ಸಚಿವ ಸ್ಥಾನದ ಆಕಾಂಕ್ಷೆಗಳ ಬಗ್ಗೆ ಮಾಜಿ ಸಚಿವ ಸಾ.ರಾ ಮಹೇಶ್ ಮರುಕದ ವ್ಯಂಗ್ಯ…
ನಮ್ಮ ಸರ್ಕಾರ ಬೀಳಿಸಿ ಹೋದವರಿಗೆ ಇಂತಹ ಪರಿಸ್ಥಿತಿ ಬರಬಾರದಾಗಿತ್ತು ಎಂದು ಸಚಿವ ಸ್ಥಾನದ ಆಕಾಂಕ್ಷೆಗಳ ಬಗ್ಗೆ ಮಾಜಿ ಸಚಿವ ಸಾ.ರಾ ಮಹೇಶ್ ಮರುಕದ ವ್ಯಂಗ್ಯವಾಡಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಸಾ.ರಾ ಮಹೇಶ್, ಕುಮಾರಸ್ವಾಮಿ ಸರ್ಕಾರದಲ್ಲಿ ತೃಪ್ತಿ ಇಲ್ಲ ಎಂದು ಹೋಗಿದ್ದರು. ಅವರಿಗೆ ಈ ರಾಜ್ಯದ ಸಿಎಂ ಯಾವ ಯಾವ ರೀತಿ ತೃಪ್ತಿಪಡಿಸುತ್ತಾರೆ ಕಾದು ನೋಡುತ್ತಿದ್ದೇವೆ. ಮಾಧ್ಯಮದಲ್ಲಿ ಅವರ ಪರಿಸ್ಥಿತಿ ನೋಡಿ ಪಾಪಾ ಇಂತಹ ಪರಿಸ್ಥಿತಿ ಬರಬಾರದಿತ್ತು ಅನಿಸಿತು. ಯಾಕಾದರೂ ಇಂತಹ ಪರಿಸ್ಥಿತಿ ಬಂತೋ ಅಂತಾ ಬೇಸರವಾಯ್ತು ರಾಜ್ಯದ ಸಿಎಂ ಅವರನ್ನು ನೋಡಿ ಸಂಕಟ ಆಯ್ತು. ಇವರನ್ನು ನೋಡಿ ಸಂಕಟ ಜೊತೆ ಬೇಜಾರಾಯಿತು. ಆದಷ್ಟು ಬೇಗ ಇವರನ್ನು ಸಿಎಂ ತೃಪ್ತಿ ಪಡಿಸಲಿ. ಇವರೆಲ್ಲರನ್ನು ತೃಪ್ತಿಪಡಿಸುವ ಆ ಶಕ್ತಿಯನ್ನು ಆ ಭಗವಂತ ಸಿಎಂಗೆ ಕೊಡಲಿ. ಮೈಸೂರಿನಲ್ಲಿ ಮಾಜಿ ಸಚಿವ ಸಾ.ರಾ ಮಹೇಶ್ ವ್ಯಂಗ್ಯದ ಪ್ರಾರ್ಥನೆ ಮಾಡಿದ್ದಾರೆ. ಜನರಿಗೆ ಈಗ ಚುನಾವಣೆ ಬೇಕಿಲ್ಲ. ನಾವು ಸರ್ಕಾರ ಬೀಳಿಸುವ ಕೆಲಸ ಮಾಡಲ್ಲ. ಉಳಿದಿರುವ ಮೂರಕಾಲು ವರ್ಷ ಅವರೇ ಅಧಿಕಾರ ಮಾಡಲಿ. ನೆಮ್ಮದಿಯಾಗಿ ಜನರ ಸೇವೆ ಮಾಡಲಿ ಎಂದು ವ್ಯಂಗ್ಯವಾಡಿದ್ದಾರೆ.
ಕಪಾಲ ಬೆಟ್ಟದಲ್ಲಿ ಏಸು ಪ್ರತಿಮೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಇದರಲ್ಲಿ ಯಾರು ರಾಜಕೀಯ ಬೇಳೆ ಬೇಯಿಸಿಕೊಳ್ಳಬಾರದು. ಯಾರ ಮನಸನ್ನು ನೋಯಿಸಬಾರದು. ಯಾರು ವಿರುದ್ದವಾಗಿ ಚಲೋ ಮಾಡುತ್ತಿದ್ದಾರೆ.? ಮೈಸೂರಿನಲ್ಲಿ ಮಾಜಿ ಸಚಿವ ಸಾ.ರಾ ಮಹೇಶ್ ಪ್ರಶ್ನೆ ಹಾಕಿದ್ದಾರೆ. ಈ ಬಗ್ಗೆ ಕೇಂದ್ರ ಸರ್ಕಾರ ರಾಜ್ಯ ಬಿಜೆಪಿಗೆ ಸೂಚನೆ ನೀಡಬೇಕು. ಜನಪರ ಕೆಲಸ ಬೇಕಾದಷ್ಟು ಇದೆ ಅದನ್ನು ಮಾಡಿ. ಭಾರತದ ದೇಶದಲ್ಲಿಎಲ್ಲಾ ಧರ್ಮದವರು ತಮಗೆ ಬೇಕಾದ ಪ್ರತಿಮೆ ಮಾಡಿಕೊಂಡಿದ್ದಾರೆ. ಇದನ್ನು ರಾಜಕೀಯಗೊಳಿಸಬಾರದು ಎಂದಿದ್ದಾರೆ.
ಮೈಸೂರು ಪಾಲಿಕೆ ಮೇಯರ್ ಉಪಮೇಯರ್ ಚುನಾವಣೆ ವಿಚಾರವಾಗಿ ಮಾತನಾಡಿದ ಅವರು, ಎಲ್ಲವನ್ನು ಸಾ.ರಾ.ಮಹೇಶ್ ನೋಡಿಕೊಳ್ತಾರೆ ಎಂದಿದ್ದ ಜಿಟಿಡಿಗೆ ಸಾ.ರಾ.ಮಹೇಶ್ ಟಾಂಗ್ ಕೊಟ್ಟಿದ್ದಾರೆ. ಎಲ್ಲವನ್ನು ಸಾ.ರಾ.ಮಹೇಶ್ ನೋಡಿಕೊಳ್ಳೋದಕ್ಕೆ ಇದು ಸಾ.ರಾ.ಅಸೋಷಿಯೇಷನ್ ಪ್ರವೈಟ್ ಲಿಮಿಟೆಡ್ ಅಲ್ಲ. ರಾಜ್ಯದ ವರಿಷ್ಠರು ನನಗೆ ಏನು ಜವಬ್ದಾರಿ ಕೊಟ್ಟಿದ್ದಾರೆ ಅದನ್ನ ನಿಭಾಯಿಸುತ್ತಿದ್ದೇನೆ. ಹಿಂದೆ ಮೇಯರ್ ಆದವರೇಲ್ಲರನ್ನು ರಾಜ್ಯ ನಾಯಕರು ಕಳುಹಿಸಿದ ಲಕೊಠೆಯಿಂದ ಬಂದ ಹೆಸರಿನವರೇ. ಈಗಲೂ ನಮ್ಮ ಅಭಿಪ್ರಾಯವನ್ನ ನಾವು ತಿಳಿಸಿದ್ದೇವೆ. ಅಂತಿಮ ತೀರ್ಮಾನ ರಾಜ್ಯದ ವರಿಷ್ಠರಿಗೆ ಬಿಟ್ಟ ವಿಚಾರವಾಗಿದೆ ಎಂದಿದ್ದಾರೆ.
ಜಿಟಡಿರನ್ನ ಆಕ್ಟಿವ್ ಮಾಡಲು ನಮ್ಮ ನಾಯಕರು ಪ್ರಯತ್ನ ಮಾಡುತ್ತಲೆ ಇದ್ದೇವೆ. ಹುಣಸೂರು ಚುನಾವಣೆ ನಂತರ ಅವರನ್ನ ಆಕ್ಟಿವ್ ಮಾಡುವ ಪ್ರಯತ್ನದಲ್ಲಿ ನಾವು ಸ್ವಲ್ಪ ನಿರಾಸಕ್ತಿ ತೋರುತ್ತಿದ್ದೇವೆ. ಯಾವುದೇ ರಾಜಕೀಯ ನಾಯಕನಿಗೆ ಚುನಾವಣೆ ಮುಖ್ಯ ಅದರಲ್ಲೆ ಅವರು ತಟಸ್ಥರಾದ್ರ ಏನ್ ಮಾಡೋದು. ನಮ್ಮ ಪಕ್ಷದ ಸಭೆಗೆಗಳಿಗೆ ಜಿಟಿಡಿಯವರನ್ನ ಕರೆಯುತ್ತಿದ್ದೇವೆ. ಕರೆದ ಸಭೆಗೆ ಬರೋಲ್ಲ ಕರೆಯದ ಸಭೆಗೆ ಕರೆದಿಲ್ಲ ಅಂತಾರೆ. ಈಗಲೂ ಅವರೇ ಮೇಯರ್ ಅಭ್ಯರ್ಥಿಯನ್ನ ಆಯ್ಕೆ ಮಾಡಲಿ. ಸಮಯ ಕೊಡಲಿ ನಾವೇಲ್ಲ ಜಿಟಿಡಿರನ್ನ ಭೇಟಿ ಮಾಡ್ತಿವಿ. ಅವರು ನಮ್ಮ ನಾಯಕರು ಅವರ ಶಕ್ತಿ ನಮ್ಮ ಪಕ್ಷಕ್ಕೆ ಬೇಕು ಎಂದಿದ್ದಾರೆ.

