ನಿಖಿಲ್ ಕುಮಾರಸ್ವಾಮಿಗೂ ಕೊರೊನಾ ಪಾಸಿಟಿವ್ : ಪತ್ನಿ ಅನಿತಾ ಹೋಂ ಕ್ವಾರಂಟೈನ್!

ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ಕೋವಿಡ್-19 ಸೋಂಕಿಗೆ ಒಳಗಾಗಿರುವುದರಿಂದ ಪುತ್ರ ನಿಖಿಲ್ ಗೂ ಕೂಡ ಕೊರೊನಾ ಸೋಂಕು ತಗುಲಿದೆ.

ಹೌದು… ಕೊರೊನಾ ಅತೀ ವೇಗವಾಗಿ ಹರಡುತ್ತಿದ್ದು ಹೆಚ್.ಡಿ.ಕುಮಾರಸ್ವಾಮಿಗೆ ಸೋಂಕು ಹರಡಿ ಮನೆಯ ಮಂದಿಗೆಲ್ಲಾ ಕೊರೊನಾ ಆತಂಕ ಎದುರಾಗಿದೆ. ಈಗಾಗಲೇ ಪುತ್ರ ನಿಖಿಲ್ ಗೂ ಕೂಡ ಸೋಂಕು ತಗುಲಿದ್ದು, ರಾಮನಗರ ಶಾಸಕರಾದ ಅನಿತಾ ಕುಮಾರಸ್ವಾಮಿಯವರಿಗೆ ಹೋಂ ಕ್ವಾರಂಟೈನ್ ಗೆ ವೈದ್ಯರು ಸಲಹೆ ನೀಡಿದ್ದಾರೆ. ವೈದ್ಯರ ಮುಂದಿನ ಸೂಚನೆ ಬರುವವರೆಗೂ ಶಾಸಕರ ಹೋಂ ಕ್ವಾರಂಟೈನ್ ನಲ್ಲೇ ಇರುವಂತೆ ವೈದ್ಯರು ಸಲಹೆ ನೀಡಿದ್ದಾರೆ.

ಈ ಬಗ್ಗೆ ಸ್ವತ: ಟ್ವೀಟ್ ಮಾಡಿದ ಕುಮಾರಸ್ವಾಮಿ, ಕೆಲವು ದಿನಗಳ ಕಾಲ ಜೆಪಿ ನಗರದ ಗೃಹಕಛೇರಿ ಬಳಿಯೂ ಸಾರ್ವಜನಿಕರ ಪ್ರವೇಶ ಬೇಡವೆಂದು ವೈದ್ಯರು ಸಲಹೆ ನೀಡಿರುವ ಹಿನ್ನೆಲೆಯಲ್ಲಿ ಅನ್ಯತಾ ಭಾವಿಸದೆ ಕಾರ್ಯಕರ್ತರು ಮುಖಂಡರುಗಳು ಸಹಕರಿಸಬೇಕೆಂದು ಮನವಿ ಮಾಡಿದ್ದಾರೆ.

ಪ್ರತಿಯೊಬ್ಬರು ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಂಡು ಕೊರೊನಾ ಸೊಂಕು ಹರಡದಂತೆ ಮುಂಜಾಗ್ರತಾ ಕ್ರಮಗಳನ್ನ ಅನುಸರಿಸಬೇಕೆಂದು ಮನವಿ ಮಾಡಿದ್ದಾರೆ.

Spread the love

Leave a Reply

Your email address will not be published. Required fields are marked *