ಶಿವಸೇನೆ ಮೈತ್ರಿದ್ರೋಹಕ್ಕೆ ತಕ್ಕ ಪಾಠ – ಡಿಸಿಎಂ : ಕೆ.‌ಎಸ್. ಈಶ್ವರಪ್ಪ, ಜಗದೀಶ ಶೆಟ್ಟರ್ ಪ್ರತಿಕ್ರಿಯೆ ಏನು..?

ಶಿವಸೇನೆ ಮೈತ್ರಿದ್ರೋಹಕ್ಕೆ ಇದು ತಕ್ಜ ಪಾಠ ಎಂದು ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ಡಿಸಿಎಂ ಲಕ್ಷ್ನಣ ಸವದಿ ಹೇಳಿದ್ದಾರೆ.

ಮಹಾರಾಷ್ಟ್ರದಲ್ಲಿ ಬಿಜೆಪಿ-ಎನ್ ಸಿ ಪಿ ಸಮ್ಮಿಶ್ರ ಸರಕಾರ ರಚನೆ ವಿಚಾರವಾಗಿ ಮಾತನಾಡಿದ ಡಿಸಿಎಂ, ಮೈತ್ರಿಧರ್ಮ ಪಾಲನೆ ಮಾಡುವಲ್ಲಿ ಶಿವಸೇನೆ ತಪ್ಪಿತು. ಬಿಜೆಪಿ ಕಾರ್ಯಕರ್ತರ ವಿರೋಧದ ನಡುವೆಯೂ ಬಿಜೆಪಿ ಶಿವಸೇನೆ ಜೊತೆ ಸ್ಥಾನ ಹೊಂದಾಣಿಕೆ ಮಾಡಿಕೊಂಡಿತ್ತು. ಫಲಿತಂಶ ಪ್ರಕಟವಾಗುತ್ತಲೇ ಶಿವಸೇನೆ ಬೇರೆ ಧ್ವನಿ ಎತ್ತಿತು. ನಾವು ಎಲ್ಲ ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದರೆ ಬಹುಮತ ಬರುತ್ತಿತ್ತು. ಆದರೆ, ಮೈತ್ರಿಧರ್ಮ ಪಾಲನೆಗೆ ಶಿವಸೇನೆ ಜೊತೆ ಮೈತ್ರಿ‌ ಮಾಡಿಕೊಂಡಿದ್ದೇವು. ಆದರೆ, ಶಿವಸೇನೆ ಎನ್ ಸಿ ಪಿ ಮತ್ತು ಕಾಂಗ್ರೆಸ್ ಜೊತೆ ಸರಕಾರ ರಚನೆಗೆ ಮುಂದಾಗಿತ್ತು. ಅಲ್ಲಿ ಮೂವರು ಸೇರಿ ಸರಕಾರ ಮಾಡೋಕೆ‌ ಹೋಗಿದ್ರು. ಅದು ತುಂಬಾ ಕಠಿಣ ಇತ್ತು. ಹೀಗಾಗಿ ಬಿಜೆಪಿ-ಎನ್.ಸಿ.ಪಿ ಸೇರಿ‌ ಸರಕಾರ ಮಾಡಿದ್ದೇವೆ. ಐದು ವರ್ಷದವರೆಗೂ ಈಗಿರುವಂತೆಯೇ ಸಿಎಂ-ಡಿಸಿಎಂ ಇರ್ತಾರೆ. ಅದೇ ರೀತಿಯಲ್ಲಿ ಅಧಿಕಾರ ಹಂಚಿಕೆ ಆಗಿದೆ. ಶಿವಸೇನೆಯ ದುರಾಸೆಗೆ ಈಗ ಪ್ರತಿಫಲ ಸಿಕ್ಕಿದೆ ಎಂದರು.

ಕೆ.‌ಎಸ್. ಈಶ್ವರಪ್ಪ :- 

ಮಹಾರಾಷ್ಟ್ರ ಸರಕಾರ ರಚನೆ ವಿಚಾರವಾಗಿ ಮಾತನಾಡಿ ಸಚಿವ ಕೆ.‌ಎಸ್. ಈಶ್ವರಪ್ಪ,  ಅಲ್ಲಿ ಕಾಂಗ್ರೆಸ್ ಕುತಂತ್ರ ಮಾಡಿತ್ತು. ಶಿವಸೇನೆ ಹಿಂದುತ್ವವಾದಿ ಎನ್ನುತ್ತ ಅವರ ಜೊತೆ ಸರಕಾರ ಮಾಡಲು ಹೊರಟಿದ್ದರು. ಕಾಂಗ್ರೆಸ್ಸಿನ ದ್ವಿಮುಖ ನಿಲುವು ಅಲ್ಲಿ ಸ್ಪಷ್ಟವಾಗಿತ್ತು. ಚುನಾವಣೆ ಸಂದರ್ಭದಲ್ಲಿಯೇ ಯಾರಿಗೆ ಬಹುಮತ ಇದೆಯೋ ಅವರೇ ಸಿಎಂ ಎಂದು ನಿರ್ಧಾರವಾಗಿತ್ತು. ಆದರೆ ಚುನಾವಣೆ ಬಳಿಕ ಶಿವಸೇನೆ ನಿಲುವು ಬದಲಿಸಿತ್ತು. ಪೊಲಿಟಿಕಲ್ ಸರ್ಜರಿ ರಾತ್ರೋ ರಾತ್ರಿಯೇ ಆಗಬೇಕಿಲ್ಲ. ಬೆಳಗ್ಗೆಯೂ ಆಗುತ್ತೆ. ಯಾವಾಗ ಬೇಕಾದ್ರೂ ಆಗುತ್ತೆ. ಮಹಾರಾಷ್ಟ್ರ ಸರಕಾರಕ್ಕೆ ಶೀಘ್ರವೇ ಪ್ರಧಾನಿ ಅಭಿನಂದಿಸಿದ್ದ ವಿಚಾರದಲ್ಲಿ ಮಹಾರಾಷ್ಟ್ರ ಪರಿಸ್ಥಿತಿಗೂ ಕರ್ನಾಟಕ ಪರಿಸ್ಥಿತಿಗೂ ವ್ಯತ್ಯಾಸ ಇದೆ ಎಂದರು.

ಜಗದೀಶ ಶೆಟ್ಟರ್ :-

ಮಹಾರಾಷ್ಟ್ರದಲ್ಲಿ ಸರಕಾರ ರಚನೆ ವಿಚಾರಕ್ಕೆ ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ಸಚಿವ ಜಗದೀಶ ಶೆಟ್ಟರ್ ಪ್ರತಿಕ್ರಿಯಿಸಿದ್ದಾರೆ.  ಅಲ್ಲಿ ಜನರ ವಿರುದ್ಧವಾದ ಸರಕಾರ ಮಾಡಲು ಹೊರಟಿದ್ದರು. ಅಂಥದ್ದೆ ಸಮ್ಮಿಶ್ರ ಸರಕಾರ. ಅದು ಎನ್ ಸಿ ಪಿ ಗೆ ಅನಿಸಿತ್ತು ಅದಕ್ಕೆ ಬೆಂಬಲ ನೀಡಿತ್ತು. ಸಾವರಕರ ಬಗ್ಗೆ ಕಾಂಗ್ರೆಸ್ ಅಪಸ್ವರ ಎತ್ತಿತ್ತು. ಆದರೆ ಅವರೊಂದಿಗೆ ಶಿವಸೇನೆ ಅಧಿಕಾರ ಮಾಡಲು ಹೊರಟಿತ್ತು. ಕಡಿಮೆ ಸ್ಥಾನ ಇಟ್ಟುಕೊಂಡು ಶಿವಸೇನೆಗೆ ಸಿಎಂ ಸ್ಥಾನ ಕೇಳುವ ನೈತಿಕ ಹಕ್ಕು ಇರಲಿಲ್ಲ. ಶಿವಸೇನೆ ಲಾಲಸೆಯಿಂದ ತನ್ನ ಇತಿಮಿತಿ ಮೀರಿ ವರ್ತಿಸುತ್ತಿತ್ತ. ಅದಕ್ಕೆ ತಕ್ಕ ಪಾಠ ಕಲಿಸಿದಂತಾಗಿದೆ ೆಂದರಯು

ಪ್ರಧಾನಿ ಮಹಾರಾಷ್ಟ್ರ ಸರಕಾರ ರಚನೆಗೆ ಮಾತ್ರ ಟ್ವೀಟ್ ಮೂಲಕ ಶುಭಾಶಯ ಹೇಳಿದ ವಿಚಾರದಲ್ಲಿ ನಮ್ಮ ಸರಕಾರ ರಚನೆಯಾದಗಲೂ ಅಭಿನಂದನೆ ಸಲ್ಲಿಸಿದ್ದರು. ಟ್ವೀಟ್ ಮೂಲಕವೇ ಹೇಳಬೇಕು ಅಂತಿಲ್ಲ ಎಂದರು.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights