FACT CHECK | ಪಾಕಿಸ್ತಾನ ಮತ್ತು ಚೀನಾ ನಡುವಿನ ಕಾರಕೋರಂ ಹೆದ್ದಾರಿ ಎಂದು AI ಫೋಟೊ ಹಂಚಿಕೆ
ಮರು ಭೂಮಿಯ ಕಣಿವೆ ಪ್ರದೇಶವೊಂದರಲ್ಲಿ ಹೆದ್ದಾರಿಯನ್ನು ತೋರಿಸುವ ಚಿತ್ರವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಈ ಹೆದ್ದಾರಿ ಪಾಕಿಸ್ತಾನ ಮತ್ತು ಚೀನಾ ನಡುವೆ ಸಂಪರ್ಕ ಕಲ್ಪಿಸುವ ಕಾರಕೋರಂ ಹೆದ್ದಾರಿಯ ಫೋಟೋ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗುತ್ತಿದೆ.
Karakoram Highway ️ ️ pic.twitter.com/oekFaBOkkS
— Miguelito (@Mighty_MichMich) March 13, 2025
@Mighty_MichMich ಎಂಬ ಎಕ್ಸ್ ಬಳಕೆದಾರರು ಈ ಚಿತ್ರವನ್ನು ಹಂಚಿಕೊಂಡಿದ್ದು, ಇದು ‘ಕಾರಕೋರಂ ಹೆದ್ದಾರಿ’ ಎಂದು ಬರೆದುಕೊಂಡಿದ್ದಾರೆ.
Karakoram Highway, united States pic.twitter.com/nD1Ck8eABe
— interestingasfuck (@NiinjaaCatt) March 15, 2025
ಇದೇ ಚಿತ್ರವನ್ನು ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಹಂಚಿಕೊಂಡಿದ್ದಾರೆ. @NiinjaaCatt ಹೆಸರಿನ ಇನ್ನೋರ್ವ ಎಕ್ಸ್ ಬಳಕೆದಾರರು ಇದೇ ಚಿತ್ರವನ್ನು ಹಂಚಿಕೊಂಡಿದ್ದು, ‘ಕಾರಕೋರಂ ಹೆದ್ದಾರಿ, ಯುನೈಟೆಡ್ ಸ್ಟೇಟ್ಸ್’ ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ಇದು ಅಮೆರಿಕದ ಹೆದ್ದಾರಿ ಎಂದು ಹೇಳಿದ್ದಾರೆ.
The #Karakoram Highway is one of the most beautiful roads in the world. Stunning gorges, glaciers, emerald lakes.
The Karakoram Highway, connecting Pakistan with Western China, is 1300 kilometers long and is the highest paved international road in the world. pic.twitter.com/AItouVpKiP— madame connasse (@EaO4TeFy3w50ZrT) March 13, 2025
ಇನ್ನೋರ್ವ ಎಕ್ಸ್ ಬಳಕೆದಾರರಾದ @EaO4TeFy3w50ZrT ಎನ್ನುವವರು ಇದೇ ಚಿತ್ರವನ್ನು ಹಂಚಿಕೊಂಡಿದ್ದು, “ಬೆರಗುಗೊಳಿಸುವ ಕಮರಿಗಳು, ಹಿಮನದಿಗಳು, ಪಚ್ಚೆ ಸರೋವರಗಳೊಂದಿಗೆ ಕಾರಕೋರಂ ಹೆದ್ದಾರಿಯು ವಿಶ್ವದ ಅತ್ಯಂತ ಸುಂದರವಾದ ರಸ್ತೆಗಳಲ್ಲಿ ಒಂದಾಗಿದೆ. ಪಾಕಿಸ್ತಾನವನ್ನು ಪಶ್ಚಿಮ ಚೀನಾದೊಂದಿಗೆ ಸಂಪರ್ಕಿಸುವ ಕಾರಕೋರಂ ಹೆದ್ದಾರಿಯು 1,300 ಕಿಲೋಮೀಟರ್ ಉದ್ದವಿದ್ದು, ವಿಶ್ವದ ಅತಿ ಎತ್ತರದ ಸುಸಜ್ಜಿತ ಅಂತಾರಾಷ್ಟ್ರೀಯ ರಸ್ತೆಯಾಗಿದೆ,” ಎಂದು ಬರೆದುಕೊಂಡಿದ್ದಾರೆ. ಹಾಗಿದ್ದರೆ ಈ ಮೇಲೆ ಪ್ರತಿಪಾದಿಸಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ಪಾಕಿಸ್ತಾನವನ್ನು ಪಶ್ಚಿಮ ಚೀನಾದೊಂದಿಗೆ ಸಂಪರ್ಕಿಸುವ ಕಾರಕೋರಂ ಹೆದ್ದಾರಿ ಎಂಬ ಚಿತ್ರದ ಸತ್ಯಾಸತ್ಯತೆಗಳನ್ನು ಪರಿಶೀಲಿಸಲು, ವೈರಲ್ ಚಿತ್ರವನ್ನು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಇದು ಕಾರಕೋರಂ ಹೆದ್ದಾರಿಯ ಚಿತ್ರವಲ್ಲ ಎಂದು ತಿಳಿದು ಬಂದಿದೆ.

ಇನ್ನು ಗೂಗಲ್ ಮ್ಯಾಪ್‌ನಲ್ಲಿ ನೋಡಿದಾಗಲೂ ಈ ಹೆದ್ದಾರಿ ಇಷ್ಟೊಂದು ತಿರುವುಗಳಿಂದ ಕೂಡಿಲ್ಲ ಎಂದು ತಿಳಿದು ಬಂದಿದೆ. ವೈರಲ್ ಆಗಿರುವ ಚಿತ್ರಕ್ಕಿಂತ ಇದು ಭಿನ್ನವಾಗಿದೆ. ವೈರಲ್ ಚಿತ್ರದಲ್ಲಿ ಹೆದ್ದಾರಿಯು ಭಾರೀ ತಿರುವುಗಳಿಂದ ಕೂಡಿದೆ. ಆದರೆ, ಮ್ಯಾಪ್‌ನಲ್ಲಿ ಇಷ್ಟೊಂದು ತಿರುವುಗಳಿಲ್ಲ.
ಹೀಗಾಗಿ ಇದು ಕೃತಕ ಬುದ್ಧಿಮತ್ತೆ (ಎಐ) ಬಳಸಿ ರಚಿಸಿದ ಚಿತ್ರವಾಗಿರಬಹುದು ಎಂಬ ಅನುಮಾನದ ಮೇಲೆ ಇದನ್ನು ಎಐ ಚಿತ್ರಗಳನ್ನು ಪತ್ತೆ ಹಚ್ಚುವ ಟೂಲ್‌ಗಳಲ್ಲಿ ಪರಿಶೀಲನೆಗೆ ಒಳಪಡಿಸಿದಾಗ, ಈ ಚಿತ್ರವನ್ನು ಎಐ ತಂತ್ರಜ್ಞಾನದಿಂದ ರಚಿಸಲಾಗಿದೆ ಎಂಬ ಫಲಿತಾಂಶ ಲಭ್ಯವಾಗಿದೆ.
![]()
ಒಟ್ಟಾರೆಯಾಗಿ ಹೇಳುವುದಾದರೆ, ಪಾಕಿಸ್ತಾನವನ್ನು ಪಶ್ಚಿಮ ಚೀನಾದೊಂದಿಗೆ ಸಂಪರ್ಕಿಸುವ ಕಾರಕೋರಂ ಹೆದ್ದಾರಿಯ ಚಿತ್ರ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಫೋಟೊ ಕಾರಕೋರಂ ಹೆದ್ದಾರಿಯದ್ದಲ್ಲ. ವೈರಲ್ ಆಗಿರುವ ಚಿತ್ರವನ್ನು ಎಐ ತಂತ್ರಜ್ಞಾನ ಬಳಸಿ ರಚಿಸಿ ಸುಳ್ಳು ಪ್ರತಿಪಾದನೆಯೊಂದಿಗೆ ತಪ್ಪಾಗಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಪ್ರಧಾನಿ ಮೋದಿ ನಮಾಜ್ ಮಾಡುತ್ತಿರುವ ವಿಡಿಯೋದ ಅಸಲೀಯತ್ತೇನು ಗೊತ್ತೇ?

