ಒಂದು ಗಂಟೆ ಬಸ್ಗಾಗಿ ಕಾದ ಗರ್ಭಿಣಿ, ನಿಲ್ದಾಣದಲ್ಲೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ಲು….!

ಗರ್ಭಿಣಿ ಮಹಿಳೆಯೊಬ್ಬಳು ಹೆರಿಗೆ ನೋವು ತಾಳಲಾರದೆ ಬಸ್ ನಿಲ್ದಾಣದಲ್ಲೇ ಹೆಣ್ಣು ಮಗುವಿಗೆ ಜನ್ಮ ನೀಡಿದ ಘಟನೆ ವಿಜಯಪುರ ಜಿಲ್ಲೆಯ ನಿಡಗುಂದಿ ಬಸ್ ನಿಲ್ದಾಣದಲ್ಲಿ ನಡೆದಿದೆ.

ವಿಜಯಪುರ ಜಿಲ್ಲೆಯ ಬಾಗೇವಾಡಿ ನಿವಾಸಿ ಮಹಾದೇವಿ ವಡ್ಡರ ಹೆಣ್ಣು ಮಗುವಿಗೆ ಜನ್ಮ ನೀಡಿದ ತಾಯಿಯಾಗಿದ್ದಾರೆ. ತುಂಬು ಗರ್ಭಿಣಿಯಾಗಿರುವ ಈ ಮಹಿಳೆ ಹೆರಿಗೆಗಾಗಿ ಬಾಗಲಕೋಟೆಗೆ ತೆರಳಲು ನಿಡಗುಂದಿ ಬಸ್ ನಿಲ್ದಾಣಕ್ಕೆ ಬಂದಿದ್ದಳು. ಸುಮಾರು ಒಂದು ಗಂಟೆ ಕಾಯ್ದರೂ ಬಸ್ಸು ಬಂದಿರಲಿಲ್ಲ. ಈ ಮಧ್ಯೆ ಹೆರಿಗೆ ನೋವು ಹೆಚ್ಚಾಗಿದೆ. ಆಗ ಆಕೆಯ ಜೊತೆಗಿದ್ದ ಮಹಿಳೆಯರು ಅಲ್ಲಿಯೇ ಸೀರೆಯಿಂದ ಆ ಮಹಿಳೆಯನ್ನು ಮರೆ ಮಾಡಿ ಸುರಕ್ಷಿತ ಹೆರಿಗೆ ಮಾಡಿಸಿದ್ದಾರೆ.

ನಂತರ ಸ್ಥಳೀಯರ ಸಹಾಯದೊಂದಿಗೆ ಮಹಿಳೆ ಮಹಾದೇವಿ ವಡ್ಡರ ಮತ್ತು ಹೆಣ್ಣು ಮಗುವನ್ನು ರಾಂಪೂರ ಪ್ರಾಥಮಿಕ ಆರೋಗ್ಯ ಮಹಿಳೆಯನ್ನು ದಾಖಲು ಮಾಡಲಾಗಿದೆ. ಈಗ ತಾಯಿ ಮತ್ತು ಮಗು ಆರೋಗ್ಯದಿಂದ ಇದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights