇವಲ ಆರಾಧನೆಯ ತಿಂಗಳಲ್ಲ, ಬದಲಾಗಿ ವ್ಯಕ್ತಿಯನ್ನು ಉತ್ತಮಗೊಳಿಸುವ ಒಂದು ಮಾರ್ಗ. ಇದು ನಮಗೆ ತಾಳ್ಮೆ, ಕೃತಜ್ಞತೆ, ಭಕ್ತಿ ಮತ್ತು ಮಾನವೀಯತೆಯ ಪಾಠವನ್ನು ಕಲಿಸುತ್ತದೆ” ಎಂದು ಅವರು ಬರೆದಿದ್ದಾರೆ. utkalthakor ಎಂಬ Instagram ಬಳಕೆದಾರರು ಕೂಡ ಈ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಹಾಗಿದ್ದರೆ ಪೋಸ್ಟ್‌ ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೊಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು, ಇಬ್ಬರು ನಟಿಯರ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಹಿಜಾಬ್‌ ಧರಿಸಿರುವ ಫೋಟೋಗಳನ್ನು ಇವೆಯೇ ಎಂದು ಸರ್ಚ್ ಮಾಡಿದಾಗ, ಅವರ ಖಾತೆಗಳಲ್ಲಿ ಅಂತಹ ಯಾವುದೇ ಫೋಟೋ ಲಭ್ಯವಾಗಿಲ್ಲ.

ನಂತರ, ಎಐ ಡಿಟೆಕ್ಟಡ್‌ ಟೂಲ್‌ಗಳನ್ನು ಬಳಸಿಕೊಂಡು ಪರಿಶೀಲಿಸಿದಾಗ, ಈ ವೈರಲ್ ಫೋಟೊಗಳನ್ನು 99% ಎ ಐ ನಿಂದ ರಚಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಸ ಸ (36)

ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ರಂಜಾನ್ ಮಾಸದ ಸಂದರ್ಭ ಬಾಲಿವುಡ್ ನಟಿಯರಾದ ಸೋನಾಕ್ಷಿ ಸಿನ್ಹಾ ಮತ್ತು ಕರೀನಾ ಕಪೂರ್ ಖಾನ್ ಹಿಜಾಬ್ ಧರಿಸಿರುವ ಫೋಟೋ ನಕಲಿ. ಎ ಐ ತಂತ್ರಜ್ಞಾನದಿಂದ ಸೃಷ್ಟಿಸಲಾಗಿದೆ. ವಾಸ್ತವವಾಗಿ ಈ ಫೋಟೊಗಳು ನಕಲಿ.

ಒಟ್ಟಾರೆಯಾಗಿ ಹೇಳುವುದಾದರೆ, ಬಾಲಿವುಡ್ ನಟಿಯರಾದ ಸೋನಾಕ್ಷಿ ಸಿನ್ಹಾ ಮತ್ತು ಕರೀನಾ ಕಪೂರ್ ಖಾನ್ ಹಿಜಾಬ್ ಧರಿಸಿರುವ ಫೋಟೋಗಳನ್ನು AI ತಂತ್ರಜ್ಞಾನ ಬಳಸಿಕೊಂಡು ರಚಿಸಿರುವುದು ಸ್ಪಷ್ಟವಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ  ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ವ್ಯಕ್ತಿಗೆ ಪೇಟಾ ತೊಡಿಸಿ ಸನ್ಮಾನ ಮಾಡಿ ಹಲ್ಲೆ ನಡೆಸಿದ ಘಟನೆ ಯಾವಾಗಿನದ್ದು ಗೊತ್ತೇ? ಈ ಸ್ಟೋರಿ ಓದಿ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights