FACT CHECK | ರಾಹುಲ್ ಗಾಂಧಿ ನಡೆಸಿದ ಸಂವಾದದಲ್ಲಿ ವ್ಯಕ್ತಿಯೊಬ್ಬ ರೈಲ್ವೆ ಪೋರ್ಟರ್‌ನಂತೆ ನಟಿಸಿದ್ದು ನಿಜವೇ?
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೆಲವರೊಂದಿಗೆ ಕುಳಿತು ಮಾತನಾಡುತ್ತಿರುವ ಕೊಲಾಜ್ ಮಾಡಲಾದ ಎರಡು ಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿವೆ. ಒಂದು ಚಿತ್ರದಲ್ಲಿ ರಾಹುಲ್ ಗಾಂಧಿ ಕೆಲವು ವಿದ್ಯಾರ್ಥಿಗಳೊಂದಿಗೆ ಕುಳಿತಿರುವುದು ಕಂಡುಬಂದರೆ, ಇನ್ನೊಂದರಲ್ಲಿ, ಅವರು ಕೆಲವು ರೈಲ್ವೆ ಪೋರ್ಟರ್‌ಗಳೊಂದಿಗೆ ಕುಳಿತಿರುವುದು ಕಂಡುಬಂದಿದೆ. ಈ ಚಿತ್ರಗಳ ಜೊತೆಗಿನ ಹೇಳಿಕೆಯೆಂದರೆ, ಒಂದೇ ವ್ಯಕ್ತಿ ಗಾಂಧಿಯವರ ಪಕ್ಕದಲ್ಲಿ ಡಿಯು ವಿದ್ಯಾರ್ಥಿ ಮತ್ತು ರೈಲ್ವೆ ಪೋರ್ಟರ್ ಆಗಿ ನಟಿಸುತ್ತಿದ್ದಾರೆ ಎಂದು ಪೋಸ್ಟ್‌ಅನ್ನು ಹಂಚಿಕೊಳ್ಳಲಾಗುತ್ತಿದೆ.

ಮೇ 27, 2025 ರಂದು ಫೇಸ್‌ಬುಕ್ ಬಳಕೆದಾರರೊಬ್ಬರು ಈ ಕೊಲಾಜ್ ಅನ್ನು ಹಂಚಿಕೊಂಡಿದ್ದು, “ನಮ್ಮ ಪಪ್ಪು ಕೂಡ ಒಂದು ಪ್ರಾಚೀನ ತುಣುಕು… ಅವರ ಶಿಷ್ಯರು ಡಿಯುನ ಕೂಲಿಗಳು ಮತ್ತು ವಿದ್ಯಾರ್ಥಿಗಳಾಗುತ್ತಾರೆ…” ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ.
ರಾಹುಲ್ ಅವರು ದೆಹಲಿ ವಿವಿ ವಿದ್ಯಾರ್ಥಿಗಳು ಮತ್ತು ರೈಲ್ವೆ ಕೂಲಿಗಳೊಂದಿಗೆ ಸಂವಾದ ನಡೆಸುವ ಚಿತ್ರಗಳು ಅವಾಗಿದ್ದು, ಒಬ್ಬ ವ್ಯಕ್ತಿ ಎರಡೂ ಚಿತ್ರಗಳಲ್ಲಿದ್ದು, ವಿದ್ಯಾರ್ಥಿಯಾಗಿ ಮತ್ತು ಕೂಲಿಯಾಗಿ ಸಂವಾದದಲ್ಲಿ ಭಾಗವಹಿಸಿದ್ದಾರೆ ಎಂದು ಚಿತ್ರದೊಂದಿಗೆ ಹಾಕಲಾಗಿರುವ ಪೋಸ್ಟ್‌ನಲ್ಲಿ ಪ್ರತಿಪಾದಿಸಲಾಗುತ್ತಿದೆ. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುತ್ತಿರುವಂತೆ ರಾಹುಲ್ ಗಾಂಧಿಯವರೊಂದಿಗೆ ಕುಳಿತು ಸಂವಾದದಲ್ಲಿ ಭಾಗವಹಿಸಿರುವ ಗುರುತು ಮಾಡಲಾಗಿರುವ ಇಬ್ಬರು ವ್ಯಕ್ತಿಗಳು ಬೇರೆ ಬೇರೆಯೇ ಅಥವಾ ಒಬ್ಬರೇ ಎಂದು ಪರಿಶೀಲಿಸಲು, ಗೂಗಲ್ ಸರ್ಚ್ ಮಾಡಿದಾಗ, ಮೇ 27, 2025 ರಂದು X ನಲ್ಲಿ ಭಾರತೀಯ ಯುವ ಕಾಂಗ್ರೆಸ್ ಹಂಚಿಕೊಂಡಿದೆ ಎಂದು ನಾವು ಕಂಡುಕೊಂಡಿದ್ದೇವೆ. ಇದರಲ್ಲಿ ಗಾಂಧಿ ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಸದಸ್ಯರನ್ನು ಭೇಟಿಯಾಗುತ್ತಿರುವುದನ್ನು ತೋರಿಸಲಾಗಿದೆ.
ये बीजेपी की भोकलाहट और डर आप सबके सामने है , इन्हे डर है की अगर हर पिछड़े वर्ग का छात्र @RahulGandhi जी की सामाजिक न्याय की लड़ाई में शामिल होगा तो इनकी संघी बनने की दुकानों पे ताले लग जाएँगे !
सामाजिक न्याय जिंदाबाद @DrJaihind https://t.co/bzCKy5cdhB
— Lokesh Choudhary (@Lokeshnsui9) May 28, 2025
ಅದು ಮೇ 22ರಂದು ದೆಹಲಿ ವಿವಿಯಲ್ಲಿ ವಿದ್ಯಾರ್ಥಿಗಳೊಂದಿಗೆ ನಡೆಸಿದ ಸಂವಾದದ ಚಿತ್ರ. ಪೋಸ್ಟ್‌ನಲ್ಲಿ ಹೇಳಿದಂತೆ ಎರಡೂ ಚಿತ್ರಗಳಲ್ಲಿ ಒಬ್ಬರೇ ಇದ್ದಾರೆ ಎಂದು ಹೇಳಲಾದ ವ್ಯಕ್ತಿಯ ಹೆಸರು ಲೋಕೇಶ್ ಚೌಧರಿ. ದೆಹಲಿ ವಿವಿಯ ವಿದ್ಯಾರ್ಥಿ ಒಕ್ಕೂಟದ ಜಂಟಿ ಕಾರ್ಯದರ್ಶಿಯಾಗಿದ್ದಾರೆ. ಅಲ್ಲದೆ ಕಾಂಗ್ರೆಸ್‌ನ ವಿದ್ಯಾರ್ಥಿ ಘಟಕ ಎನ್‌ಎಸ್‌ಯುಐನ ಸದಸ್ಯರೂ ಆಗಿದ್ದಾರೆ. ವೈರಲ್ ಚಿತ್ರದ ಬಗ್ಗೆ ಪ್ರತಿಕ್ರಿಯಿಸಿರುವ ಅವರು ಪೋಸ್ಟ್‌ನಲ್ಲಿರುವ ಮಾಹಿತಿಯನ್ನು ತಳ್ಳಿ ಹಾಕಿದ್ದಾರೆ.
अक्सर सबसे अंधकार भरे समय में ही इंसानियत की रोशनी सबसे ज़्यादा चमकती है।
नई दिल्ली रेलवे स्टेशन पर भगदड़ के दौरान कुली भाइयों ने इंसानियत की मिसाल पेश करते हुए कई यात्रियों की जान बचाई थी। इसके लिए मैंने देशवासियों की ओर से आज उनका धन्यवाद किया।
लेकिन ऐसे हादसों से सीख लेना… pic.twitter.com/w4DHfrGEdH
— Rahul Gandhi (@RahulGandhi) March 1, 2025
ಇನ್ನು ಎರಡನೇ ವೈರಲ್ ಚಿತ್ರವನ್ನು ಗೂಗಲ್ ರಿವರ್ಸ್ ಇಮೇಜಸ್ ಮೂಲಕ ಸರ್ಚ್ ಮಾಡಿದಾಗ, ರಾಹುಲ್ ಗಾಂಧಿ ಅವರು ಈ ವರ್ಷದ ಮಾರ್ಚ್‌ನಲ್ಲಿ ನವದೆಹಲಿ ರೈಲು ನಿಲ್ದಾಣದಲ್ಲಿ ಕೂಲಿಗಳನ್ನು ಭೇಟಿ ಮಾಡಿದಾಗಿನ ಚಿತ್ರ ಎಂಬುದು ತಿಳಿದುಬಂದಿದೆ. ಫೆ.15ರಂದು ನಡೆದಿದ್ದ ಕಾಲ್ತುಳಿತದ ವೇಳೆ, ಪರಿಹಾರ ಕಾರ್ಯಾಚರಣೆಗೆ ನೆರವಾದ ಕೂಲಿಗಳನ್ನು ಅವರು ಭೇಟಿ ಮಾಡಿದ್ದರು. ಇದರ ವಿಡಿಯೊವನ್ನು ರಾಹುಲ್ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಮಾರ್ಚ್ 1 ರಂದು ಪೋಸ್ಟ್ ಮಾಡಿದ್ದರು.

ಎರಡೂ ಫೋಟೊಗಳನ್ನು ಕೂಲಂಕಷವಾಗಿ ಪರಿಶೀಲಿಸಿದಾಗ ಚೌಧರಿ ಮತ್ತು ಕೂಲಿಯಾಗಿ ಕೆಲಸ ನಿರ್ವಹಿಸುವ ವ್ಯಕ್ತಿ ಬೇರೆ ಬೇರೆ ಎಂಬುದು ದೃಢಪಟ್ಟಿದೆ. ಇದನ್ನು ಹಲವು ಫ್ಯಾಕ್ಟ್‌ಚೆಕ್ ವೆಬ್‌ಸೈಟ್‌ಗಳು ಪರಿಶೀಲನೆ ನಡೆಸಿದ್ದು ವೈರಲ್ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ದಾರಿ ತಪ್ಪಿಸುವಂತಿದೆ ಎಂಬುದು ಸ್ಪಷ್ಟವಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ರಾಹುಲ್ ಗಾಂಧಿ ನಡೆಸಿದ ಎರಡು ಸಂವಾದಗಳಲ್ಲಿ ಇರುವುದು ಒಬ್ಬನೇ ವ್ಯಕ್ತಿ ಎಂಬುದು ಸುಳ್ಳು. ಒಬ್ಬರು ರೈಲ್ವೆ ಪೋರ್ಟ್‌ರ್‌ನಲ್ಲಿ ಕೆಲಸ ಮಾಡುವ ಕೇದಾರ್ ಲಾಲ್ ಮತ್ತು ಇನ್ನೊಬ್ಬರು ದೆಹಲಿ ವಿವಿಯ ವಿದ್ಯಾರ್ಥಿ ಒಕ್ಕೂಟದ ಜಂಟಿ ಕಾರ್ಯದರ್ಶಿ ಲೋಕೇಶ್ ಚೌಧರಿ, ಇಬ್ಬರು ಬೇರೆ ಬೇರೆ ವ್ಯಕ್ತಿಗಳು ಎಂಬುದು ಸ್ಪಷ್ಟವಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ರಷ್ಯಾ ಉಕ್ರೇನ್ ಮೇಲೆ ದಾಳಿ ನಡೆಸಿದೆ ಎಂದು ಸಂಬಂಧವಿಲ್ಲದ ವಿಡಿಯೋ ಹಂಚಿಕೆ

