ಬಸ್ಸನಲ್ಲಿ ಪ್ರಯಾಣಿಸುತ್ತಿರುವಾಗಲೇ ಹೃದ್ರೋಗದಿಂದ ಅಪರಿಚಿತ ಮಹಿಳೆ ಸಾವು..!
ತುಮಕೂರು-ಕೋಡಿಗೇನಹಳ್ಳಿ ಮಾರುತಿ ಕೃಪ ಬಸ್ಸನಲ್ಲಿ ಹೃದ್ರೋಗದಿಂದ ಅಪರಿಚಿತ ಮಹಿಳೆ ಸಾವು ಸಂಬವಿಸಿರುವ ಘಟನೆ ಬುಧವಾರ ಜರುಗಿದೆ.
ಪಟ್ಟಣದ ಸಿವಿಲ್ ಬಸ್ಟಾಂಡ್ ಗೆ ಮಾರುತಿ ಕೃಪ ಬಸ್(ಕೆಎ ೦೬ ಬಿ ೪೪೫೯) ಬರುತ್ತಿದ್ದಂತೆ ಅದರಲ್ಲಿ ಪ್ರಯಾಣಿಸುತ್ತಿದ್ದ ೬೦ ರಿಂದ ೬೫ ವರ್ಷದ ಅಪರಿಚಿತ ಮಹಿಳೆ ಬಸ್ ಸೀಟ್ ನಿಂದ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.
ಸ್ಥಳಕ್ಕೆ ಸಿಪಿಐ ದಯಾನಂದ ಸೇಗುಣಿಸಿ, ಪಿಎಸ್ಐ ಮಂಗಳಗೌರಮ್ಮ ಮತ್ತಿತರರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.