ಬಂಗಾಳದಲ್ಲಿ ಡ್ರಗ್ಸ್, ಅಸ್ಸಾಂನಲ್ಲಿ ಮದ್ಯ, TNನಲ್ಲಿ ಹಣ; ಯಾವ ಪಕ್ಷಗಳು ಮತದಾರರನ್ನು ಸೆಳೆತ್ತವೆ!

ಪಂಚರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಯ ನಡೆಯುತ್ತಿದೆ. ಚುನಾವಣಾ ಕಣದಲ್ಲಿರುವ ಹಲವು ಪಕ್ಷಗಳು ಮತದಾರರನ್ನು ಸೆಳೆಯಲು ಹಲವಾರು ಅಸ್ತ್ರಗಳನ್ನು ಪ್ರಯೋಗಿಸುತ್ತಿವೆ. ಅಲ್ಲದೆ, ಪಶ್ಚಿಮ ಬಂಗಾಳದಲ್ಲಿ ಮಾದಕ ದ್ರವ್ಯಗಳು, ತಮಿಳುನಾಡು, ಕೇರಳ, ಪುದುಚೇರಿಯಲ್ಲಿ ಚಿನ್ನ ಹಾಗೂ ಹಣ ಮತ್ತು ಅಸ್ಸಾನಲ್ಲಿ ಮದ್ಯ ಬಳಕೆ ಹೆಚ್ಚಾಗಿ ಬಳಕೆಯಾಗಿದೆ ಎಂದು ತಿಳಿದು ಬಂದಿದೆ.

ಪಶ್ಚಿಮ ಬಂಗಾಳದಲ್ಲಿ ಮಾದಕ ದ್ರವ್ಯಗಳು, ಹಣ, ಚಿನ್ನ, ಮೊಬೈಲ್‌ ಮತ್ತು ಇತರ ಉಚಿತ ವಸ್ತುಗಳನ್ನು ನೀಡಲಾಗುತ್ತಿದ್ದು, ಅವುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಚುನಾವಣಾ ಆಯೋಗದ ವರದಿಯಲ್ಲಿ ತಿಳಿಸಿರುವುದಾಗಿ ದಿ ಪ್ರಿಂಟ್‌ ವರದಿ ಮಾಡಿದೆ.

ಈ ಚುನಾವಣೆಯಲ್ಲಿ ವಶಪಡಿಸಿಕೊಳ್ಳಲಾಗಿರುವ ಒಟ್ಟು ಮೊತ್ತವು 2016ರ ಚುನಾವನೆಯಲ್ಲಿ ವಶಪಡಿಸಿಕೊಳ್ಳಲಾಗಿದ್ದ ಮೌಲ್ಯಕ್ಕಿಂತ ಎಂಟು ಪಟ್ಟು ಹೆಚ್ಚಾಗಿದೆ ಎಂದು

ಈ ಮೊತ್ತವು 2016 ರ ವಿಧಾನಸಭಾ ಚುನಾವಣೆಯ ಒಟ್ಟು ವಶಪಡಿಸಿಕೊಳ್ಳುವಿಕೆಯ ಎಂಟು ಪಟ್ಟು ಹೆಚ್ಚಾಗಿದೆ. ಬಂಗಾಳದ ಮೂರು ಹಂತದ ಚುನಾವಣೆಯ ಸಂದರ್ಭದಲ್ಲಿ 44 ಕೋಟಿ ರೂ.ಗಳ ಅಕ್ರಮ ಸರಕುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.

ವರದಿಯ ಪ್ರಕಾರ, ಪಶ್ಚಿಮ ಬಂಗಾಳದಲ್ಲಿ 118.83 ಕೋಟಿ ರೂ.ಗಳ ಮಾದಕ ದ್ರವ್ಯ ಅಥವಾ ಮಾದಕವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಸ್ಸಾಂನಲ್ಲಿ 34.41 ಕೋಟಿ ರೂ. ಮೌಲ್ಯದ ಮಾದಕ ದ್ರವ್ಯಗಳನ್ನು ವಶಪಡಿಸಿಕೊಳ್ಳಲಾಗಿದೆ. ಕೇರಳ ಮತ್ತು ತಮಿಳುನಾಡಿನಲ್ಲಿ ಕ್ರಮವಾಗಿ 4 ಕೋಟಿ ಮತ್ತು 2 ಕೋಟಿ ರೂಗಳ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಆದರೆ, ಯಾವ ರೀತಿಯಲ್ಲಿ ವಶಪಡಿಕೊಳ್ಳಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಿಲ್ಲ.

ಆದಾಗ್ಯೂ, ದಕ್ಷಿಣ ರಾಜ್ಯಗಳಲ್ಲಿ ಅತಿ ಹೆಚ್ಚು ರೋಗಗ್ರಸ್ತವಾಗಿರುವುದು ಚಿನ್ನ ಮತ್ತು ಹಣ ಎಂದು ಚುನಾವಣಾ ಆಯೋಗ ಹೇಳಿದೆ.

ಬಂಗಾಳದಲ್ಲಿ ಮತದಾರರ ಮೇಲೆ ಪ್ರಭಾವ ಬೀರಲು ಡ್ರಗ್, ಮೊಬೈಲ್, ಹಿಲ್ಸಾ:

ಪಶ್ಚಿಮ ಬಂಗಾಳದ ಮತದಾರರ ಮೇಲೆ ಪ್ರಭಾವ ಬೀರಲು ಪ್ರಯತ್ನಿಸುವ ಪಕ್ಷಗಳ ಮೇಲೆ ಕಣ್ಣಿಡಲು 11 ಏಜೆನ್ಸಿಗಳನ್ನು ನೇಮಿಸಲಾಗಿದೆ. ಅವುಗಳಲ್ಲಿ ಅಬಕಾರಿ ಇಲಾಖೆ, ಆದಾಯ ತೆರಿಗೆ ಇಲಾಖೆ, ರಾಜ್ಯ ಪೊಲೀಸ್ ಮತ್ತು ಮಾದಕವಸ್ತು ಬ್ಯೂರೋಗಳನ್ನು ನಿಯೋಜಿಸಲಾಗಿದೆ ಎಂದು ಚುನಾವಣಾ ಆಯೋಗದ (ಇಸಿ) ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

118 ಕೋಟಿ ರೂ.ಗಳ ಮಾದಕ ವಸ್ತುಗಳನ್ನು ಹೊರತುಪಡಿಸಿ, ಹಿಲ್ಸಾ ಮೀನುಗಳು, ಫ್ಯಾನ್‌ಗಳು ಮತ್ತು 88 ಕೋಟಿ ಮೌಲ್ಯದ ಮೊಬೈಲ್‌ಗಳು, 50 ಕೋಟಿ ಮೌಲ್ಯದ ನಗದು, 30 ಕೋಟಿ ಮೌಲ್ಯದ ಮದ್ಯ ಮತ್ತು 12 ಕೋಟಿ ಮೌಲ್ಯದ ಚಿನ್ನವನ್ನು ಏಜೆನ್ಸಿಗಳು ವಶಪಡಿಸಿಕೊಂಡಿದೆ ಎಂದು ಇಸಿ ವರದಿ ಹೇಳಿದೆ.

ಇಂತಹ ಹಲವು ಮಾದಕ ವಸ್ತುಗಳು ಬಾಂಗ್ಲಾದೇಶ ಗಡಿಯಲ್ಲಿವೆ. ಅವುಗಳು ಅಕ್ರಮ ಹಣಕ್ಕೆ ಸುಲಭವಾಗಿ ದೊರೆಯುತ್ತವೆ ಎಂದು ಹೇಳಲಾಗಿದೆ.

“ಈ ವಿಧಾನಸಭಾ ಚುನಾವಣೆಗಳಲ್ಲಿ ಮತಗಳನ್ನು ಖರೀದಿಸಲು ಎಷ್ಟು ಹಣ ಹರಿಯುತ್ತಿದೆ ಎಂಬುದು ಸ್ಪಷ್ಟವಾಗಿದೆ. ಬಂಗಾಳದಲ್ಲಿ ಚುನಾವಣೆ ಇನ್ನೂ ಪೂರ್ಣಗೊಂಡಿಲ್ಲ. ಅಂತಿಮ ಹಂತದ ಮತದಾನದ ನಂತರ ಅಕ್ರಮ ಹಣದ ಅಂತಿಮ ಅಂಕಿ ಅಂಶ ಹೊರಬರುತ್ತದೆ. ಮತದಾರರ ಮೇಲೆ ಪ್ರಭಾವ ಬೀರಲು ಮಾದಕ ವಸ್ತುಗಳ ಬಳಕೆಯು ಹೆಚ್ಚಾಗಿರುವುದು ಆಶ್ಚರ್ಯಕರವಾಗಿದೆ” ಎಂದು ಇಸಿ ಅಧಿಕಾರಿ ಹೇಳಿದರು.

ಯಾವ ಪಕ್ಷಗಳು ಅಪರಾಧಿಗಳು ಎಂದು ವರದಿಯಲ್ಲಿ ಉಲ್ಲೇಖಿಸಿಲ್ಲ.

ಕೇರಳ – ತಮಿಳುನಾಡಿನಲ್ಲಿ ಮತ ಖರೀದಿಸಲು ಚಿನ್ನ ಮತ್ತು ನಗದು ಆದ್ಯತೆ: 

ಮತದಾರರ ಮೇಲೆ ಪ್ರಭಾವ ಬೀರಲು ಹಣವನ್ನು ಬಳಸುವುದರಲ್ಲಿ ತಮಿಳುನಾಡು ಅಗ್ರಸ್ಥಾನದಲ್ಲಿದೆ ಎಂದು ಇಸಿ ಡೇಟಾ ತೋರಿಸುತ್ತದೆ. ತಮಿಳುನಾಡಿನಲ್ಲಿ ಸುಮಾರು 236 ಕೋಟಿ ರೂ.ಗಳ ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಇದು ನಾಲ್ಕು ರಾಜ್ಯಗಳಲ್ಲಿ ಅತಿ ಹೆಚ್ಚು ಎಂದು ತಿಳಿದು ಬಂದಿದೆ.

ತಮಿಳುನಾಡಿನ ನಂತರ ಪಶ್ಚಿಮ ಬಂಗಾಳದಲ್ಲಿ 50 ಕೋಟಿ ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಅಸ್ಸಾಂನಲ್ಲಿ 27 ಕೋಟಿ ರೂ., ಕೇರಳದಲ್ಲಿ 22.58 ಕೋಟಿ ರೂ. ಮತ್ತು ಪುದುಚೇರಿಯಲ್ಲಿ 5.52 ಕೋಟಿ ರೂ. ವಶಕ್ಕೆ ಪಡೆಯಲಾಗಿದೆ.

ತಮಿಳುನಾಡಿನಲ್ಲಿ ನಗದು ಜೊತೆಗೆ, 176.46 ಕೋಟಿ ಮೌಲ್ಯದ ಚಿನ್ನವನ್ನೂ ಚುನಾವಣೆಯ ಸಮಯದಲ್ಲಿ ವಶಪಡಿಸಿಕೊಳ್ಳಲಾಗಿದೆ. ವರದಿಯ ಪ್ರಕಾರ, ಕೇರಳದಲ್ಲಿ 50 ಕೋಟಿ ರೂ, ಪುದುಚೇರಿದಲ್ಲಿ 27.42 ಕೋಟಿ ರೂ, ಪಶ್ಚಿಮ ಬಂಗಾಳದಲ್ಲಿ 12.07 ಕೋಟಿ ರೂ ಮತ್ತು ಅಸ್ಸಾಂನಲ್ಲಿ 3.69 ಕೋಟಿ ರೂ. ಮೌಲ್ಯದ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ.

ಅಸ್ಸಾಂನಲ್ಲಿ  ಮದ್ಯಕ್ಕೆ ಹೆಚ್ಚು ಬೇಡಿಕೆ:

ಈ ಚುನಾವಣಾ ಸಮಯದಲ್ಲಿ ಹೆಚ್ಚು ಮದ್ಯ ವಶಪಡಿಸಿಳ್ಳಲಾದ ರಾಜ್ಯಗಳ ಪಟ್ಟಿಯಲ್ಲಿ ಅಸ್ಸಾಂ ಅಗ್ರಸ್ಥಾನದಲ್ಲಿದೆ. ಅಸ್ಸಾಂನಲ್ಲಿ ಏಪ್ರಿಲ್ 6 ರಂದು ಅಂತಿಮ ಹಂತದ ಚುನಾವಣೆ ವೇಳೆಗೆ 41.97 ಕೋಟಿ ರೂ.ಗಳ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ.

ಎರಡನೇ ಸ್ಥಾನದಲ್ಲಿ ಪಶ್ಚಿಮ ಬಂಗಾಳವಿದ್ದು, ಅಲ್ಲಿ 30 ಕೋಟಿ ರೂಪಾಯಿ ಮೌಲ್ಯದ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ; ತಮಿಳುನಾಡು (5.27 ಕೋಟಿ ರೂ.), ಕೇರಳ (5.16 ಕೋಟಿ ರೂ.) ಮತ್ತು ಪುದುಚೇರಿಯಲ್ಲಿ 70 ಲಕ್ಷ ರೂ. ಮೌಲ್ಯದ ಮದ್ಯ ವಶಕ್ಕೆ ಸಿಕ್ಕಿದೆ.

ತಮಿಳುನಾಡು ಅತ್ಯಂತ ಕೆಟ್ಟ ಅಪರಾಧಿ

ಚುನಾವಣೆಯ ಸಮಯದಲ್ಲಿ ಅಕ್ರಮ ಹಣದ ಹರಿವಿನ ವಿಷಯದಲ್ಲಿ ಅತ್ಯಂತ ಕೆಟ್ಟ ಅಪರಾಧಿ ತಮಿಳುನಾಡು ಎಂದು ವರದಿ ಹೇಳುತ್ತದೆ.

ತಮಿಳುನಾಡಿನಲ್ಲಿ ಏಪ್ರಿಲ್ 6 ರಂದು ಒಂದೇ ಹಂತದಲ್ಲಿ ಮತದಾನ ನಡೆಯಿತು. ಆದರೆ ಆ ಹೊತ್ತಿಗೆ ಒಟ್ಟು 446 ಕೋಟಿ ರೂ. ಮೌಲ್ಯದ ಅಕ್ರಮ ಹಣ ಮತ್ತು ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂಗಾಳದಲ್ಲಿ  300 ಕೋಟಿ ರೂ.ಗಳ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದ್ದು, 2ನೇ ಸ್ಥಾನದಲ್ಲಿದೆ. ನಂತರದ ಸ್ಥಾನದಲ್ಲಿ ಅಸ್ಸಾಂ (122.34 ಕೋಟಿ ರೂ.), ಕೇರಳ (84.91 ಕೋಟಿ ರೂ.) ಮತ್ತು ಪುದುಚೇರಿ (36.95 ಕೋಟಿ ರೂ.) ಇವೆ.

ಈ ನಾಲ್ಕು ರಾಜ್ಯಗಳು ಮತ್ತು ಪುದುಚೇರಿಯಲ್ಲಿ 2016 ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಒಟ್ಟು 225.77 ಕೋಟಿ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಅದು ಈಗ ಸುಮಾರು ನಾಲ್ಕು ಪಟ್ಟು ಏರಿಕೆಯಾಗಿ ಸುಮಾರು 1,000 ಕೋಟಿ ರೂ.ಗೆ ಏರಿದೆ. ಅದೂ ಪಶ್ಚಿಮ ಬಂಗಾಳದಲ್ಲಿ ಇದೂವರೆಗೆ ಮೂರು ಹಂತದ ಚುನಾವಣೆಯ ವೇಳೆಯಲ್ಲಿ ಮಾತ್ರ.

ಮೂಲ: ದಿ ಪ್ರಿಂಟ್

ಕನ್ನಡಕ್ಕೆ: ಸೋಮಶೇಖರ್‌ ಚಲ್ಯ


ಇದನ್ನೂ ಓದಿ: ಕೇರಳ ಚುನಾವಣೆ: ಸಿಪಿಎಂ 80-85 ಸ್ಥಾನಗಳನ್ನು ಗೆಲ್ಲಲಿದೆ ಎಂದು ಪಕ್ಷ ಅಂದಾಜು!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights