FACT CHECK | ಏರ್ ಇಂಡಿಯಾ ದುರಂತಕ್ಕೂ ಮುನ್ನ ವಿಮಾನದಲ್ಲಿ “ಅಲ್ಲಾ ಹು ಅಕ್ಬರ್‌” ಎಂದು ಪ್ರಾರ್ಥಿಸಲಾಗಿದೆ ಎಂಬ ವಿಡಿಯೋದ ಅಸಲೀಯತ್ತೇನು

ಅಹಮದಾಬಾದ್‌ನಲ್ಲಿ ನಡೆದ ಏರ್‌ ಇಂಡಿಯಾ ವಿಮಾನ ದುರಂತದ ಅಂತಿಮ ಕ್ಷಣದಲ್ಲಿ ಪ್ರಯಾಣಿಕರು “ಅಲ್ಲಾಹು ಅಕ್ಬರ್‌” ಎಂದು ಘೋಷಣೆ ಕೂಗಿದ್ದಾರೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋವೊಂದನ್ನು  ಹಂಚಿಕೊಳ್ಳಲಾಗುತ್ತಿದೆ. ಇದು ದುರಂತಕ್ಕೆ ಕೆಲವೇ ಕ್ಷಣಗಳ ಮೊದಲಿನ ದೃಶ್ಯವೆಂದು ಹೇಳಲಾಗುತ್ತಿದೆ. 

ಸಾಮಾಜಿಕ ಮಾಧ್ಯಮದ ಕೆಲವು ಬಳಕೆದಾರರು ಈ ವಿಡಿಯೋವನ್ನು ಕೋಮು ಹಿನ್ನಲೆಯಲ್ಲಿ ಹಂಚಿಕೊಳ್ಳುತ್ತಿದ್ದು, ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್‌ :

ಅಹಮದಾಬಾದ್‌ನಲ್ಲಿ ನಡೆದ ಏರ್‌ ಇಂಡಿಯಾ ವಿಮಾನ ದುರಂತದ ಅಂತಿಮ ಕ್ಷಣದಲ್ಲಿ ಪ್ರಯಾಣಿಕರು “ಅಲ್ಲಾಹು ಅಕ್ಬರ್‌” ಎಂದು ಕೂಗಿದ್ದಾರೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್‌ ವಡಿಯೋ ಕುರಿತು ಪರಿಶೀಲನೆ ವಿಡಿಯೋದ ವಿವಿಧ ಕೀ ಫ್ರೇಮ್‌ಗಳನ್ನು ಬಳಸಿಕೊಂಡು ಗೂಗಲ್‌ ರಿವರ್ಸ್‌ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ 2024ರ ಸೆಪ್ಟಂಬರ್‌ನಲ್ಲಿ ಪ್ರಕಟಗೊಂಡ ಹಲವು ವರದಿಗಳು ಲಭ್ಯವಾಗಿವೆ.

ಈ ವರದಿಗಳ ಪ್ರಕಾರ , ಈ ಘಟನೆ 2024 ರ ಸೆಪ್ಟೆಂಬರ್ 23 ರಂದು ನಡೆದಿದ್ದು, ಅಲ್ಜೀರಿಯಾದಿಂದ (ಅಲ್ಜೀರ್ಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ) ಟರ್ಕಿಯ ಇಸ್ತಾನ್‌ಬುಲ್‌ಗೆ ಪ್ರಯಾಣಿಸುತ್ತಿದ್ದ ಏರ್ ಅಲ್ಗೇರಿ ವಿಮಾನದೊಳಗಿನ ಪ್ರಯಾಣಿಕರು ವಿಮಾನದಲ್ಲಿ ತಾಂತ್ರಿಕ ದೋಷದ ಬಗ್ಗೆ ತಿಳಿದ ನಂತರ ಅಲ್ಲಾ ಹು ಅಕ್ಬರ್ ಎಂದು ಜಪಿಸುತ್ತಿರುವುದನ್ನು ದೃಶ್ಯಗಳು ತೋರಿಸುತ್ತವೆ ಎಂಬುದು ತಿಳಿದು ಬಂದಿದೆ.

ಎಕೋರೌಕನ್‌ಲೈನ್‌ನ ಸುದ್ದಿ ವರದಿಯ ಪ್ರಕಾರ ‘ಇನ್ಫೋ ಟ್ರಾಫಿಕ್ ಅಲ್ಜೀರಿ’ ಎಂಬ ಪುಟವು ಪೋಸ್ಟ್ ಮಾಡಿದ ಫೇಸ್‌ಬುಕ್ ವೀಡಿಯೊವನ್ನು ಒಳಗೊಂಡಿದೆ , ಇದು ವೈರಲ್ ವೀಡಿಯೊದಲ್ಲಿ ಕಂಡುಬರುವ ದೃಶ್ಯಗಳನ್ನು ಒಳಗೊಂಡಿದೆ. ಅದರ ವಿವರಣೆಯ ಪ್ರಕಾರ, “ಅಲ್ಜೀರ್ಸ್‌ನಿಂದ ಇಸ್ತಾನ್‌ಬುಲ್‌ಗೆ ಹೋಗುವ AH3018 ವಿಮಾನದೊಳಗಿನ ದೃಶ್ಯಗಳು ತಾಂತ್ರಿಕ ದೋಷದ ನಂತರ ತುರ್ತು ಲ್ಯಾಂಡಿಂಗ್ ಮಾಡಿದ ದೃಶ್ಯಗಳು” ಎಂದು ಉಲ್ಲೇಖಿಸಿರುವುದು ಕಂಡು ಬಂದಿದೆ.

 ಸೆಪ್ಟೆಂಬರ್ 25, 2024 ರಂದು ಅಲ್ ಜಜೀರಾ ಪ್ರಕಟಿಸಿದ ಸುದ್ದಿ ವರದಿಯಲ್ಲಿ ಒಂದೇ ವಿಮಾನದ ವಿಭಿನ್ನ ದೃಶ್ಯಗಳನ್ನು ಒಳಗೊಂಡಿದೆ, ಇದರಲ್ಲಿ ನಾವು ತೊಂದರೆಗೀಡಾದ ಪ್ರಯಾಣಿಕರು ಅಲ್ಲಾಹು ಅಕ್ಬರ್ ಎಂದು ಜಪಿಸುವುದನ್ನು ನೋಡಬಹುದು. ಟೇಕ್ ಆಫ್ ಆದ ಒಂದು ಗಂಟೆಯ ನಂತರ ತಾಂತ್ರಿಕ ದೋಷವನ್ನು ಗಮನಿಸಿದ ನಂತರ, ವಿಮಾನದ ಪೈಲಟ್ ಅಲ್ಜಿಯರ್ಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ/ಹೌರಿ ಬೌಮೆಡಿಯೆನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹಿಂತಿರುಗಲು ನಿರ್ಧರಿಸಿದರು. ಈ ಘಟನೆಯ ಕುರಿತು ವೀಡಿಯೊ ವರದಿಯನ್ನು ಮೊರಾಕೊ ವರ್ಲ್ಡ್ ನ್ಯೂಸ್ ಪ್ರಕಟಿಸಿದ್ದು, ಅದೇ ವಿವರಗಳನ್ನು ಉಲ್ಲೇಖಿಸಿದೆ.

 ಒಟ್ಟಾರೆಯಾಗಿ ಹೇಳುವುದಾದರೆ, ಏರ್ ಅಲ್ಗೇರಿ ವಿಮಾನದೊಳಗೆ ಪ್ರಯಾಣಿಕರು ಅಲ್ಲಾಹು ಹು ಅಕ್ಬರ್ ಎಂದು ಜಪಿಸುತ್ತಿರುವ ಹಳೆಯ ವಿಡಿಯೋವನ್ನು ಜೂನ್ 12, 2025 ರಂದು ಅಹಮದಾಬಾದ್‌ನಲ್ಲಿ ನಡೆದ ಏರ್ ಇಂಡಿಯಾ ವಿಮಾನ ಅಪಘಾತಕ್ಕೆ ಲಿಂಕ್ ಮಾಡಿ ತಪ್ಪಾಗಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಅಹಮದಾಬಾದ್‌ನ ಏರ್ ಇಂಡಿಯಾ ವಿಮಾನ ದುರಂತದ ವಿಡಿಯೋ ಎಂದು ಸಂಬಂಧವಿಲ್ಲದ ವಿಡಿಯೋ ಹಂಚಿಕೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights