Bigg Boss : ಲ್ಯಾಗ್ ಮಂಜುನ ಮುಖಕ್ಕೆ ಉಗುಳಿದ ದಿವ್ಯ ಸುರೇಶ್ : ಕಾರಣ ಏನು?

ಬಿಗ್ ಬಾಸ್ ಮನೆ ಎರಡನೇ ಬಾರಿಗೆ ಕ್ಯಾಪ್ಟನ್ ಆಗಿ ಅರವಿಂದ್ ಆಯ್ಕೆಯಾಗಿದ್ದಾರೆ. ಒಪ್ಪಂದ ಮಾಡಿಕೊಂಡರೂ ಕ್ಯಾಪ್ಟನ್ ಆಗೋ ಚಾನ್ಸ್ ಕಳೆದುಕೊಂಡ ದಿವ್ಯ ಕಣ್ಣೀರಿಟ್ಟಿದ್ದಾರೆ.

ಹೌದು… ಅದ್ಯಾಕೋ ಏನೋ ದಿವ್ಯಾ ಸುರೇಶ್ ಗೆ  ಸುಮಂತ್ ಬ್ರೋ ಗೌಡ ಕಂಡ್ರೆ ಅಷ್ಟಕಷ್ಟೆ. ಆದರೆ ಮಂಜು ಪಾವಗಡನನ್ನು ಕಂಡರೆ ಮಾತ್ರ ಎಲ್ಲಿದ ಸಲುಗೆ. ಬಿಗ್ ಬಾಸ್ ಮನೆಯಲ್ಲಿ ಜೋಡಿ ಜೋಡಿಯಾಗಿ ಇರೋರು, ಜೋಡಿಯಾಗಿ ಊಟ ಮಾಡೋರು, ಜೋಡಿಯಾಗೇ ಟಾಸ್ಕ್ ಆಡೋರ ಸಂಖ್ಯೆ ಅಧಿಕವಾಗಿಬಿಟ್ಟಿದೆ. ಅದ್ರಲ್ಲಿ ಮೊದಲನೆ ಸ್ಥಾನ ಲ್ಯಾಗ್ ಮಂಜ ಹಾಗೂ ದಿವ್ಯಾ ಸುರೇಶ್ ದ್ದೇ ಮೊದಲ ಹೆಸರು. ದಿವ್ಯಾ ಸುರೇಶ್ ಗೆ ಸುಮಂತ್ ಪ್ರೋಪೋಸ್ ಮಾಡಿದಾಗ, ಮಾತನಾಡಿದಾಗ ಆಗೋ ಇರಿಟೇಟ್ ಮಂಜು ಮಾಡಿದಾಗ ಆಗೋದೇ ಇಲ್ಲ. ಮಂಜು ಗೂ ಅಷ್ಟೇ ದಿವ್ಯ ಏನೇ ಮಾಡಿದ್ರು ಕೋಪ ಬರಲ್ಲ. ಇದೇ ಸಲುಗೆಯಿಂದಾಗಿ ದಿವ್ಯಾ ಮಂಜುವಿನ ಮೇಲೆ ಉಗುಳಿದ್ದಾರೆ.

ಕ್ಯಾಪ್ಟನ್ ಟಾಸ್ಕ್ ನಲ್ಲಿ ಬಕೇಟ್ ನಲ್ಲಿರುವ ಮರಳನ್ನು ಹಗ್ಗದ ಮೂಲಕ ಎತ್ತಿ ಹಿಡಿದ ದಿವ್ಯಾ ಹಾಗೂ ಅರವಿಂದ್ ಗೆ ನೀರು ಬೇಕಾಗಿತ್ತು. ಈ ವೇಳೆ ನೀರು ಕೊಟ್ಟ ಮಂಜು ಮೇಲೆ ದಿವ್ಯಾ ಸುರೇಶ್ ಉಗುಳಿದ್ದಾರೆ. ಇದಕ್ಕೆ ಮಂಜು ಕೋಪ ಮಾಡಿಕೊಳ್ಳದೆ ನಗಾಡುತ್ತಾ ಸುಮ್ಮನಾಗಿದ್ದು ಇವರಿಬ್ಬರ ಮಧ್ಯೆ ಸಂಥಿಂಗ್ ಸಂಥಿಂಗ್ ಪಕ್ಕ ಎನ್ನುತ್ತಿದ್ದಾರೆ ಇನ್ನುಳಿದ ಸದಸ್ಯರು.

ಒಟ್ಟಿನಲ್ಲಿ ದಿವ್ಯ ಸುರೇಶ್ ಹಾಗೂ ಮಂಜು ಮಧ್ಯೆ ಇಷ್ಟೊಂದು ಸಲುಗೆ ಯಾಕೆ? ಅನ್ನೋದೇ ಬಿಗ್ ಬಾಸ್ ನೋಡುಗರಿಗೆ ಮತ್ತು ಮನೆಯ ಸ್ಪರ್ಧಿಗಳಿಗೆ ದೊಡ್ಡ ಪ್ರಶ್ನೆಯಾಗಿ ಕಾಡುತ್ತಿದೆ. ಇದಕ್ಕೆಲ್ಲಾ ಉತ್ತರ ಮುಂದಿನ ದಿನಗಳಲ್ಲಿ ಸಿಗೋದು ಪಕ್ಕಾ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights