FACT CHECK | ವಿಡಿಯೋ ಗೇಮ್ ಕ್ಲಿಪ್‌ಅನ್ನು ಪಾಕಿಸ್ತಾನದ ವಾಯುಪಡೆಯ ವಿಮಾನವನ್ನು ಭಾರತ ಹೊಡೆದುರುಳಿಸಿದೆ ಎಂದು ತಪ್ಪಾಗಿ ಹಂಚಿಕೆ
ಪಾಕಿಸ್ತಾನದ ವಾಯುಪಡೆ ಪಾಕಿಸ್ತಾನದ ಬಹಾವಲ್ಪುರ್ ಬಳಿ ಭಾರತೀಯ ವಾಯುಪಡೆಯ ರಫೇಲ್ ಯುದ್ಧ ವಿಮಾನವನ್ನು ಹೊಡೆದುರುಳಿಸಿತು. ಇಲ್ಲಿಯವರೆಗೆ, ಆರು ಭಾರತೀಯ ವಾಯುಪಡೆಯ ವಿಮಾನಗಳನ್ನು ಪಾಕಿಸ್ತಾನ ಹೊಡೆದುರುಳಿಸಿದೆ ಎಂಬ ಹೇಳಿಕೆಯೊಂದಿಗೆಪಾಕಿಸ್ತಾನದ ವಾಯುಪಡೆಯು ಪಾಕಿಸ್ತಾನದ ಬಹಾವಲ್ಪುರ್ ಬಳಿ ಭಾರತೀಯ ವಾಯುಪಡೆಯ ರಫೇಲ್ ಯುದ್ಧ ವಿಮಾನವನ್ನು ಹೊಡೆದುರುಳಿಸಿತು. ಇಲ್ಲಿಯವರೆಗೆ, ಆರು ಭಾರತೀಯ ವಾಯುಪಡೆಯ ವಿಮಾನಗಳನ್ನು ಪಾಕಿಸ್ತಾನ ಹೊಡೆದುರುಳಿಸಿದೆ ಎಂದು ಹಂಚಿಕೊಳ್ಳಲಾಗುತ್ತಿದೆ.
The Pakistan Air Force engaged and downed an Indian Air Force Rafale fighter jet near Bahawalpur, Pakistan. To date, six Indian Air Force aircraft have been downed by Pakistan. pic.twitter.com/f73sBlR5B5
— chand.sitara چاند۔ستارہ ☪️ (@chandsitara12) May 7, 2025
ಮತ್ತೊಂದು ಫೇಸ್‌ಬುಕ್ ಪೋಸ್ಟ್‌ನಲ್ಲಿ ಇದೇ ವಿಡಿಯೋವನ್ನು ಹಂಚಿಕೊಂಡು, ‘‘ಪಾಕಿಸ್ತಾನದ ಫೈಟರ್ ಜೆಟ್ ಗಳನ್ನು ಗಾಳಿಯಲ್ಲಿಯೇ ಹೊಡೆದು ಉರುಳಿಸಿದ ಭಾರತೀಯ ಸೇನೆ’’ ಎಂದು ಬರೆದುಕೊಂಡಿದ್ದಾರೆ.

ಒಂದು ಪೋಸ್ಟ್‌ನಲ್ಲಿ ಭಾರತದ ಪರವಾಗಿ ಹೇಳಿಕೆಯನ್ನು ಹಂಚಿಕೊಂಡಿದ್ದರೆ ಮತ್ತೊಂದು ಪೋಸ್ಟ್‌ನಲ್ಲಿ ಪಾಕಿಸ್ತಾನದ ಪರವಾಗಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್‌ನಲ್ಲಿ ಮಾಡಲಾಗುತ್ತಿರುವ ಪ್ರತಿಪಾದನೆಯನ್ನು ಪರಿಶೀಲಿಸಲು ವಿಡಿಯೋದ ಕೀ ಫ್ರೇಮ್‌ಗಳನ್ನು ತೆಗೆದು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, 19 ಏಪ್ರಿಲ್ 2025 ರಂದು, Coffin Gaming ಎಂಬ ಫೇಸ್‌ಬುಕ್ ಖಾತೆಯಲ್ಲಿ ಇದೇ ವೈರಲ್ ವಿಡಿಯೋವನ್ನು ಹಂಚಿಕೊಂಡಿರುವುದು ಲಭ್ಯವಾಗಿದೆ.
Coffin Gaming ಒಂದು ಗೇಮಿಗೆ ಸಂಬಂಧಿಸಿದ ವೀಡಿಯೊವನ್ನು ಹಂಚಿಕೊಳ್ಳುವ ಪೇಜ್ ಆಗಿದೆ. ಮಿಲಿಟರಿಗೆ ಸಂಬಂಧಿಸಿದ ಅನೇಕ ವೀಡಿಯೊಗಳಿವೆ. ಈ ಪೇಜ್ನ ಬಯೋದಲ್ಲಿ ಕೂಡ ಗೇಮಿಂಗ್ ವೀಡಿಯೊ ಕ್ರಿಯೇಟರ್ ಎಂದು ನಮೋದಿಸಲಾಗಿದೆ. ಅಲ್ಲದೆ ವೈರಲ್ ವೀಡಿಯೊವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಇದು ರಿಯಾಲಿಟಿಗೆ ದೂರವಾದಂತಿದೆ. ಹೀಗಾಗಿ ಇದು ಗೇಮಿಂಗ್ ವೀಡಿಯೊ ಎಂಬುದು ಸ್ಪಷ್ಟವಾಗಿದೆ.
ಈ ಮಾಹಿತಿಯ ಆಧಾರದ ಮೇಲೆ, ಪಾಕಿಸ್ತಾನದ ಫೈಟರ್ ಜೆಟ್ಗಳನ್ನು ಭಾರತೀಯ ಸೇನೆ ಗಾಳಿಯಲ್ಲಿ ಹೊಡೆದುರುಳಿಸಿದೆ ಎಂದು ವೈರಲ್ ಆಗುತ್ತಿರುವ ವೀಡಿಯೊ ಸುಳ್ಳು ಮತ್ತು ಇದು ಗೇಮಿಂಗ್ ವೀಡಿಯೊ ಎಂದು ನಾವು ಖಚಿತವಾಗಿ ಹೇಳುತ್ತೇವೆ.
ಒಟ್ಟಾರೆಯಾಗಿ ಹೇಳುವುದಾದರೆ, ಮಿಲಿಟರಿಗೆ ಸಂಬಂಧಿಸಿದ ಗೇಮಿಂಗ್ ವಿಡಿಯೋವನ್ನು, ಪಾಕಿಸ್ತಾನದ ಫೈಟರ್ ಜೆಟ್ಗಳನ್ನು ಭಾರತೀಯ ಸೇನೆ ಗಾಳಿಯಲ್ಲಿ ಹೊಡೆದುರುಳಿಸಿದೆ ಎಂದು ಮತ್ತು ಪಾಕಿಸ್ತಾನ ಭಾರತೀಯ ವಾಯುಪಡೆಯ ವಿಮಾನಗಳನ್ನು ಹೊಡೆದುರುಳಿಸಿದೆ ಎಂದು ಸುಳ್ಳು ಪ್ರತಿಪದನೆಯಪಂದಿಗೆ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಪರೀಕ್ಷಿಸುವಾಗಲೇ ಸ್ಪೋಟಗೊಂಡ ಕ್ಷಿಪಣಿ ! ಇದು ಪಾಕಿಸ್ತಾನದ ಸೈನ್ಯದ್ದು ಎಂಬುದು ನಿಜವೇ?

