2 ವರ್ಷದ ದೊಡ್ಡಪ್ಪ ಅಪ್ಪ ಶರಣಬಸವೇಶ್ವರರ ಉತ್ತರಾಧಿಕಾರಿ – ಮಠಾಧೀಶರ ಸಮ್ಮುಖದಲ್ಲಿ ಪಟ್ಟಾಭಿಷೇಕ
ಕಲಬುರ್ಗಿಯ ಆರಾಧ್ಯದೈವ ಶರಣಬಸವೇಶ್ವರರ ಸಂಸ್ಥಾನದ ಉತ್ತರಾಧಿಕಾರಿಯಾಗಿ ದೊಡ್ಡಪ್ಪ ಅಪ್ಪರನ್ನು ನೇಮಕ ಮಾಡಲಾಗಿದೆ. ಎರಡು ವರ್ಷ ವಯಸ್ಸಿನ ದೊಡ್ಡಪ್ಪ ಅಪ್ಪ ಅವರನ್ನು ಸಂಸ್ಥಾನದ 9ನೇ ಪೀಠಾಧಿಪತಿಯಾಗಿ ಘೋಷಿಸಲಾಗಿದೆ. ವೀರಶೈವ ವಿಧಿ-ವಿಧಾನಗಳ ಪ್ರಕಾರ ದೊಡ್ಡಪ್ಪ ಅಪ್ಪಾಗೆ ದೀಕ್ಷೆ ನೀಡಲಾಯಿತು. ಶರಣಬಸವೇಶ್ವರ ಸಂಸ್ಥಾನದ 8ನೇ ಪೀಠಾಧಿಪತಿ ಶರಣಬಸವಪ್ಪ ಅಪ್ಪಾ ಅವರಿಗೆ 82 ವಯಸ್ಸಿನಲ್ಲಿ ಹುಟ್ಟಿಗ ಮಗನಿಗೆ ಇದೀಗ ಪಟ್ಟಾಭಿಷೇಕ ಮಾಡಲಾಗಿದೆ.

ಶರಣಬಸವೇಶ್ವರ ಭಾವೈಕ್ಯತೆಯ ಹರಿಕಾರ. ಮನುಷ್ಯರ ಜೊತೆಗೆ ಪಶು, ಪಕ್ಷಿಗಳಿಗೂ ದಾಸೋಹ ಮಾಡುವ ಮೂಲಕ ಮಹಾ ದಾಸೋಹಿ ಎನಿಸಿಕೊಂಡವರು. ಎರಡು ಶತಮಾನಗಳ ಹಿಂದೆ ಕಲಬುರ್ಗಿ ಪರಿಸರದಲ್ಲಿ ಬಾಳಿ ಬದುಕಿದ ಶರಣಬಸವೇಶ್ವರರು, ಭಾವೈಕ್ಯತೆ, ಭಾತೃತ್ವದ ಬೀಜ ಬಿತ್ತಿ, ಹೆಮ್ಮರವಾಗಿ ಬೆಳೆಯಲು ಶ್ರಮಿಸಿದ್ದರು. ಇದೇ ಕಾರಣಕ್ಕೆ ಶರಣಬಸವೇಶ್ವರರ ದೇವಸ್ಥಾನಕ್ಕೆ ಹಿಂದೂ-ಮುಸ್ಲಿಂ, ಕ್ರೈಸ್ತ ಎನ್ನದೆ ಎಲ್ಲ ಧರ್ಮೀಯರೂ ನಡೆದುಕೊಳ್ಳುತ್ತಾರೆ. ಇಂತಹ ಭಾವೈಕ್ಯತೆಯ ತಾಣವಾಗಿರೋ ಶರಣಬಸವೇಶ್ವರ ಸಂಸ್ಥಾನದಲ್ಲಿ ಇದೀಗ ಸಂಭ್ರಮದ ವಾತಾವರಣ ನೆಲೆ ಮಾಡಿದೆ. ಅದಕ್ಕೆ ಮುಖ್ಯ ಕಾರಣ ಸಂಸ್ಥಾನದ 9ನೇ ಉತ್ತರಾಧಿಕಾರಿ ನೇಮಕ. ಕಲಬುರ್ಗಿಯ ಆರಾಧ್ಯ ದೈವ ಎನಿಸಿಸಕೊಂಡ ಶರಣಬಸವೇಶ್ವರ ಸಂಸ್ಥಾನದ ಉತ್ತರಾಧಿಕಾರಿಯನ್ನಾಗಿ ಚಿರಂಜೀವಿ ದೊಡ್ಡಪ್ಪ ಅಪ್ಪ ಅವರನ್ನು ನೇಮಕ ಮಾಡಲಾಗಿದೆ.

ಶರಣಬಸವೇಶ್ವರ ಸಂಸ್ಥಾನದ 8ನೇ ಪೀಠಾಧಿಪತಿ ಡಾ.ಶರಣಬಸವಪ್ಪ ಅವರಿಗೆ 82ನೇ ವಯಸ್ಸಿನಲ್ಲಿ ಹುಟ್ಟಿದ ದೊಡ್ಡಪ್ಪ ಅಪ್ಪ, ಅವರ ಉತ್ತರಾಧಿಕಾರಿಯಾಗಿದ್ದಾರೆ. ಶರಣಬಸವೇಶ್ವರರ ಜೀವಂತವಿದ್ದಾಗ ಪೂಜೆ ಮಾಡುತ್ತಿದ್ದ ಕೋಣೆಯಲ್ಲಿಯೇ ಪಟ್ಟಾಭಿಷೇಕ ನೆರವೇರಿಸಾಲಿಯಿತು. ವೀರಶೈವ ವಿಧಿ ವಿಧಾನಗಳ ಪ್ರಕಾರ ದೊಡ್ಡಪ್ಪ ಅಪ್ಪ ಅವರಿಗೆ ದೀಕ್ಷೆ ನೀಡಲಾಯಿತು. 8ನೇ ಪೀಠಾಧಿಪತಿ ಡಾ.ಶರಣಬಸವಪ್ಪ ಅಪ್ಪ ಸಮ್ಮುಖದಲ್ಲಿ ದೊಡ್ಡಪ್ಪ ಅಪ್ಪಗೆ ದೀಕ್ಷೆ ನೀಡಲಾಯಿತು. ಹಾರಕೂಡ ಶ್ರೀ, ಶ್ರೀಶೈಲ ಸಾರಂಗಧರ ಜಗದ್ಗುರು, ಚವಡಾಪುರ ಶ್ರೀ, ಕಟ್ಟಿಮನಿ ಹಿರೇಮಠಶ್ರೀ ಮತ್ತಿತರ ಸ್ವಾಮೀಜಿಗಳ ನೇತೃತ್ವದಲ್ಲಿ ದೀಕ್ಷಾ ಕಾರ್ಯ ಪೂರ್ಣಗೊಳಿಸಲಾಯಿತು.

ಈ ವೇಳೆ ಮಾತನಾಡಿದ ಶ್ರೀಶೈಲ ಸಾರಂಗಧರ ದೇಶೀಕೇಂದ್ರ ಸ್ವಾಮೀಜಿ, ಇದೊಂದು ಅವಿಸ್ಮರಣೀಯ ಕ್ಷಣ ಎಂದು ಬಣ್ಣಿಸಿದ್ದಾರೆ. ಇದೇ ವೇಳೆ ಮಾತನಾಡಿದ 8ನೇ ಪೀಠಾಧಿಪತಿ ಡಾ.ಶರಣಬಸವಪ್ಪ ಅಪ್ಪ, ಅಕ್ಷರ ದಾಸೋಹದ ಮೂಲಕ ಕಲಬುರ್ಗಿಯಲ್ಲಿ ಕ್ರಾಂತಿ ಮಾಡಿದ್ದ ದೊಡ್ಡಪ್ಪ ಅಪ್ಪ ಅವರೇ ತಮ್ಮ ಮಗನಾಗಿ ಹುಟ್ಟಿ ಬಂದಿದ್ದಾರೆ. ಅದೊಂದು ದೊಡ್ಡ ಪವಾಡವೆದೇ ಹೇಳಬಹುದು. ಚಿಕ್ಕ ವಯಸ್ಸಿನಲ್ಲಿಯೇ ಅವರು ಉತ್ತರಾಧಿಕಾರಿಯಾಗಿ ನೇಮಕಗೊಂಡಿದ್ದಾರೆ ಎಂದು ಪ್ರಕಟಿಸಿದರು.

ಧಾರ್ಮಿಕ ವಿಧಿವಿಧಾನ ಪೂರೈಕೆ ಜೊತೆಗೆ, ಕಾನೂನಿನ ಪ್ರಕಾರವೂ ಉತ್ತರಾಧಿಕಾರಿ ನೇಮಕ ಪ್ರಕ್ರಿಯೆ ನೆಡಯಿತು. ಉತ್ತರಾಧಿಕಾರಿ ನೇಮಕ ಪತ್ರಕ್ಕೆ 8ನೇ ಪೀಠಾಧಿಪತಿ ನೆರೆದ ಜನತೆಯ ಸಮ್ಮುಖದಲ್ಲಿ ಸಹಿ ಹಾಕಿದರು. ಈ ವೇಳೆ ವಿಧಾನ ಪರಿಷತ್ ಸದಸ್ಯರಾದ ಬಿ.ಜಿ.ಪಾಟೀಲ, ತಿಪ್ಪಣ್ಣಪ್ಪ ಕಮಕನೂರ, ಮಾಜಿ ಎಂ.ಎಲ್.ಸಿ. ಶಶಿಲ್ ನಮೋಶಿ ಮತ್ತಿತರರು ಉಪಸ್ಥಿತಿರಿದ್ದರು. ಉತ್ತರಾಧಿಕಾರಿ ನೇಮಕದ ಹಿನ್ನೆಲೆಯಲ್ಲಿ ಕಲ್ಯಾಣ ಕರ್ನಾಟಕದ ಜನತೆ ಹರ್ಷ ವ್ಯಕ್ತಪಡಿ

