JNU ಹಿಂಸಾಚಾರದಲ್ಲಿದ್ದ ಹುಡುಗಿ ಗುರುತು ಪತ್ತೆ : ಆಕೆ ಬಗ್ಗೆ ಮಾಹಿತಿ ಇಲ್ಲಿದೆ…
ದೆಹಲಿಯ ಪ್ರತಿಷ್ಠಿತ ಜವಾಹರ್ ಲಾಲ್ ನೆಹರು ವಿಶ್ವವಿದ್ಯಾಲಯ(ಜೆಎನ್ ಯು)ದಲ್ಲಿ ಕಳೆದ ಭಾನುವಾರ ನಡೆದ ಗೂಂಡಾ ದಾಳಿ ವೇಳೆ ಕೈಯಲ್ಲಿ ಕೋಲು ಹಿಡಿದ ಮುಸುಕು ದಾರಿ ಹುಡುಗಿ ಗುರುತು ಪತ್ತೆಯಾಗಿದೆ.
ದೆಹಲಿ ಪೊಲೀಸರು ಈ ಹುಡುಗಿಯನ್ನು ಕೋಮಲ್ ಶರ್ಮಾ ಎಂದು ಗುರುತಿಸಿದ್ದಾರೆ. ಕೋಮಲ್ ಶರ್ಮಾ ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ. ಕೋಮಲ್ ಡಿಯುನಲ್ಲಿ ಎರಡನೇ ವರ್ಷದ ವಿದ್ಯಾರ್ಥಿನಿಯಾಗಿದ್ದು, ಈಗ ಪೊಲೀಸರು ಈ ಹುಡುಗಿಯನ್ನು ಹುಡುಕುತ್ತಿದ್ದಾರೆ.
ಈ ಹಿಂದೆ ಮಾಧ್ಯಮವೊಂದು ನಡೆಸಿದ ಕುಟುಕು ಕಾರ್ಯಾಚರಣೆಯಲ್ಲಿ ಕೋಲು ಹಿಡಿದಿದ್ದ ಹುಡುಗಿ ಗುರುತು ಪತ್ತೆಯಾಗಿತ್ತು. ಮಾಧ್ಯಮ ಹುಡುಗಿ ಹೆಸರು ಕೋಮಲ್ ಶರ್ಮಾ, ದೆಹಲಿ ವಿಶ್ವವಿದ್ಯಾನಿಲಯದ ವಿದ್ಯಾರ್ಥಿನಿ ಹಾಗೂ ಎಬಿವಿಪಿ ಕಾರ್ಯಕರ್ತೆ ಎಂದು ಮಾಧ್ಯಮಗಳು ಹೇಳಿದ್ದವು. ಸಾಮಾಜಿಕ ಜಾಲತಾಣ ಬಳಕೆದಾರರು ಹಾಗೂ ಕೋಮಲ್ ಶರ್ಮಾ ಆಪ್ತರು ಜನವರಿ 5ರಂದು ಕೋಮಲ್ ಶರ್ಮಾ ಜೆ ಎನ್ ಯುನಲ್ಲಿದ್ದರು ಎಂದು ಖಚಿತಪಡಿಸಿದ್ದರು.
ಜೆಎನ್‌ಯುನಲ್ಲಿ ಹಿಂಸಾಚಾರ ಭುಗಿಲೆದ್ದ ನಂತರ ದೆಹಲಿ ಪೊಲೀಸರು ಶುಕ್ರವಾರ ಒಂಬತ್ತು ಮಂದಿ ಶಂಕಿತರ ಚಿತ್ರಗಳನ್ನು ಬಿಡುಗಡೆ ಮಾಡಿದ್ದಾರೆ. ಈ ಶಂಕಿತರಲ್ಲಿ ಜೆಎನ್‌ಯುಎಸ್‌ಯು ಅಧ್ಯಕ್ಷ ಐಶಿ ಘೋಷ್ ಕೂಡ ಇದ್ದಾರೆ ಎಂದು ಪೊಲೀಸರು ಹೇಳುತ್ತಾರೆ.

