ಮೈಸೂರು ವಿವಿಯಲ್ಲಿ ಫ್ರೀ ಕಾಶ್ಮಿರ್ ಪ್ಲೆಕಾರ್ಡ್ ಪ್ರದರ್ಶನ ಪ್ರಕರಣ : ಪ್ರತಿಭಟನಾ ಆಯೋಜಕರಿಗೆ ನೋಟಿಸ್..
ಮೈಸೂರು ವಿವಿಯಲ್ಲಿ ಫ್ರೀ ಕಾಶ್ಮಿರ್ ಪ್ಲೆಕಾರ್ಡ್ ಪ್ರದರ್ಶನ ಪ್ರಕರಣ ವಿಚಾರಕ್ಕೆ ಮೈಸೂರು ವಿವಿಯಿಂದ ಪ್ರತಿಭಟನಾ ಆಯೋಜಕರಿಗೆ ನೋಟಿಸ್ ಜಾರಿ ಮಾಡಲಾಗಿದೆ.
ಮೈಸೂರು ವಿವಿ ರಿಜಿಸ್ಟರ್ ಆರ್.ಶಿವಪ್ಪರಿಂದ ಕಾರಣ ಕೇಳಿ ದಲಿತ ವಿದ್ಯಾರ್ಥಿ ಸಂಘಟನೆ ಅಧ್ಯಕ್ಷರಿಗೆ ಹಾಗೂ ಸಂಶೋಧಕರ ಸಂಘದ ಅಧ್ಯಕ್ಷರಿಗೆ ನೋಟಿಸ್ ಜಾರಿ ಮಾಡಲಾಗಿದೆ.
ಜೊತೆಗೆ 124 ಎ ಸೆಕ್ಷನ್ ಅಡಿ ಜಯಲಕ್ಷೀಪುರಂ ಪೊಲೀಸ್ ಠಾಣೆ ಸ್ವಯಂಪ್ರೇರೇಪಿತವಾಗಿ ದೂರು ದಾಖಲಿಸಿಕೊಂಡು ವಿಚಾರಣೆ ನಡೆಸಿದೆ. ನಿನ್ನೆ ಮೈಸೂರಿನಲ್ಲಿ ಧರಣಿ ವೇಳೆ ಉದ್ದೇಶವಿಲ್ಲದ ನಾಮಫಲಕ ಹಿಡಿದಿದ್ದರ ಮಾಹಿತಿ ಕೇಳಲಾಗಿದೆ. ರಾಜ್ಯಪಾಲ ವಿ.ಆರ್ . ವಾಲಾ ಮೈಸೂರಿ ವಿವಿಯಿಂದ ವರದಿ ಕೇಳಿದ್ದಾರೆ.
ಮೈಸೂರು ವಿವಿಯಿಂದ ಪ್ರತ್ಯೇಕ ದೂರು ನೀಡಲಾಗುವುದು ಎನ್ನುವ ಮಾಹಿತಿ ಕೂಡ ಲಭ್ಯವಾಗಿದೆ.


