ಮತ್ತೆ ಶುರುವಾದ ಆಪರೇಷನ್ – ಪುಷ್ಟಿ ನೀಡಿದ ಬಿಜೆಪಿ ಶಾಸಕರು – ಸುಳಿವು ಕೊಟ್ಟ ಹೆಚ್.ಡಿ.ಕೆ
ರಾಜ್ಯ ರಾಜಕೀಯದಲ್ಲಿ ಮತ್ತೆ ಆಪರೇಷನ್ ಗುಲ್ಲೆದ್ದಿದೆ. ಇದಕ್ಕೆ ಬಿಜೆಪಿ ಶಾಸಕರು ಪುಷ್ಠಿನೀಡಿದ್ದು ಹೆಚ್.ಡಿ ಕುಮಾರಸ್ವಾಮಿ ಇದರ ಬಗ್ಗೆ ಸುಳಿವು ಕೊಟ್ಟಿದ್ದಾರೆ.
ಹೌದು.. ಇಂದು ಹಾಸನದಲ್ಲಿ ಮಾತನಾಡಿದ ಹೆಚ್.ಡಿ. ಕುಮಾರಸ್ವಾಮಿ, 15 ರಿಂದ 20 ಶಾಸಕರು ಬಿಜೆಪಿ ಬಿಡಲು ರೆಡಿ ಇದ್ದಾರೆಂದು ಹೇಳಿವ ಮೂಲಕ ಹೊಸ ಬಾಂಬ್ ಸಿಡಿಸಿದ್ದು ರಾಜಕೀಯ ವಲಯದಲ್ಲಿ ಹೊಸ ಸಂಚಲನವನ್ನೇ ಮೂಡಿಸಿದ್ದಾರೆ.
“ನನಗೆ ಬಂದಿರುವ ಮಾಹಿತಿ ಪ್ರಕಾರ ಬಿಜೆಪಿಯಲ್ಲೂ 15 ರಿಂದ 20 ಅತೃಪ್ತ ಶಾಸಕರು ಇದ್ದಾರೆ. ಆದರೆ ನಾನು ಅವರನ್ನ ಕರೆದುಕೊಂಡು ಸರ್ಕಾರ ಕಟ್ಟಿಕೊಳ್ಳುವಂತಹ ಕೆಲಸ ಮಾಡುವುದಿಲ್ಲ. ಪಾಪ ಯಡಿಯೂರಪ್ಪ ನವರು ಕಷ್ಟಪಟ್ಟು ಅಧಿಕಾರ ಪಡೆದುಕೊಂಡಿದ್ದಾರೆ ಸಂತೋಷ ನನಗಿದೆ. ಅವರೇ ಅಧಿಕಾರದಲ್ಲಿ ಇರಲಿ. ನನಗೆ ರಾಜ್ಯದ ಅಭಿವೃದ್ಧಿ ಮುಖ್ಯ. ಯಡಿಯೂರಪ್ಪನಂತೆ ಸರ್ಕಾರ ನಾನು ಸರ್ಕಾರ ನಿರ್ಮಾಣ ಮಾಡಲ್ಲ. ತುಂಬಾ ಕಷ್ಟ ಪಟ್ಟು ಅಧಿಕಾರಕ್ಕೆ ಬಂದಿದ್ದಾರೆ. ಒಳ್ಳೆ ಕೆಲಸ ಮಾಡಲಿ ಸಾಕು” ಎಂದು ಟಾಂಗ್ ಕೊಟ್ಟಿದ್ದಾರೆ.
ಹೆಚ್.ಡಿ ಕುಮಾರಸ್ವಾಮಿ ಹೇಳಿದ ಈ ಹೇಳಿಕೆ ಮತ್ತೆ ಆಪರೇಷನ್ ಮಾಡುವ ಸುಳಿವು ಕೊಟ್ಟಿದ್ದು, ಭಾರೀ ಕುತೂಹಲ ಕೆರಳಿಸಿದೆ.

