FACT CHECK | ತೆರಿಗೆದಾರರಿಗೆ ಕೇಂದ್ರ ಸರ್ಕಾರ ಉಚಿತ ಯೋಜನೆಗಳನ್ನು ಜಾರಿ ಮಾಡಿದೆ ಎಂದು ನಕಲಿ ವಿಡಿಯೋ ಹಂಚಿಕೆ
‘ಪ್ರಧಾನ ಮಂತ್ರಿ ಕರ್ದತಾ ಕಲ್ಯಾಣ ಯೋಜನೆ’ಯಡಿ ತೆರಿಗೆದಾರರಿಗೆ ವಿವಿಧ ನಿಬಂಧನೆಗಳ ಕುರಿತು ಚರ್ಚಿಸುತ್ತಿರುವ ವ್ಯಕ್ತಿಯ ವೀಡಿಯೊವನ್ನು ವಿವಿಧ ಸಾಮಾಜಿಕ ಮಾಧ್ಯಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಈ ಹೊಸ ಯೋಜನೆಯಡಿಯಲ್ಲಿ ಭಾರತ ಸರ್ಕಾರವು ತೆರಿಗೆದಾರರಿಗೆ ಪ್ರಯಾಣ ರಿಯಾಯಿತಿಗಳು ಮತ್ತು ಉಚಿತ ಇಂಟರ್ನೆಟ್ ಡೇಟಾದಂತಹ ಸೇವೆಗಳನ್ನು ನೀಡಲು ಮುಂದಾಗಿದೆ ಎಂದು ಹಲವರು ಬರೆದುಕೊಂಡು ವಿಡಿಯೋವನ್ನು ಶೇರ್ ಮಾಡುತ್ತಿದ್ದಾರೆ.
GOOD NEWS!!
For all TAX PAYERS. pic.twitter.com/GtrkRBK1pr— Bhupy (@singhbhupy7) April 7, 2025
ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಈ ವಿಡಿಯೋವನ್ನು ಹಂಚಿಕೊಳ್ಳುತ್ತಾ, ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರದ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತ ಪಡಿಸುತ್ತಿದ್ದಾರೆ.

ಹೀಗೆ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋಕುರಿತು ಸತ್ಯಾಸತ್ಯತೆಗಳನ್ನು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್
ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋ ಕುರಿತು ಪರಿಶೀಲನೆ ನಡೆಸಲು ವಿಡಿಯೋಗೆ ಸಂಬಂಧಿಸಿದಂತೆ ವಿವಿಧ ಕೀ ವರ್ಡ್‌ಗಳನ್ನು ಬಳಸಿಕೊಂಡು ಸರ್ಚ್ ಮಾಡಿದಾಗ, ಈ ಬಗ್ಗೆ ನಮೆಗ ಯಾವುದೇ ಅಧಿಕೃತ ವರದಿಗಳು ಲಭ್ಯವಾಗಿಲ್ಲ.

ಇನ್ನು ವಿಡಿಯೋದಲ್ಲಿ ‘ಪಿಎಂ ಕರ್ದತಾ ಕಲ್ಯಾಣ ಯೋಜನೆ’ಯನ್ನು ಹಣಕಾಸು ಸಚಿವರು 2025 ರ ಬಜೆಟ್ ಭಾಷಣದ ಸಮಯದಲ್ಲಿ ಘೋಷಿಸಿದ್ದಾರೆ ಎಂದು ಹೇಳಲಾಗಿದೆ. ಆದರೆ ಭಾರತ ಸರ್ಕಾರದ ಅಧಿಕೃತ ವೆಬ್‌ಸೈಟ್ indiabudget.gov.in ನಲ್ಲಿ 2025 ರ ಬಜೆಟ್ ಭಾಷಣ ಮತ್ತು ಹಂಚಿಕೆ ವಿವರಗಳನ್ನು ಪರಿಶೀಲಿಸಿದಾಗ , ಅಂತಹ ಯಾವುದೇ ಯೋಜನೆಯನ್ನು ಘೋಷಣೆ ಮಾಡಿರುವುದು ಕಂಡು ಬಂದಿಲ್ಲ. ಇದು ವೈರಲ್ ವಿಡಿಯೋ ಬಗ್ಗೆ ನಮಗೆ ಹಲವು ಅನುಮಾನಗಳನ್ನು ಹುಟ್ಟು ಹಾಕಿತು.
An article by Buland India claims that the Government of India is offering rewards to honest taxpayers like travel discounts, Kar Miles and free internet data under a new scheme called “PM Kardata Kalyan Yojana”#PIBFactCheck
❌This claim is #Fake
▶️There is NO such scheme as… pic.twitter.com/Ec74HhnYrb
— PIB Fact Check (@PIBFactCheck) April 5, 2025
ಹೀಗಾಗಿ ಈ ಬಗ್ಗೆ ಇನ್ನಷ್ಟು ಕೀ ವರ್ಡ್‌ಗಳನ್ನು ಬಳಸಿ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಸರ್ಚ್ ಮಾಡಿದ ವೇಳೆ 5 ಏಪ್ರಿಲ್ 2025ರಂದು , ಭಾರತ ಸರ್ಕಾರದ PIB ಫ್ಯಾಕ್ಟ್ ಚೆಕ್ ಘಟಕವು Xನಲ್ಲಿ ಈ ಕುರಿತು ಪೋಸ್ಟ್ ಮಾಡಿರುವುದು ಲಭ್ಯವಾಗಿದೆ. ಇದರಲ್ಲಿ “PM ಕರ್ದಾತ ಕಲ್ಯಾಣ ಯೋಜನೆ” ಬಗ್ಗೆ ಇದೊಂದು ನಕಲಿ ಸುದ್ದಿ ಎಂದು ಸ್ಪಷ್ಟ ಪಡಿಸಿದೆ. ಪೋಸ್ಟ್‌ನಲ್ಲಿ “ಭಾರತ ಸರ್ಕಾರವು ‘PM ಕರ್ದಾತ ಕಲ್ಯಾಣ ಯೋಜನೆ’ ಎಂಬ ಹೊಸ ಯೋಜನೆಯಡಿಯಲ್ಲಿ ಪ್ರಯಾಣ ರಿಯಾಯಿತಿಗಳು, ಕಾರ್ ಮೈಲ್‌ಗಳು ಮತ್ತು ಉಚಿತ ಇಂಟರ್ನೆಟ್ ಡೇಟಾದಂತಹ ಕೊಡುಗೆಗಳನ್ನು ಪ್ರಾಮಾಣಿಕ ತೆರಿಗೆದಾರರಿಗೆ ನೀಡುತ್ತಿದೆ ಎಂದು ಹೇಳಿಕೊಳ್ಳುತ್ತದೆ. ಈ ಪ್ರತಿಪಾದನೆ ಸುಳ್ಳು. PM ಕರ್ದಾತ ಕಲ್ಯಾಣ ಯೋಜನೆ ಎಂಬಂತಹ ಯಾವುದೇ ಯೋಜನೆ ಇಲ್ಲ.” ಎಂದು ಸ್ಪಷ್ಟವಾಗಿ ಉಲ್ಲೇಖಿಸಿರುವುದು ಕಂಡು ಬಂದಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ರೀತಿ ಕೇಂದ್ರ ಸರ್ಕಾರ ಪ್ರಯಾಣಿಕ ತೆರಿಗೆದಾರರಿಗೆ PM ಕರ್ದಾತ ಕಲ್ಯಾಣ ಯೋಜನೆ ಹೆಸರಿನಲ್ಲಿ ಉಚಿತ ಇಂಟರ್ನೆಟ್ ಡೇಟಾ, ಹಲವು ನೇರ ತೆರಿಗೆಗಳ ಸೇವೆಗಳಿಂದ ವಿನಾಯಿತಿ ನೀಡುತ್ತಿದೆ ಎಂಬುದು ಸುಳ್ಳು. ಆ ರೀತಿಯ ಯಾವುದೇ ಯೋಜನೆಯನ್ನು ಸರ್ಕಾರ ಜಾರಿಗೆ ತಂದಿಲ್ಲ. ಇದೊಂದು ನಕಲಿ ಸುದ್ದಿಯಾಗಿದ್ದು, ಈ ಬಗ್ಗೆ ಎಚ್ಚರಿಕೆ ಇರಲಿ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಮಗುವಿನೊಂದಿಗೆ ಓಡುತ್ತಿರುವ ತಾಯಿ ಗಾಜಾದ ಭೀಕರ ದೃಶ್ಯ ಎಂದು AI ವಿಡಿಯೋ ಹಂಚಿಕೆ

