FACT CHECK | RCB ಮಾಜಿ ನಾಯಕ ಫಾಪ್ ಡುಪ್ಲಿಸಿಸ್ ಬೇಸರದ ಪೋಸ್ಟ್ ನಿಜವೇ ?
ಕಳೆದ ಕೆಲ ಐಪಿಎಲ್ ಟೂರ್ನಿಯಲ್ಲಿ RCB ತಂಡವನ್ನು ಮುನ್ನಡೆಸಿದ್ದು ಫಾಪ್ ಡುಪ್ಲಿಸಿಸ್. ಆದರೆ, ಈ ಬಾರಿ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡ ಖರೀದಿ ಮಾಡಿದ್ದು, ಆ ತಂಡದ ಉಪ ನಾಯಕನಾಗಿ ಆಟವಾಡುತ್ತಿದ್ದಾರೆ. ಈ ಬೆನ್ನಲ್ಲೆ ಡುಪ್ಲಿಸಿಸ್ RCB ಮ್ಯಾನೇಜ್ಮೆಂಟ್ ವಿರುದ್ಧ ಬೇಸರ ಹೊರ ಹಾಕಿದ್ದಾರೆ ಎಂಬ ಪೋಸ್ಟ್ ಹರಿದಾಡುತ್ತಿದೆ.
View this post on Instagram
“ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ವಿರುದ್ಧ ಮಾಜಿ ನಾಯಕ ಫಾಪ್ ಡುಪ್ಲಿಸಿಸ್ ಬೇಸರ ವ್ಯಕ್ತಪಡಿಸಿದ್ದಾರೆ. ನನಗೆ ಆರ್‌ಸಿಬಿ ಪರ ಆಡುವ ಆಸೆ ಇತ್ತು, ತಂಡದಿಂದ ನನ್ನ ಹೊರ ಹಾಕಿದರು ಎಂದು ಹೇಳಿಕೊಂಡಿದ್ದಾರೆ” ಎಂಬ ಪೋಸ್ಟ್ ಇನ್‌ಸ್ಟಾಗ್ರಾಮ್‌ನಲ್ಲಿ ವೈರಲ್ ಆಗಿದೆ.
ವೈರಲ್ ಪೋಸ್ಟ್‌ನಲ್ಲಿ ಹೀಗೆ ಬರೆಯಲಾಗಿದೆ :
ಸುದ್ದಿ ಮಾಂತ್ರಿಕ ಆಫಿಶಿಯಲ್ ಎಂಬ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಈ ಬಗ್ಗೆ ಪೋಸ್ಟ್ ಮಾಡಲಾಗಿದೆ. ಡುಪ್ಲಿಸಿಸ್ ಫೋಟೋ ಹಾಕಿ, ”
ನನಗೆ ಇನ್ನು RCB ಟೀಮ್ ನಲ್ಲಿ ಆಡಬೇಕು ಎಂದು ತುಂಬಾನೇ ಆಸೆ ಇತ್ತು. ಆದರೆ RCB ಟೀಮ್ ಅವರು ನನ್ನನ್ನು ಹೊರಗಡೆ ಬಿಟ್ಟಿದ್ದಾರೆ. RCB ಟೀಮ್ ಅವರು ನನ್ನನ್ನು ಹೊರಗಡೆ ಬಿಟ್ಟಿದ್ದಾರೆ ಎಂದು ಸುದ್ದಿ ಕೇಳಿ ನನಗೆ ತುಂಬಾನೇ ಬೇಜಾರ್ ಆಯ್ತು. ಮತ್ತು ನಾನು ಯಾವತ್ತಿಗೂ ಅಂದುಕೊಂಡಿದಿಲ್ಲ. RCB ಟೀಮ್ ಅವರು ನನ್ನನ್ನು ಯಾವತ್ತಿಗೂ ಹೊರಗಡೆ ಬಿಡುವುದಿಲ್ಲ ಎಂದೇ ಅಂದುಕೊಂಡಿದೆ. ನನಗೂ ಕೂಡ RCB ಟೀಮ್ ಗೆ ಕಪ್ ಗೆಲ್ಲಿಸಿಕೊಡಬೇಕು ಎಂದು ತುಂಬಾನೇ ಆಸೆ ಇತ್ತು. ನಾನು RCB ಟೀಮ್ ಗೆ ಆಯ್ಕೆ ಆದ ಮೇಲೆ ABD ಅವರು ನನಗೆ ಒಂದು ಮಾತನ್ನು ಹೇಳಿ ಕಳಿಸಿದ್ದರು. ನೀನು RCB ಟೀಮ್ ಗೆ ಕಪ್ ಗೆಲ್ಲಿಸಿಕೊಡವರಿಗೂ ನೀನು RCB ಟೀಮ್ ಅನ್ನು ಬಿಟ್ಟು ಬರಬೇಡ ಎಂದು ಹೇಳಿದ್ದರು ಎಂದು ಡುಪ್ಲಿಸಿಸ್ ಹೇಳಿದ್ದಾರೆ ” ಎಂದು ಬರೆಯಲಾಗಿದೆ. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವಂತೆ ಡುಪ್ಲಿಸಿಸ್ ಆರ್‌ಸಿಬಿ ತಂಡದಿಂದ ತನ್ನನ್ನು ಕೈಬಿಟ್ಟಿದ್ದಕ್ಕೆ ನಿಜವಾಗಿಯೂ ಬೇಸರ ವ್ಯಕ್ತಪಡಿಸಿದ್ದಾರೆಯೇ ಅಥವಾ ಪೋಸ್ಟ್ ನಕಲಿಯೇ ಎಂದು ತಿಳಿಯಲು ಮುಖ್ಯವಾಹಿನಿ ಮಾಧ್ಯಮಗಳಲ್ಲಿ ಈ ಬಗ್ಗೆ ಏನಾದರೂ ಪ್ರಕಟೌಆಗಿದೆಯೇ ಎಂದು ಪರಿಶೀಲಿಸಿದಾಗ, ಈ ಬಗ್ಗೆ ಯಾವುದೇ ಸುದ್ದಿ ವರದಿಗಳು ಪ್ರಕಟವಾಗಿರುವುದು ಲಭ್ಯವಾಗಿಲ್ಲ.
![]()
ಆ ನಂತರ ಡುಪ್ಲಿಸಿಸ್ ಅವರ ಸೋಶಿಯಲ್ ಮೀಡಿಯಾ ಖಾತೆಗಳನ್ನು ಪರಿಶೀಲಿಸಿದಾಗ ಅಲ್ಲಿಯೂ ಈ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಬದಲಾಗಿ ಆರ್‌ಸಿಬಿ ತಂಡದಿಂದ ಹೊರಗೆ ಬಂದ ನಂತರ ಅಭಿಮಾನಿಗಳಿಗೆ ಧನ್ಯವಾದ ಹೇಳಿ ಹೊಗಳಿರುವ ಇನ್‌ಸ್ಟಾಗ್ರಾಂ ಪೋಸ್ಟ್ ಲಭ್ಯವಾಗಿದೆ. ಈ ಮೂಲಕ ಆರ್‌ಸಿಬಿ ವಿರುದ್ಧ ಬೇಸರ ಹೊರಹಾಕಿದ್ದಾರೆ ಎಂಬ ಪೋಸ್ಟ್ ಸುಳ್ಳು ಎಂದು ಸ್ಪಷ್ಟವಾಗಿದೆ.
View this post on Instagram
ಒಟ್ಟಾರೆಯಾಗಿ ಹೇಳುವುದಾದರೆ, RCB ತಂಡದಿಂದ ನನ್ನ ಹೊರ ಹಾಕಿದ್ರು ಎಂದು ಡುಪ್ಲಿಸಿಸ್ ಬೇಸರ ವ್ಯಕ್ತಪಡಿಸಿದ್ದಾರೆ ಎಂಬ ಪೋಸ್ಟ್ ನಕಲಿ. ಆರ್‌ಸಿಬಿ ತಂಡದ ವಿರುದ್ಧ ಅವರು ಮಾತನಾಡಿಲ್ಲ. ಹಾಗಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್ ಸುಳ್ಳು.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಚಿರತೆಯೊಂದು ಬನ್ನೇರುಘಟ್ಟದಲ್ಲಿ ಕಾಣಿಸಿಕೊಂಡಿದೆ ಎಂದು ಹಳೆಯ ವಿಡಿಯೋ ಹಂಚಿಕೆ

