ಮಮತಾ ಬ್ಯಾನರ್ಜಿ ಫೋನ್‌ ಕರೆ ಕದ್ದಾಲಿಕೆ ಮತ್ತು ಪ್ರಸಾರ: BJP ವಿರುದ್ಧ ಆಯೋಗಕ್ಕೆ TMC ದೂರು!

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಫೋನ್‌ ಕರೆಯನ್ನು ಬಿಜೆಪಿ ಕದ್ದಾಲಿಸಿ, ಅದನ್ನು ರೆಕಾರ್ಡ್‌ ಮಾಡಿಕೊಂಡು ಪತ್ರಿಕಾಗೋಷ್ಟಿಯಲ್ಲಿ ಪ್ರಸಾರ ಮಾಡಿದೆ ಎಂದು ಆರೋಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ವಿರುದ್ದ ಟಿಎಂಸಿ ನಾಯಕರು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ.

ಮಮತಾ ಅವರು ಸೀತಾಕುಲ್ಚಿ ಕ್ಷೇತ್ರದ ತಮ್ಮ ಪಕ್ಷದ ಅಭ್ಯರ್ಥಿ ಪಾರ್ಥ ಪ್ರತಿಮ್ ರೇ ಅವರೊಂದಿಗೆ ದೂರವಾಣಿ ಕರೆಯಲ್ಲಿ ಮಾತನಾಡಿದ್ದಾರೆ ಎಂದು ಹೇಳಲಾದ ಆಡಿಯೋವೊಂದನ್ನು ಬಿಜೆಪಿ ಪ್ರಕಟಿಸಿದೆ. ಇದರಲ್ಲಿ, ಸೀತಾಲ್ಕುಚಿಯಲ್ಲಿ ಸಿಐಎಸ್‍ಎಫ್ ನಡೆಸಿದ ಗೋಲಿಬಾರಿನಲ್ಲಿ ಸಾವಿಗೀಡಾದವರ ಶವಗಳನ್ನು  ಮುಂದಿಟ್ಟು ಪ್ರತಿಭಟನೆ ನಡೆಸಬೇಕೆಂದು ಮಮತಾ ಅವರು ಪ್ರತಿಮ್ ರೇಗೆ ಹೇಳಿದ್ದಾ ಎಂದು ಆಡಿಯೋ ಟೇಪ್ ಒಂದನ್ನು ಮುಂದಿಟ್ಟು ಮಮತಾ ವಿರುದ್ಧ ಬಿಜೆಪಿ ಪತ್ರಿಕಾಗೋಷ್ಟಿಯಲ್ಲಿ ಆರೋಪಿಸಿತ್ತು.

ಚುನಾವಣೆಗೆ ಒಂದು ದಿನ ಮುಂಚಿತವಾಗಿ ಬಿಜೆಪಿ ಈ ಆಡಿಯೋ ಟೇಪ್ ಬಿಡುಗಡೆಗೊಳಿಸಿದ ಹಿಂದೆ ರಾಜಕೀಯ ಷಡ್ಯಂತ್ರವಿದೆ ಎಂಬುದು ಟಿಎಂಸಿ ಆರೋಪವಾಗಿದೆ.

ಬಿಜೆಪಿಯು ಸಿಎಂ ಮಮತಾ ಬ್ಯಾನರ್ಜಿಯವರ ದೂರವಾಣಿ ಸಂಭಾಷಣೆಯನ್ನು ಅಕ್ರಮವಾಗಿ ರೆಕಾರ್ಡ್ ಮಾಡಿದೆ ಹಾಗೂ ಅದನ್ನು ಅನಗತ್ಯವಾಗಿ ಪತ್ರಿಕಾಗೋಷ್ಠಿಯಲ್ಲಿ ಎಲ್ಲರಿಗೂ ಕೇಳಿಸಿದೆ. ಇದು ಮುಖ್ಯಮಂತ್ರಿ ಹಾಗೂ ಪ್ರತಿಮ್ ರೇ ಅವರ ಖಾಸಗಿತನದ ಹಕ್ಕಿನ ಉಲ್ಲಂಘನೆಯಾಗಿದೆ ಎಂದು ಪತ್ರದಲ್ಲಿ ಹೇಳಿರುವ ಟಿಎಂಸಿ ಚುನಾವಣಾ ಆಯೋಗದಿಂದ ಸೂಕ್ತ ಕ್ರಮಕ್ಕೆ ಆಗ್ರಹಿಸಿದೆ.

Read Also: ಬಂಗಾಳದಲ್ಲಿ ಡ್ರಗ್ಸ್, ಅಸ್ಸಾಂನಲ್ಲಿ ಮದ್ಯ, TNನಲ್ಲಿ ಹಣ; ಯಾವ ಪಕ್ಷಗಳು ಮತದಾರರನ್ನು ಸೆಳೆತ್ತವೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights