FACT CHECK | ಅಖಿಲೇಶ್ ಯಾದವ್ ಜೊತೆ ಚಿತ್ರದಲ್ಲಿರುವ ವ್ಯಕ್ತಿ ಪಾಕಿಸ್ತಾನಿ ಸಂಸದ ಸೈಫುಲ್ಲಾ ಅಬ್ರೋ ಅಲ್ಲ! ಮತ್ತ್ಯಾರು ?
ಕಾಶ್ಮೀರ ಭಯೋತ್ಪಾದಕ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನದ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ, ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಅವರ ಚಿತ್ರವೊಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಚಿತ್ರದಲ್ಲಿ ಅವರ ಜೊತೆ ಕಾಣಿಸಿಕೊಂಡಿರುವ ವ್ಯಕ್ತಿ ಪಾಕಿಸ್ತಾನಿ ಸಂಸದ ಸೈಫುಲ್ಲಾ ಅಬ್ರೋ ಎಂದು ಹೇಳಲಾಗುತ್ತಿದೆ.

“ದೇಶದ್ರೋಹಿ ಮತ್ತು ಟ್ಯಾಪ್ ಕಳ್ಳ ಪಾಕಿಸ್ತಾನಿ ಸೈಫುಲ್ಲಾ ಜೊತೆ ಲಂಡನ್ನಲ್ಲಿ ಸಂಭ್ರಮಾಚರಣೆ ಮಾಡುತ್ತಿದ್ದರು, ಅಖಿಲೇಶ್ ಯಾದವ್ ಅವರ ಭಾರತ ವಿರೋಧಿ ಹೇಳಿಕೆ ಮತ್ತು ಪಾಕಿಸ್ತಾನವನ್ನು ಬೆಂಬಲಿಸಿ ನೀಡಿದ ಹೇಳಿಕೆಗೆ ಬಗ್ಗೆ ಪಾಕಿಸ್ತಾನದ ಸಂಸತ್ತಿನಲ್ಲಿ, ಸಂಸದ ಸೈಫುಲ್ಲಾ ಸಂತೋಷ ವ್ಯಕ್ತಪಡಿಸಿದರು. ಪಾಕಿಸ್ತಾನದಲ್ಲಿ ಸಂತೋಷದ ಅಲೆಯಿದೆ.” ಎಂಬ ಹೇಳಿಕೆಯೊಂದಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ಗಳನ್ನು ಹಂಚಿಕೊಳ್ಳಲಾಗುತ್ತಿದೆ.
ಇದೇ ರೀತಿಯ ಹೇಳಿಕೆಗಳೊಂದಿಗೆ ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಹಂಚಿಕೊಂಡಿದ್ದು ಅವುಗಳನ್ನು ಇಲ್ಲಿ ನೋಡಬಹುದು. ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್ನಲ್ಲಿ ಸರ್ಚ್ ಮಾಡಿದಾಗ, ಆಶಿಶ್ ಸರಾಫ್ ಎಂಬ ವೆಬ್ಸೈಟ್ನಲ್ಲಿ ಪ್ರಕಟವಾದ ವರದಿ ಲಭ್ಯವಾಗಿದೆ. ಇದು ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಮತ್ತು ಇತರ ಭಾರತೀಯ ರಾಜಕಾರಣಿಗಳೊಂದಿಗೆ ಕಾಣಿಸಿಕೊಂಡ ಅದೇ ವ್ಯಕ್ತಿಯ ಹಲವಾರು ಚಿತ್ರಗಳನ್ನು ಒಳಗೊಂಡಿತ್ತು.

ಹೆಚ್ಚಿನ ತನಿಖೆಯಲ್ಲಿ ಆ ವ್ಯಕ್ತಿ FACOR ಗ್ಲೋಬಲ್ ಪ್ರೈವೇಟ್ ಲಿಮಿಟೆಡ್ನ ಪ್ರಸ್ತುತ ಅಧ್ಯಕ್ಷ ಮತ್ತು ಸಿಇಒ ಆಶಿಶ್ ಸರಾಫ್ ಎಂದು ತಿಳಿದುಬಂದಿದೆ. ಇದು ಜಾಗತಿಕ ಹೂಡಿಕೆಗಳಿಗೆ ಹಣಕಾಸು ಸಲಹಾ ಸೇವೆಗಳನ್ನು ನೀಡುವ ಅಂತರರಾಷ್ಟ್ರೀಯ ವ್ಯಾಪಾರ ಕಂಪನಿಯಾಗಿದೆ.
संसद के बजट सत्र के दौरान भी लंदन में जश्न मनाते रहे समाजवादी पार्टी के मुखिया अखिलेश यादव जी के लिए बड़ी ख़ुशख़बरी,पाकिस्तान की संसद में सांसद सैफ़ुल्लाह ने कल पाकिस्तान के पक्ष में दिए उनके बयान पर ख़ुशी का इज़हार किया,अखिलेश यादव जी के भारत विरोधी बयान पर पाकिस्तान में ख़ुशी… pic.twitter.com/Pwh0LWBbvk
— Dr Nishikant Dubey (@nishikant_dubey) April 30, 2025
ಮತ್ತಷ್ಟು ಸರ್ಚ್ ಮಾಡಿದಾಗ, ಏಪ್ರಿಲ್ 30 ರಂದು ಬಿಜೆಪಿ ಸಂಸದ ಡಾ. ನಿಶಿಕಾಂತ್ ದುಬೆ ಅವರು ಪೋಸ್ಟ್ ಮಾಡಿದ ಟ್ವೀಟ್ನಿಂದ ಲಭ್ಯವಾಗಿದೆ. ದುಬೆ ತಮ್ಮ ಟ್ವೀಟ್ನಲ್ಲಿ, ಪಾಕಿಸ್ತಾನದ ಮೇಲ್ಮನೆಯ ಪಿಟಿಐ ಸದಸ್ಯ ಪಾಕಿಸ್ತಾನಿ ಸೆನೆಟರ್ ಸೈಫುಲ್ಲಾ ಅಬ್ರೊ ಅವರನ್ನು ಉಲ್ಲೇಖಿಸಿದ್ದಾರೆ, ಅವರು ಸೆನೆಟ್ ಚರ್ಚೆಯ ಸಂದರ್ಭದಲ್ಲಿ ದೆಹಲಿಯ ಆಮ್ ಆದ್ಮಿ ಪಕ್ಷ ಮತ್ತು ಉತ್ತರ ಪ್ರದೇಶದ ಸಮಾಜವಾದಿ ಪಕ್ಷ ಸೇರಿದಂತೆ ಭಾರತದ ವಿರೋಧ ಪಕ್ಷಗಳು ಪಹಲ್ಗಾಮ್ ಭಯೋತ್ಪಾದಕ ದಾಳಿಯನ್ನು ಖಂಡಿಸುತ್ತಿವೆ ಎಂದು ಉಲ್ಲೇಖಿಸಿದ್ದಾರೆ.
ಇದರ ಜೊತೆಗೆ, ದುಬೆ ಅಖಿಲೇಶ್ ಯಾದವ್ ಅವರ ಫೋಟೋವನ್ನು ಹಂಚಿಕೊಂಡಿದ್ದಾರೆ, ಅದರಲ್ಲಿ ಯಾದವ್ ಅವರ ಭಾರತ ವಿರೋಧಿ ಹೇಳಿಕೆಗಳ ಬಗ್ಗೆ ಪಾಕಿಸ್ತಾನದಲ್ಲಿ ಸಂತೋಷದ ಅಲೆಯನ್ನು ಸೂಚಿಸುವ ಶೀರ್ಷಿಕೆಯನ್ನು ನೀಡಲಾಗಿದೆ, ಇದು ಎಸ್ಪಿ ಮುಖ್ಯಸ್ಥರು ಮುಂದಿನ ಚುನಾವಣೆಯಲ್ಲಿ ಇಸ್ಲಾಮಾಬಾದ್ನಿಂದ ಸ್ಪರ್ಧಿಸಬಹುದು ಎಂದು ಸೂಚಿಸುತ್ತದೆ.
ಈ ಟ್ವೀಟ್ ಅನ್ನು ಸಾಮಾಜಿಕ ಮಾಧ್ಯಮ ಬಳಕೆದಾರರು ವ್ಯಾಪಕವಾಗಿ ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ, ಅವರು ಚಿತ್ರದಲ್ಲಿ ಅಖಿಲೇಶ್ ಯಾದವ್ ಅವರೊಂದಿಗೆ ಕಾಣಿಸಿಕೊಂಡ ವ್ಯಕ್ತಿ ಪಾಕಿಸ್ತಾನಿ ರಾಜಕಾರಣಿ ಸೈಫುಲ್ಲಾ ಅಬ್ರೊ ಎಂದು ತಪ್ಪಾಗಿ ಹೇಳಿಕೊಂಡಿದ್ದಾರೆ.
कुछ लोगों को हिंदी पढ़ने नहीं आती ? मैंने लिखा कि पाकिस्तान की पार्लियामेंट में अपने बयानों से वाहवाही लूटने वाले समाजवादी पार्टी के मुखिया अखिलेश यादव संसद के बजट सत्र के दौरान भी लंदन में मटरगश्ती कर रहे थे,यह तस्वीर लंदन की उनकी मटरगश्ती करते हुए है।काश पाकिस्तानी मानसिकता के… https://t.co/rSwO6Mikrg
— Dr Nishikant Dubey (@nishikant_dubey) May 3, 2025
ಆದಾಗ್ಯೂ, ಮೇ 3, 2025 ರಂದು, ಡಾ. ನಿಶಿಕಾಂತ್ ದುಬೆ ಅದೇ ಟ್ವೀಟ್ಗೆ ಸಂಬಂಧಿಸಿದಂತೆ ಸ್ಪಷ್ಟೀಕರಣವನ್ನು ಪೋಸ್ಟ್ ಮಾಡಿದ್ದು, ಕೆಲವರಿಗೆ ಹಿಂದಿ ಓದಲು ಬರುವುದಿಲ್ಲವೇ? ಪಾಕಿಸ್ತಾನದ ಸಂಸತ್ತಿನಲ್ಲಿ ತಮ್ಮ ಹೇಳಿಕೆಗಳಿಂದ ಪ್ರಶಂಸೆ ಗಳಿಸಿದ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ಸಂಸತ್ತಿನ ಬಜೆಟ್ ಅಧಿವೇಶನದ ಸಮಯದಲ್ಲೂ ಲಂಡನ್ನಲ್ಲಿ ಅಲೆದಾಡುತ್ತಿದ್ದರು ಎಂದು ನಾನು ಬರೆದಿದ್ದೆ. ಇದು ಅವರು ಲಂಡನ್ನಲ್ಲಿ ಓಡಾಡುತ್ತಿರುವ ಚಿತ್ರ. ಪಾಕಿಸ್ತಾನಿ ಮನಸ್ಥಿತಿಯ ಇಂಗ್ಲಿಷರು ಹಿಂದಿಯನ್ನು ಅರ್ಥಮಾಡಿಕೊಳ್ಳಬೇಕೆಂದು ನಾನು ಬಯಸುತ್ತೇನೆ? ಎಂದು ಬರೆದಿದ್ದಾರೆ.
भाजपा सांसद @nishikant_dubey जी आप की या भाजपा की याददाश्त कमजोर है या आप एक अच्छे व्यक्ति को बदनाम करने की कोई सुपारी लिए हुए हैं?
आप जिसे कथित सैफुल्लाह बता रहे हैं वो एक शरीफ, बेहतरीन और अच्छे इंसान आशीष सर्राफ जी हैं।
आशीष सर्राफ जी की तस्वीरें तमाम भाजपा नेताओं के साथ हैं… https://t.co/PTZ0SxKGxi pic.twitter.com/xkt6vcVIIG
— Samajwadi Party Media Cell (@mediacellsp) May 1, 2025
ಸಮಾಜವಾದಿ ಪಕ್ಷದ ಅಧಿಕೃತ X ಖಾತೆಯಲ್ಲಿ ನಲ್ಲಿ ಹೇಳಿಕೆಯನ್ನು ನೀಡಿದ್ದು, ವೈರಲ್ ಚಿತ್ರದಲ್ಲಿರುವ ವ್ಯಕ್ತಿ ಸೈಫುಲ್ಲಾ ಅಬ್ರೋ ಅಲ್ಲ, ಆದರೆ ಕೈಗಾರಿಕೋದ್ಯಮಿ ಮತ್ತು ಹಣಕಾಸು ಹೂಡಿಕೆದಾರ ಆಶಿಶ್ ಸರಾಫ್ ಎಂದು ದೃಢಪಡಿಸಿದೆ.
ಒಟ್ಟಾರೆಯಾಗಿ ಹೇಳುವುದದರೆ, ಜಮ್ಮು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದನಾ ದಾಳಿ ನಡೆಸಿದ ಉಗ್ರರನ್ನು ಬೆಂಬಲಿಸುವ ಪಾಕಿಸ್ತಾನದ ಸಂಸದ ಸೈಫುಲ್ಲಾ ಅಬ್ರೋ ಜೊತೆ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಫೋಟೊಗೆ ಫೋಸ್ ನೀಡಿದ್ದಾರೆ ಎಂದು ಕೈಗಾರಿಕೋದ್ಯಮಿ ಮತ್ತು ಹಣಕಾಸು ಹೂಡಿಕೆದಾರ ಆಶಿಶ್ ಸರಾಫ್ಅವರ ಫೋಟೊವನ್ನು ಸುಳ್ಳು ಪ್ರತಿಪಾದನೆಯೊಂದಿಗೆ ತಪ್ಪಾಗಿ ಹಂಚಿಕೊಂಡಿದ್ದಾರೆ. ಹಾಗಾಗಿ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಗಾಯಕ ಸೋನು ನಿಗಮ್ ಬಿಜೆಪಿಯನ್ನು “ಮೂರ್ಖರ ಸೈನ್ಯ” ಎಂದು ಕರೆದ್ರಾ ?

