FACT CHECK : TMC ಕಾರ್ಯಕರ್ತರಿಗೆ ಪೋಲೀಸರಿಂದ ಲಾಠಿ ಚಾರ್ಜ್ ಎಂದು ಹಳೆಯ ವಿಡಿಯೋ ಹಂಚಿಕೆ

ಪಶ್ಚಿಮ ಬಂಗಾಳ ವಿಧಾನಸಭೆಯ ಮೊದಲ ಹಂತದ ಚುನಾವಣೆ ಏಪ್ರಿಲ್ 23, 2026 ರಂದು ಯಶಸ್ವಿಯಾಗಿ ನಡೆದಿದೆ. ಸ್ವಾತಂತ್ರ್ಯಾನಂತರದ ಗರಿಷ್ಠ ಮತದಾನ (91.78%) ದಾಖಲಾಗಿರುವ ಬೆನ್ನಲ್ಲೇ, ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋವೊಂದು ಭಾರಿ ವೈರಲ್ ಆಗುತ್ತಿದೆ. ಪೋಲಿಂಗ್ ಬೂತ್‌ಗಳ ಬಳಿ ಪ್ರಚಾರ ಮಾಡುತ್ತಿದ್ದ ತೃಣಮೂಲ ಕಾಂಗ್ರೆಸ್ (TMC) ಕಾರ್ಯಕರ್ತರಿಗೆ ಪೊಲೀಸರು ಹಿಗ್ಗಾಮುಗ್ಗಾ ಥಳಿಸುತ್ತಿದ್ದಾರೆ ಎಂಬ ಶೀರ್ಷಿಕೆಯಡಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ.

ವೈರಲ್ ಆಗಿರುವ ಈ ಕ್ಲಿಪ್‌ನಲ್ಲಿ ಟಿಎಂಸಿ ಪೋಸ್ಟರ್‌ಗಳು ಮತ್ತು ಧ್ವಜಗಳನ್ನು ಹಿಡಿದುಕೊಂಡು ಬೆಂಚ್ ಮೇಲೆ ಕುಳಿತಿದ್ದ ಇಬ್ಬರು ವ್ಯಕ್ತಿಗಳು ಇದ್ದಾರೆ. ಪೊಲೀಸರು ಜನರ ಗುಂಪನ್ನು ಚದುರಿಸಲು ಲಾಠಿ ಬೀಸುತ್ತಿರುವುದನ್ನು ಕಾಣಬಹುದು. ಇದು ಏಪ್ರಿಲ್ 23 ರಂದು ನಡೆದ ಮೊದಲ ಹಂತದ ಮತದಾನದ ವೇಳೆ ನಡೆದ ಘಟನೆ ಎಂದು ಹೇಳಲಾಗುತ್ತಿದೆ.

 

ಫೇಸ್​ಬುಕ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚಿಕೊಂಡು, ‘‘ಟಿಎಂಸಿ ಕಾರ್ಯಕರ್ತರು ಮತಗಟ್ಟೆಯ ಬಳಿ ಮತದಾರರ ಮೇಲೆ ಪ್ರಭಾವ ಬೀರುತ್ತಿದ್ದರು. ಪೊಲೀಸರು ಹಾಗೆ ಮಾಡದಂತೆ ವಿನಮ್ರವಾಗಿ ವಿನಂತಿಸಿದರು ಏಕೆಂದರೆ ಇದು ಚುನಾವಣಾ ಮಾದರಿ ನೀತಿ ಸಂಹಿತೆಗೆ ವಿರುದ್ಧವಾಗಿದೆ.’’ ಎಂದು ಬರೆದುಕೊಂಡಿದ್ದಾರೆ. (Archive) ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರರುವ ಪೋಸ್ಟ್‌ನಲ್ಲಿ ಮಾಇದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಜುಲೈ 29, 2023 ರಂದು ಫೇಸ್‌ಬುಕ್‌ನಲ್ಲಿ ಹಂಚಿಕೊಂಡ ಪೋಸ್ಟ್‌ವೊಂದು ಲಭ್ಯವಾಗಿದೆ.

ಜುಲೈ 2023ರಲ್ಲಿ ಪ್ರಕಟವಾದ ‘ನ್ಯೂಸ್ 18 ಬಾಂಗ್ಲಾ’ ವರದಿಯ ಪ್ರಕಾರ, ಈ ದೃಶ್ಯಗಳು ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯ ಬಾಸಂತಿ ಪ್ರದೇಶಕ್ಕೆ ಸಂಬಂಧಿಸಿದ್ದಾಗಿದೆ. ಅಂದು ನಡೆದ ಪಂಚಾಯತ್ ಚುನಾವಣೆಯ ವೇಳೆ ಬಾಸಂತಿಯಲ್ಲಿ ಬಾಂಬ್ ಸ್ಫೋಟದ ಸಂಶಯ ವ್ಯಕ್ತವಾದಾಗ, ಉದ್ರಿಕ್ತ ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಜನರನ್ನು ಚದುರಿಸಿದ್ದರು. ಆ ಹಳೆಯ ದೃಶ್ಯಗಳನ್ನು ಈಗಿನ ಚುನಾವಣೆಗೆ ತಳಕು ಹಾಕಲಾಗಿದೆ.

ಮತ್ತಷ್ಟು ಪರಿಶೀಲನೆ ನಡೆಸಿದಾಗ,  2023 ರ ಬಂಗಾಳ ಪಂಚಾಯತ್ ಚುನಾವಣೆಯ ಸಂದರ್ಭದಲ್ಲಿ ದಕ್ಷಿಣ 24 ಪರಗಣ ಜಿಲ್ಲೆಯ ಬಸಂತಿ ZP-1 ರಿಂದ ನಿಲಿಮಾ ಮಿಸ್ತ್ರಿ ಟಿಎಂಸಿ ಜಿಲ್ಲಾ ಪರಿಷತ್ ಅಭ್ಯರ್ಥಿಯಾಗಿದ್ದರು ಎಂಬುದು ಕಂಡುಬಂದಿದೆ. ಜುಲೈ 8, 2023 ರಂದು ಚುನಾವಣೆಗಳು ನಡೆದಿದ್ದವು ಮತ್ತು ಅವರು ದಕ್ಷಿಣ 24 ಪರಗಣ ಜಿಲ್ಲಾ ಪರಿಷತ್ತಿನ ಜಿಲ್ಲಾ ಪರಿಷತ್ ಸದಸ್ಯರಾಗಿ ಆಯ್ಕೆಯಾದರು.ಮಿಸ್ತ್ರಿ ಅವರು 2026 ರ ವಿಧಾನಸಭಾ ಚುನಾವಣೆಯಲ್ಲಿ ಬಸಂತಿ ವಿಧಾನಸಭೆಯಿಂದ ಟಿಎಂಸಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ “ಟಿಎಂಸಿ ಕಾರ್ಯಕರ್ತರಿಗೆ ಪೋಲೀಸರಿಂದ ಲಾಠಿ ಪ್ರಹಾರ” ಎಂಬ ವೀಡಿಯೋ ಸಂಪೂರ್ಣವಾಗಿ ದಾರಿ ತಪ್ಪಿಸುವಂತಿದ್ದು,  ಇದು 2023ರ ಹಳೆಯ ಘಟನೆಯದ್ದಾಗಿದೆ. ಪ್ರಸ್ತುತ 2026ರ ಪಶ್ಚಿಮ ಬಂಗಾಳ ಚುನಾವಣಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ.


ಇದನ್ನು ಓದಿರಿ : FACT CHECK : ಯುವತಿಯರಿಗೆ ಕಿರುಕುಳ ನೀಡಿದಕ್ಕೆ ಮುಸ್ಲಿಂ ಹುಡುಗರಿಗೆ ಲಾಠಿ ಏಟು ಎಂದು ಸಂಬಂಧವಿಲ್ಲ ವಿಡಿಯೋ ಹಂಚಿಕೆ


ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights