FACT CHECK | ಸ್ವಾಮಿ ವಿವೇಕಾನಂದ ಬೌಲಿಂಗ್ ಮಾಡುತ್ತಿರುವ ಚಿತ್ರ ಎಂದು ಎಡಿಟ್ ಮಾಡಿದ ಫೋಟೊ ಹಂಚಿಕೆ

ಸ್ವಾಮಿ ವಿವೇಕಾನಂದ ಬೌಲಿಂಗ್ ಮಾಡುತ್ತಿರುವ ಫೋಟೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ.  ಚಿತ್ರದ ವಿವರಣೆಯ ಪ್ರಕಾರ, ಇದನ್ನು 1884 ರಲ್ಲಿ ಈಡನ್ ಗಾರ್ಡನ್ಸ್‌ನಲ್ಲಿ ತೆಗೆದುಕೊಳ್ಳಲಾಗಿದೆ, ಇದರಲ್ಲಿ ವಿವೇಕಾನಂದರು ಕಲ್ಕತ್ತಾ ಟೌನ್ ಕ್ಲಬ್ ಅನ್ನು ಪ್ರತಿನಿಧಿಸಿದ್ದರು ಎಂದು ಬರೆಯಲಾಗಿದೆ. ಈ ಚಿತ್ರದಲ್ಲಿ ಪಂದ್ಯದ ಅಂಪೈರ್ ಕಾಣಿಸಿಕೊಂಡಿದ್ದಾರೆ.

ಕೆಲವರು  “ಅದು 1880 ರ ದಶಕದ ಮಧ್ಯಭಾಗದಲ್ಲಿ. ಈಡನ್ ಗಾರ್ಡನ್ಸ್ ಸುಮಾರು 20 ವರ್ಷ ಹಳೆಯದಾಗಿತ್ತು, ಮತ್ತು ಆಗ  ಕಲ್ಕತ್ತಾ ಕ್ರಿಕೆಟ್ ಕ್ಲಬ್ (CCC) ಮತ್ತು ಟೌನ್ ಕ್ಲಬ್ ನಡುವೆ ಪಂದ್ಯವನ್ನು ನಡೆಯುತ್ತಿತ್ತು. ಟೌನ್‌ ಕ್ಲಬ್‌ ಅನ್ನು ಪ್ರತಿನಿಧಿಸುವ ನರೇಂದ್ರನಾಥ ದತ್ತ ಏಳು ವಿಕೆಟ್‌ಗಳನ್ನು ಪಡೆದರು. ಅವರು ಕ್ರಿಕೆಟ್ ಅನ್ನು ವೃತ್ತಿಯಾಗಿಸಿಕೊಂಡಿಲ್ಲ, ಆದರೆ ಸ್ವಾಮಿ ವಿವೇಕಾನಂದ ಎಂಬ ಇನ್ನೊಂದು ಹೆಸರಿನಿಂದ ಕರೆಯಲ್ಪಡುವ ಜಾಗತಿಕ ವ್ಯಕ್ತಿಯಾದರು.” ಎಂದು ವರ್ಣರಂಜಿತ ಕತೆಯೊಂದಿಗೆ ಫೋಟೋವೊಂದನ್ನು ಹಂಚಿಕೊಳ್ಳಲಾಗುತ್ತಿದೆ.

ಫ್ಯಾಕ್ಟ್‌ಚೆಕ್‌ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಲಲಾಗುತ್ತಿರುವ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು, ವೈರಲ್ ಪೋಟೊವನ್ನು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, 2017ರಲ್ಲಿ ಮೋಹನ್‌ದಾಸ್ ಮೆನನ್ ಎಂಬುವವರು ತಮ್ಮ  x ಪೋಸ್ಟ್‌ನಲ್ಲಿ ಹಂಚಿಕೊಂಡ ಮೂಲ ಚಿತ್ರ ಲಭ್ಯವಾಗಿದೆ.  ಇದನ್ನು 1932 ರ ಈವೆಂಟ್‌ನಲ್ಲಿ ಕ್ರಿಕೆಟಿಗ ಹೆಡ್ಲಿ ವೆರಿಟಿ ಎಂದು ಗುರುತಿಸಲಾಗಿದೆ.

ಈ ಫೋಟೋ ಬಗ್ಗೆ ಮತ್ತಷ್ಟು ಸರ್ಚ್ ಮಾಡಿದಾಗ, ಮೂಲ ಫೋಟೋ ಸ್ಟಾಕ್ ಇಮೇಜ್ ವೆಬ್‌ಸೈಟ್ ಗೆಟ್ಟಿ ಇಮೇಜಸ್‌ನಲ್ಲಿಯೂ ಲಭ್ಯವಿದೆ, ಇದು ಸುಮಾರು 1940 ರ ದಿನಾಂಕವನ್ನು ಹೊಂದಿದೆ, ಇದರ ಶೀರ್ಷಿಕೆಯು “ಯಾರ್ಕ್‌ಷೈರ್ ಕ್ರಿಕೆಟಿಗ ಹೆಡ್ಲಿ ವೆರಿಟಿ (1905–1943)

ಈ ಚಿತ್ರವನ್ನು ವೈರಲ್ ಚಿತ್ರದೊಂದಿಗೆ ಹೋಲಿಸಿದಾಗ, ಹೆಡ್ಲಿ ವೆರಿಟಿಯ ಈ ಚಿತ್ರವನ್ನು ಸ್ವಾಮಿ ವಿವೇಕಾನಂದರು ಬೌಲಿಂಗ್ ಮಾಡುತ್ತಿರುವಂತೆ ಕಾಣುವಂತೆ ಡಿಜಿಟಲ್ ಆಗಿ ಮಾರ್ಫ್ ಮಾಡಲಾಗಿದೆ ಎಂಬುದು ಸ್ಪಷ್ಟವಾಗುತ್ತದೆ.

ಆದಾಗ್ಯೂ, ಸ್ವಾಮಿ ವಿವೇಕಾನಂದರು ಕ್ರಿಕೆಟ್‌ನಲ್ಲಿ ಕೋಲ್ಕತ್ತಾದ ಟೌನ್ ಕ್ಲಬ್ ಅನ್ನು ಪ್ರತಿನಿಧಿಸುತ್ತಿದ್ದರು. ಅನೇಕ ಸುದ್ದಿ ಲೇಖನಗಳು ಮತ್ತು ಕ್ರಿಕೆಟ್ ಬ್ಲಾಗ್‌ಗಳು ಅವರ ಈ ಅಂಶವನ್ನು ಉಲ್ಲೇಖಿಸಿವೆ. ವಾಸ್ತವವಾಗಿ, ಟೌನ್ ಕ್ಲಬ್ ಅನ್ನು ಪ್ರತಿನಿಧಿಸುವ ಈಡನ್ ಗಾರ್ಡನ್ಸ್‌ನಲ್ಲಿ ನಡೆದ ಪಂದ್ಯದಲ್ಲಿ, ಸ್ವಾಮಿ ವಿವೇಕಾನಂದರು ಏಳು ವಿಕೆಟ್‌ಗಳನ್ನು ಪಡೆದರು. ‘ಕ್ರಿಕೆಟ್ ಮಾತ್ರವಲ್ಲ, ಅವರು ಫುಟ್‌ಬಾಲ್, ಫೆನ್ಸಿಂಗ್ ಮತ್ತು ಬಾಕ್ಸಿಂಗ್‌ನಲ್ಲಿಯೂ ಕೌಶಲ್ಯ ಹೊಂದಿದ್ದರು’ ಎಂದು ನ್ಯೂಸ್‌ಮೊಬೈಲ್ ಬರೆದಿದೆ. ಸ್ವಾಮಿ ಅವರ ಕ್ರಿಕೆಟ್ ಕೌಶಲ್ಯಗಳ ಬಗ್ಗೆ ವರದಿ ಮಾಡಿದ ಇತರ ಲೇಖನಗಳನ್ನು ಇಲ್ಲಿ ಮತ್ತು ಇಲ್ಲಿ ಓದಬಹುದು.

ಸ್ವಾಮಿ ಈಡನ್ ಗಾರ್ಡನ್ಸ್‌ನಲ್ಲಿ ಟೌನ್ ಕ್ಲಬ್‌ಗಾಗಿ ಆಡುತ್ತಾ ಏಳು ವಿಕೆಟ್‌ಗಳನ್ನು ಪಡೆದಿದ್ದಾರೆ ಎಂಬುದು ಸಹ ನಿಜ. ಆದಾಗ್ಯೂ, ವೈರಲ್ ಚಿತ್ರದಲ್ಲಿರುವ ವ್ಯಕ್ತಿ ಅವರಲ್ಲ.

ಒಟ್ಟಾರೆಯಾಗಿ ಹೇಳುವುದಾದರೆ, 1884 ರಲ್ಲಿ ಸ್ವಾಮಿ ವಿವೇಕಾನಂದರು ಬೌಲಿಂಗ್ ಮಾಡುತ್ತಿರುವ ಚಿತ್ರ ಎಂದು, ಯಾರ್ಕ್‌ಷೈರ್ ಕ್ರಿಕೆಟಿಗ ಹೆಡ್ಲಿ ವೆರಿಟಿ ಅವರ ಫೋಟೊವನ್ನು ಎಡಿಟ್ ಮಾಡಿ ತಪ್ಪಾಗಿ ಹಂಚಿಕೊಳ್ಳಲಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಭಾರತದಲ್ಲಿ ರೈಲು ಹಳಿಗಳ ನಡುವೆ ಸೌರ ಫಲಕಗಳನ್ನು ಅಳವಡಿಸಿ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆಯೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights