FACT CHECK | ಅಮೆರಿಕ ಇರಾನ್ ಪರಮಾಣು ತಾಣಗಳ ಮೇಲೆ ನಡೆಸಿದ ದಾಳಿಯ ದೃಶ್ಯಗಳು ಎಂದು ಸಂಬಂಧವಿಲ್ಲದ ಹಳೆಯ ವಿಡಿಯೋ ಹಂಚಿಕೆ

ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧಕ್ಕೆ ಅಮೆರಿಕ ಎಂಟ್ರಿ ಕೊಟ್ಟಿದ್ದು, ತಡರಾತ್ರಿ ಇರಾನ್​ನ ಮೂರು ಪರಮಾಣು ತಾಣಗಳಾದ ಫೋರ್ಡೋ, ನಟಾಂಜ್, ಎಸ್ಪಹಾನ್ ಮೇಲೆ ಅಮೆರಿಕ ದಾಳಿ ಮಾಡಿದೆ. ಈ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾಹಿತಿ ನೀಡಿದ್ದಾರೆ. ಇತ್ತ ಇರಾನ್​ ‘ನೀವು ಪ್ರಾರಂಭಿಸಿದ್ದೀರಿ, ಅದನ್ನು ನಾವು ಕೊನೆಗೊಳಿಸುತ್ತೇವೆ’ ಎಂದು ಅಮೆರಿಕಕ್ಕೆ ಎಚ್ಚರಿಕೆ ಸಂದೇಶ ರವಾನೆ ಮಾಡಿದೆ.

ಈ ಮಧ್ಯ, ಸಾಮಾಜಿಕ ಮಾಧ್ಯಮದಲ್ಲಿ ಬೃಹತ್ ಸ್ಪೋಟದ ವಿಡಿಯೋವೊಂದು ವೈರಲ್ ಆಗುತ್ತಿದ್ದು, ಕಾಣಿಸಿಕೊಂಡಿದ್ದು, ಇದು ಫೋರ್ಡೋ ಪರಮಾಣು ತಾಣದ ಮೇಲಿನ ಅಮೆರಿಕ ನಡೆಸಿದ ದಾಳಿಯ ದೃಶ್ಯಗಳು ಎಂದು ಪ್ರತಿಪಾದಿಸಿ ಹಂಚಿಕೊಳ್ಳಲಾಗುತ್ತಿದೆ.

ಸುನಂದಾ ರಾಯ್ ಎಂಬ ಎಕ್ಸ್‌ ಬಳಕೆದಾರರೊಬ್ಬರು ಪೋಸ್ಟ್‌ಅನ್ನು ಹಂಚಿಕೊಂಡಿದ್ದು “ಇರಾನ್‌ನ ಫೋರ್ಡೋ ಪರಮಾಣು ತಾಣದಲ್ಲಿ ಬೃಹತ್ ಸ್ಫೋಟ. ಅದ್ಭುತ ಜಾಬ್, ಯುಎಸ್” ಎಂಬ ಶೀರ್ಷಿಕೆಯೊಂದಿಗೆ ವೀಡಿಯೊವನ್ನು ಹಂಚಿಕೊಂಡಿದ್ದಾರೆ. (ಆರ್ಕೈವ್)

ಇದೇ ರೀತಿಯ ಪ್ರತಿಪಾದನೆಯೊಂದಿಗೆ ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಪೋಸ್ಟ್‌ಅನ್ನು ಹಂಚಿಕೊಂಡಿದ್ದು, ಈ ವಿಡಿಯೋ ದೃಶ್ಯಗಳು ನೈಜವಗಿವೆಯೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಂಆಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಅಮೆರಿಕ ನಡೆಸಿದ ದಾಳಿಯ ದೃಶ್ಯಗಳು ಎಂದು ಪ್ರತಿಪಾದಿಸಿ ಹಂಚಿಕೊಂಡ ವಿಡಿಯೋದ ಕೀ ಫ್ರೇಮ್‌ಗಳನ್ನು ತೆಗೆದು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಡಿಸೆಂಬರ್ 2024 ರಲ್ಲಿ X ಹ್ಯಾಂಡಲ್, ಮಿಡಲ್ ಈಸ್ಟ್ ಮಾನಿಟರ್‌ನಿಂದ ಪೋಸ್ಟ್ ಮಾಡಿದ ಅದೇ ರೀತಿಯ ದೃಶ್ಯಗಳು ಲಭ್ಯವಾಗಿವೆ.

ಈ ವಿಡಿಯೋ ಪೋಸ್ಟ್‌ನಲ್ಲಿ ಹಂಚಿಕೊಂಡ ಮಾಹಿತಿಯಂತೆ ಸಿರಿಯಾದ ಬಂದರು ನಗರವಾದ ಟಾರ್ಟಸ್‌ನಲ್ಲಿ ಇಸ್ರೇಲಿ ಬಾಂಬ್ ದಾಳಿ ನಡೆಸಿದೆ ಎಂದು ಬರೆಯಲಾಗಿದೆ.

ಸಿರಿಯಾದ ಬಂದರು ನಗರ ಟಾರ್ಟಸ್ ಮೇಲೆ ಇಸ್ರೇಲಿ ಪಡೆಗಳು ಭಾರೀ ಬಾಂಬ್ ದಾಳಿ ಇಸ್ರೇಲಿ ಹಲವಾರು ದಾಳಿಗಳ ನಂತರ ಸಿರಿಯಾದ ಬಂದರು ನಗರ ಟಾರ್ಟಸ್‌ನಲ್ಲಿ ಜೋರಾಗಿ ಸ್ಫೋಟಗಳು ಕೇಳಿಬಂದವು. ಬಶರ್ ಅಲ್-ಅಸ್ಸಾದ್ ಆಡಳಿತದ ಪತನದ ನಂತರ, ಇಸ್ರೇಲ್ ಸಿರಿಯಾದಾದ್ಯಂತ ನೂರಾರು ವಾಯುದಾಳಿಗಳನ್ನು ನಡೆಸುತ್ತಿದೆ, ಹೆಚ್ಚಿನ ಸಿರಿಯನ್ ಪ್ರದೇಶದ ನಿಯಂತ್ರಣವನ್ನು ವಶಪಡಿಸಿಕೊಂಡಿದೆ ಮತ್ತು ಆಕ್ರಮಿತ ಸಿರಿಯನ್ ಗೋಲನ್ ಹೈಟ್ಸ್‌ನಲ್ಲಿ ಹೆಚ್ಚಿನ ಇಸ್ರೇಲಿಗಳನ್ನು ನೆಲೆಸಲು ಯೋಜನೆಗಳನ್ನು ಘೋಷಿಸಿದೆ ಎಂದು ತಿಳಿಸಿದೆ.

ಮತ್ತೊಂದು ಎಕ್ಸ್ ಹ್ಯಾಂಡಲ್, OSINT ಡಿಫೆಂಡರ್, ಅದೇ ದಿನಾಂಕದಂದು ವೀಡಿಯೊವನ್ನು ಪೋಸ್ಟ್ ಮಾಡಿದ್ದು, ಇಸ್ರೇಲಿ ಯುದ್ಧಸಾಮಗ್ರಿ ಡಿಪೋದ ಮೇಲೆ ಇಸ್ರೇಲಿ ದಾಳಿಯ ನಂತರ ಟಾರ್ಟಸ್ ನಗರದ ಬಳಿ ವಾಯುವ್ಯ ಸಿರಿಯಾದಲ್ಲಿ ಭಾರಿ ಸ್ಫೋಟ ಕಂಡುಬಂದಿದೆ ಎಂದು ಹೇಳಿದೆ.

ಡಿಸೆಂಬರ್ 2024 ರಲ್ಲಿ NDTV, ಟೈಮ್ಸ್ ಆಫ್ ಇಂಡಿಯಾ ಮತ್ತು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದ ವಿಡಿಯೋಗಳು ಲಭ್ಯವಾಗಿವೆ. ಸಿರಿಯನ್ ವೀಕ್ಷಣಾಲಯ ಫಾರ್ ಹ್ಯೂಮನ್ ರೈಟ್ಸ್ (SOHR) ಅನ್ನು ಉಲ್ಲೇಖಿಸಿ ಈ ಮಾಧ್ಯಮಗಳ ಪ್ರಕಾರ, ಅಸ್ಸಾದ್ ಆಡಳಿತದ ಪತನದ ನಂತರ ಇಸ್ರೇಲ್ ಸಿರಿಯಾದಲ್ಲಿ ದಾಳಿ ನಡೆಸಿತು. ಡಿಸೆಂಬರ್ 15 ರಂದು, ಇದು 2012 ರ ನಂತರ ಈ ಪ್ರದೇಶದಲ್ಲಿ ಅತ್ಯಂತ ಹಿಂಸಾತ್ಮಕ ದಾಳಿಯನ್ನು ನಡೆಸಿದೆ ಎಂದು ವರದಿಯಾಗಿದೆ. ಆ ಸಮಯದಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ವೀಡಿಯೊದಲ್ಲಿ, ಟಾರ್ಟಸ್ ನಗರದ ಬಳಿ ವಾಯುವ್ಯ ಸಿರಿಯಾದಲ್ಲಿ ಇಸ್ರೇಲಿ ಬಾಂಬ್ ಸ್ಫೋಟಿಸುತ್ತಿರುವುದನ್ನು ತೋರಿಸಲಾಗಿದೆ, ಇದು ಬೃಹತ್  ಬೆಂಕಿಯ ಉಂಡೆಯಂತೆ ಕಂಡುಬಂದಿದೆ ಎಂದು ವರದಿಗಳು ತಿಳಿಸಿವೆ. ಸ್ಫೋಟವು ಎಷ್ಟು ಪ್ರಬಲವಾಗಿತ್ತೆಂದರೆ ಅದು ಭೂಕಂಪ ಮಾಪಕದಲ್ಲಿ 3.1 ತೀವ್ರತೆಯ ದಾಖಲಾಗಿದೆ ಎಂದು ಹಲವು ಮೂಲಗಳು ವರದಿಗಳಲ್ಲಿ ಉಲ್ಲೇಖಿಸಿವೆ.

ಡಿಸೆಂಬರ್ 15, 2024 ರಂದು ಸಿರಿಯನ್ ವೀಕ್ಷಣಾಲಯ ಫಾರ್ ಹ್ಯೂಮನ್ ರೈಟ್ಸ್ ಪ್ರಕಟಿಸಿದ ವರದಿಯ ಪ್ರಕಾರ, 2012 ರಲ್ಲಿ ಇಸ್ರೇಲಿ ಕಾರ್ಯಾಚರಣೆಗಳು ಪ್ರಾರಂಭವಾದಾಗಿನಿಂದ ಇಸ್ರೇಲಿ ಫೈಟರ್ ಜೆಟ್‌ಗಳು ಸಿರಿಯಾದ ಕರಾವಳಿ ಪ್ರದೇಶದ ಮೇಲೆ ಅತ್ಯಂತ ತೀವ್ರವಾದ ವೈಮಾನಿಕ ದಾಳಿಗಳನ್ನು ನಡೆಸಿದವು. ಸತತ ವೈಮಾನಿಕ ದಾಳಿಗಳು ಮತ್ತು ಗೋದಾಮುಗಳಲ್ಲಿ ಸಂಗ್ರಹಿಸಲಾದ ಕ್ಷಿಪಣಿಗಳ ಸ್ಫೋಟದಿಂದಾಗಿ ಟಾರ್ಟಸ್‌ನಾದ್ಯಂತ ಅತ್ಯಂತ ದೊಡ್ಡ ಸ್ಫೋಟಗಳು ಕೇಳಿಬಂದವು ಎಂದು ಹೇಳಿವೆ.

ಇನ್ನು ಇರಾನ್ ಮೇಲೆ ಅಮೆರಿಕ ನಡೆಸಿರುವ ದಾಳಿಯು ನಿಜವಾಗಿದ್ದರೂ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ವಿಡಿಯೋ ದಾಳಿಯ ಘಟನೆಗೆ ಸಂಬಂಧಿಸಿಲ್ಲ ಎಂಬುದು ಸ್ಪಷ್ಟವಾಗಿದೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪರಮಾಣು ತಾಣವು ಸಂಪೂರ್ಣವಾಗಿ ನಾಶವಾಗಿದೆ ಎಂದು ಹೇಳಿಕೊಂಡರೂ, ಇರಾನ್ ಹಾನಿಯ ಬಗ್ಗೆ ಅಧಿಕೃತವಾಗಿ ಬಹಿರಂಗಪಡಿಸಿಲ್ಲ. ಆದಾಗ್ಯೂ, ತಾಣವು ಹೊಡೆದಿದೆ ಎಂದು ಅದು ದೃಢಪಡಿಸಿದೆ. ಅಮೆರಿಕದ ದಾಳಿಯ ನಂತರ ಫೋರ್ಡೋ ಬಳಿ ವಾಸಿಸುವ ನಿವಾಸಿಗಳಿಗೆ ‘ದೊಡ್ಡ ಸ್ಫೋಟದ ಯಾವುದೇ ಲಕ್ಷಣಗಳು ಕಂಡುಬಂದಿಲ್ಲ’ ಎಂದು ಇರಾನ್‌ನ ಅಧಿಕೃತ ಸುದ್ದಿ ಸಂಸ್ಥೆ ಐಆರ್‌ಎನ್‌ಎ ವರದಿ ಮಾಡಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಅಮೆರಿಕ ಇರಾನ್‌ನ ಫೋರ್ಡೋ ಪರಮಾಣು ತಾಣಗಳ ಮೇಲೆ ದಾಳಿ ನಡೆಸಿ ನಾಶಪಡಿಸಿರುವುದು ನಿಜವಾಗಿದ್ದರೂ, ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿರುವ ವಿಡಿಯೋ ಡಿಸೆಂಬರ್ 2024 ರಲ್ಲಿ ಇಸ್ರೇಲ್ ನಡೆಸಿದ ಬಾಂಬ್ ದಾಳಿಯ ನಂತರ ವಾಯುವ್ಯ ಸಿರಿಯಾದಲ್ಲಿ ಟಾರ್ಟಸ್ ನಗರದ ಬಳಿ ನಡೆದ ಬೃಹತ್ ಸ್ಫೋಟದ ದೃಶ್ಯಗಳಾಗಿವೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಇರಾನ್, ನಮ್ಮನ್ನು ಕ್ಷಮಿಸಿ, ಯುದ್ಧ ನಿಲ್ಲಿಸಿ ಎಂದು ಇಸ್ರೇಲ್‌ ಜನರು ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು AI ವಿಡಿಯೋ ಹಂಚಿಕೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights