ಹೊಸ ವರ್ಷದ ಆಚರಣೆಯಲ್ಲಿರುವವರಿಗೆ ಸಿಹಿ ಸುದ್ದಿ : ಮೆಟ್ರೋ ಅವಧಿ ಹೆಚ್ಚಳ
ಹೊಸ ವರ್ಷ ಬಂತು ಅಂದ್ರೆ ಸಾಕು ಎಲ್ಲೆಡೆ ಸಂಭ್ರಮಾಚರಣೆ ಮುಗಿಲು ಮುಟ್ಟಿರುತ್ತದೆ. ಇದು ಬೆಂಗಳೂರಿಗೂ ಕೂಡ ಹೊರತಾಗಿಲ್ಲ. ಹೊಸ ವರ್ಷದ ಸಂಭ್ರಮಾಚರಣೆಯಲ್ಲಿರುವ ಎಲ್ಲರ ಅನುಕೂಲಕ್ಕಾಗಿ ನಮ್ಮ ಮೆಟ್ರೋ ಅವಧಿಯನ್ನ ರಾತ್ರಿ 2 ಗಂಟೆಯವರೆಗೆ ಹೆಚ್ಚಿಸಲಾಗಿದೆ.
ಹೌದು… 31 ಡಿಸೆಂಬರ್ ರಾತ್ರಿಯಿಂದ ಜನ ಎಂಜಿ ರೋಡ್, ಬ್ರಿಗೇಡ್ ರೋಡ್ ಅಂತ ಪ್ರತಿಷ್ಟಿತ ಬೀದಿಗಳಲ್ಲಿ, ಸ್ಥಳಗಳಲ್ಲಿ ಹೊಸ ವರ್ಷದ ಆಚರಣೆಗೆ ಸೇರ್ತಾರೆ. ಹೀಗೆ ಸೇರಿ ಪಾರ್ಟಿ ಮಾಡುವ ಜನರನ್ನ ಸುರಕ್ಷತವಾಗಿ ಮನೆಗಳಿಗೆ ತಲುಪಿಸಲು ಈ ಕ್ರಮ ಜಾರಿಮಾಡಲಾಗಿದೆ.
ಪಾರ್ಟಿ ಮಾಡಿ ಕುಡಿದುಬರುವವರಿಗೂ ಕೂಡ ಮೆಟ್ರೋದಲ್ಲಿ ಪ್ರವೇಶವಿದೆ ಎನ್ನಲಾಗುತ್ತಿದೆ. ಆದರೆ ಕುಡಿದು ಬಂದವರು ಅನುಚಿತವಾಗಿ ಮೆಟ್ರೋದಲ್ಲಿ ವರ್ತಿಸುವಂತಿಲ್ಲ. ಹಾಗೇನಾದರೂ ಕಂಡು ಬಂದರೆ ಅವರ ವಿರುದ್ಧ ಕ್ರಮಕೈಗೊಳ್ಳಲಾಗುವುದು.
ಜೊತೆಗೆ ರಾತ್ರಿ ಪಾರ್ಟಿ ತೆರಳುವವರಿಗೆ ಈ ಬಾರಿ ಪೇಪರ್ ಟಿಕೆಟ್ ನೀಡಲು ಬಿಎಂಆರ್ಸಿಎಲ್ ನಿರ್ಧರಿಸಿದೆ. ಹೆಚ್ಚಿನ ಪ್ರಯಾಣಿಕರು ಒಮ್ಮೆಲೇ ಸಂಚರಿಸುವುದರಿಂದ ಟೋಕನ್ ನೀಡಲು ಸಮಸ್ಯೆಯಾಗುತ್ತದೆ ಎಂದು ಈ ರೀತಿ ಮಾಡಲಾಗುತ್ತದೆ. ಡಿ. 31ರಂದು ಸಂಜೆ 4 ಗಂಟೆಗೆ ಎಲ್ಲ ಮೆಟ್ರೋ ಸ್ಟೇಷನ್ ನಲ್ಲಿ ಪೇಪರ್ ಟಿಕೆಟ್ ಕೊಡಲಾಗುತ್ತದೆ.

