FACT CHECK | ಪ್ರಧಾನಿ ಮೋದಿ ನಮಾಜ್ ಮಾಡುತ್ತಿರುವ ವಿಡಿಯೋದ ಅಸಲೀಯತ್ತೇನು ಗೊತ್ತೇ?
ಪ್ರಧಾನಿ ಮೋದಿಯವರ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಅವರು ಬಿಳಿ ಕ್ಯಾಪ್ ಧರಿಸಿ ನಮಾಜ್ ಮಾಡುವುದನ್ನು ಕಾಣಬಹುದು. ರಂಜಾನ್ ಮಾಸದಲ್ಲಿ ಪ್ರಧಾನಿ ಮೋದಿಯವರ ಈ ವಿಡಿಯೋ ಸಾಕಷ್ಟು ಶೇರ್ ಆಗುತ್ತಿದೆ.
mr_sahil_shaikh_01 ಹೆಸರಿನ YouTube ಚಾನೆಲ್‌ನಲ್ಲಿ ಬಳಕೆದಾರರು ಪ್ರಧಾನಿ ಮೋದಿಯವರು ನಮಾಜ್ ಮಾಡುವ ವಿಡಿಯೋವನ್ನು ಅಪ್‌ಲೋಡ್ ಮಾಡಿದ್ದಾರೆ. ಪ್ರಧಾನಿ ಮೋದಿ ಪರವಾಗಿ ಎಲ್ಲಾ ಮುಸ್ಲಿಂ ಸಹೋದರರಿಗೆ ರಂಜಾನ್ ಶುಭಾಶಯಗಳು ಎಂಬ ಬರಹದೊಂದಿಗೆ ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ.
ಇದರೊಂದಿಗೆ ಮತ್ತೊಂದು ಸಾಲಿಪುರ್ ಮೀಡಿಯಾ ಯೂಟ್ಯೂಬ್ ಚಾನೆಲ್ ಕೂಡ ಪ್ರಧಾನಿ ಮೋದಿಯವರ ಈ ವೀಡಿಯೊವನ್ನು ಹಂಚಿಕೊಂಡು ಇದು ಸೆಹ್ರಿಗೆ ಸಮಯ, ಉಪವಾಸ ಮಾಡುವವರು ಎಚ್ಚರಗೊಳ್ಳಿ ಎಂದು ಬರೆದಿದ್ದಾರೆ. ಹಾಗಿದ್ದರೆ ಈ ಯೂಟ್ಯೂಬ್‌ಗಳಲ್ಲಿ ಅಪ್‌ಲೋಡ್ ಮಾಡಲಾದ ಪ್ರಧಾನಿ ಮೋದಿ ನಮಾಜ್ ಮಾಡುತ್ತಿರುವ ವಿಡಿಯೋದ ಸತ್ಯಾಸತ್ಯತೆಯನ್ನು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಕೀ ವರ್ಡ್‌ಗಳನ್ನು ಬಳಸಿಕೊಂಡು ಗೂಗಲ್ ಸರ್ಚ್ ಮಾಡಿದಾಗ, ಪ್ರಧಾನಿ ನಮಾಜ್ ಮಾಡಿದ ಯಾವುದೇ ವಿಡಿಯೋಗಳು ಲಭ್ಯವಾಗಲಿಲ್ಲ. ಅದರ ನಂತರ ನಾವು ಪ್ರಧಾನಿ ಮೋದಿಯವರ ಸಾಮಾಜಿಕ ಮಾಧ್ಯಮ ಖಾತೆಯನ್ನು ಸರ್ಚ್ ಮಾಡಿದಾಗಲೂ ಅಂತಹ ಯಾವುದೇ ವೀಡಿಯೊ ಕಂಡುಬಂದಿಲ್ಲ. ಆದರೆ ಪ್ರಧಾನಿ ಮೋದಿ ರಂಜಾನ್ ಹಬ್ಬಕ್ಕೆ ಶುಭಾಶಯ ಕೋರಿ ಮಾಡಿರುವ ಫೋಸ್ಟ್ ಲಭ್ಯವಾಗಿದೆ.
As the blessed month of Ramzan begins, may it bring peace and harmony in our society. This sacred month epitomises reflection, gratitude and devotion, also reminding us of the values of compassion, kindness and service.
Ramzan Mubarak!
— Narendra Modi (@narendramodi) March 2, 2025
X ನಲ್ಲಿ ಪೋಸ್ಟ್ ಮಾಡಿರುವ, PM ಮೋದಿ ಹೀಗೆ ಬರೆದಿದ್ದಾರೆ – ಪವಿತ್ರ ರಂಜಾನ್ ತಿಂಗಳು ಪ್ರಾರಂಭವಾಗುತ್ತಿದೆ, ಅದು ನಮ್ಮ ಸಮಾಜದಲ್ಲಿ ಶಾಂತಿ ಮತ್ತು ಸಾಮರಸ್ಯವನ್ನು ತರಲಿ. ಈ ಪವಿತ್ರ ತಿಂಗಳು ಚಿಂತನೆ, ಕೃತಜ್ಞತೆ ಮತ್ತು ಭಕ್ತಿಯನ್ನು ಸಂಕೇತಿಸುತ್ತದೆ ಮತ್ತು ಸಹಾನುಭೂತಿ, ದಯೆ ಮತ್ತು ಸೇವೆಯ ಮೌಲ್ಯಗಳನ್ನು ನಮಗೆ ನೆನಪಿಸುತ್ತದೆ. ರಂಜಾನ್ ಶುಭಾಶಯಗಳು! ಎಂದಿರುವುದನ್ನು ನೋಡಬಹುದು.
ಅದರ ನಂತರ ನಾವು ವೀಡಿಯೊದ ಕೀಫ್ರೇಮ್‌ಗಳನ್ನು ತೆಗೆದು AI ಟೂಲ್ Wasitai.com ಮೂಲಕ ಪರಿಶೀಲಿಸಲಾಗಿದ್ದು, Wasitai.com ಪ್ರಕಾರ, ವೈರಲ್ ವಿಡಿಯೋದಲ್ಲಿ ಪ್ರಧಾನಿ ಮೋದಿ ನಮಾಜ್ ಮಾಡುತ್ತಿರುವ ದೃಶ್ಯವು ನಿಜವಲ್ಲ. ಇದನ್ನು AI ಮೂಲಕ ರಚಿಸಲಾಗಿದೆ ಎಂಬುದು ಸ್ಪಷ್ಟವಾಗಿದೆ. ಎಐ ಬಳಸಿ ರಚಿಸಲಾಗಿರುವ ಚಿತ್ರವನ್ನು ಡಿಟೆಕ್ಟ್ ಮಾಡಿದಾಗ ಕೆಳಗಿನ ಫಲಿತಾಂಶ ಲಭ್ಯವಾಗಿದೆ.


ಒಟ್ಟಾರೆಯಾಗಿ ಹೇಳುವುದಾದರೆ, ಪ್ರಧಾನಿ ನರೇಂದ್ರ ಮೋದಿ ಅವರು ನಮಾಜ್ ಮಾಡುವ ವಿಡಿಯೋ ನಕಲಿ ಎಂದು ತನಿಖೆಯ ನಂತರ ತಿಳಿದುಬಂದಿದೆ. ರಂಜಾನ್ ತಿಂಗಳಲ್ಲಿ ಪ್ರಧಾನಿ ಮೋದಿ ನಮಾಜ್ ಮಾಡುತ್ತಿದ್ದಾರೆ ಎನ್ನುವಂತೆ ವಿಡಿಯೊವನ್ನು AI ಮೂಲಕ ರಚಿಸಿ ತಪ್ಪಾಗಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಆತ್ಮರಕ್ಷಣೆ ತರಬೇತಿ ಯೋಜನೆ ಮುಸ್ಲಿಂ ಹೆಣ್ಣುಮಕ್ಕಳಿಗೆ ಮಾತ್ರ ಎಂಬುದು ಸುಳ್ಳು

