ಸಿಎಂ ಬಿಎಸ್ ವೈ ಭಾಗವಹಿಸುವ ಸಮಾರಂಭಕ್ಕೆ ಬಂತು ಬುಸ್… ಬುಸ್… ನಾಗ..!
ಸಿಎಮ್ ಬಿ.ಎಸ್. ಯಡಿಯೂರಪ್ಪನವರು ಭಾಗವಹಿಸುವ ಸಮಾರಂಭಕ್ಕೆ ನಾಗರಾಜ ಆಗಮಿಸಿ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.
ಹುಬ್ಬಳ್ಳಿಯ ಚೇತನಾ ಕಾಲೇಜಿನಲ್ಲಿ ಇಂದು ನಡೆಯಲಿರುವ ಸಮಾರಂಭದಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ ಭಾಗವಹಿಸಲಿದ್ದಾರೆ. ಆದರೆ ಇದೇ ವೇದಿಕೆಯಲ್ಲಿ ನಾಗರಾಜ ಪ್ರತ್ಯಕ್ಷನಾಗಿದ್ದಾನೆ.
ಹುಬ್ಬಳ್ಳಿಯ ಕಾಡಸಿದ್ದೇಶ್ವರ ಕಾಲೇಜಿನಿಂದ ತೋಳನಕೆರೆಯವರೆಗೆ ನಿರ್ಮಿಸಲಾಗಿರುವ ಟೆಂಡರ್ ಶ್ಯೂರ್ ರಸ್ತೆ ಲೋಕಾರ್ಪಣೆ ಸಮಾರಂಭಕ್ಕೆ ನಿರ್ಮಿಸಲಾಗಿರುವ ವೇದಿಕೆ ಬಳಿ ಉರಗ ಪ್ರತ್ಯಕ್ಷವಾಗಿದೆ. ಈ ವೇದಿಕೆಗೆ ಹಾಕಿದ್ದ ಡಯಾಸ್ನಲ್ಲಿ ಕೆರೆ ಹಾವು ಸೇರಿಕೊಂಡಿತ್ತು. ಕಾರ್ಯಕ್ರಮ ಆಯೋಜಕರು ಉರಗ ತಜ್ಞರನ್ನು ಕರೆಸಿ ಹಾವನ್ನು ಹಿಡಿಸಿದ್ದಾರೆ.
ಇಂದು ಸಂಜೆ ಸಿಎಮ್ ಬಿ.ಎಸ್. ಯಡಿಯೂರಪ್ಪ ರಸ್ತೆಯನ್ನು ಲೋಕಾರ್ಪಣೆ ಮಾಡಲಿದ್ದಾರೆ.


